ಬೆಂಗಳೂರಿನ ರೈಲ್ ವೀಲ್ ಫ್ಯಾಕ್ಟರಿಯಲ್ಲಿ ‘ಅಪ್ರೆಂಟಿಸ್‌ಶಿಪ್‌’

ಐಟಿಐ ಅರ್ಹತೆ

Published on:

ರೈಲ್ವೆ ಸಚಿವಾಲಯದ ಬೆಂಗಳೂರಿನ ರೈಲ್ ವೀಲ್ ಫ್ಯಾಕ್ಟರಿಯಲ್ಲಿ 2025-26ನೇ ಸಾಲಿಗೆ ಅಪ್ರೆಂಟಿಸ್‌ ಕಾಯ್ದೆಯಡಿ ವಿವಿಧ ಟ್ರೇಡ್‌ಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಂಡು ತರಬೇತಿ ನೀಡಲಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟು 192 ಸ್ಥಾನಗಳಿಗೆ ಆಯ್ಕೆ ನಡೆಯಲಿದೆ. ಸಂಬಂಧಿಸಿದ ಆಯಾ ಟ್ರೇಡ್‌ನಲ್ಲಿ ಐಟಿಐ ಹೊಂದಿರುವವರು ಆಸಕ್ತರು ಅಧಿಕೃತ ವೆಬ್‌ಸೈಟ್‌(https://rwf.indianrailways.gov.in/index.jsp?lang=0)ನಲ್ಲಿ ಲಭ್ಯವಿರುವ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿ, ‘ಪ್ರಧಾನ ಮುಖ್ಯ ಸಿಬ್ಬಂದಿ ಅಧಿಕಾರಿ, ಸಿಬ್ಬಂದಿ ಇಲಾಖೆ, ರೈಲ್ ವೀಲ್ ಫ್ಯಾಕ್ಟರಿ, ಯಲಹಂಕ, ಬೆಂಗಳೂರು-560064’ ವಿಳಾಸಕ್ಕೆ ಏ.01ರೊಳಗೆ ತಲುಪಿಸಬೇಕು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಫೆಬ್ರವರಿ 28, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಏಪ್ರಿಲ್ 01, 2026

ಖಾಲಿ ಇರುವ ಹುದ್ದೆಗಳ ವಿವರ:

ಫಿಟ್ಟರ್ – 85 ಹುದ್ದೆಗಳು
ಮೆಷಿನೀಸ್ಟ್ – 31 ಹುದ್ದೆಗಳು
ಮೆಕ್ಯಾನಿಕ್ – 08 ಹುದ್ದೆಗಳು
ಟರ್ನರ್ – 05 ಹುದ್ದೆಗಳು
CNC ಪ್ರೋಗ್ರಾಮಿಂಗ್ ಕಮ್ ಆಪರೇಟರ್ – 23 ಹುದ್ದೆಗಳು
ಎಲೆಕ್ಟ್ರಿಷಿಯನ್ – 18 ಹುದ್ದೆಗಳು
ಎಲೆಕ್ಟ್ರಾನಿಕ್ ಮೆಕ್ಯಾನಿಕ್ – 22 ಹುದ್ದೆಗಳು

ಒಟ್ಟು – 192 ಹುದ್ದೆಗಳು

ತರಬೇತಿ ಅವಧಿ:

CNC ಪ್ರೋಗ್ರಾಮಿಂಗ್ ಕಮ್ ಆಪರೇಟರ್ ಟ್ರೇಡ್‌ಗೆ 6 ತಿಂಗಳ ಅವಧಿಗೆ ತರಬೇತಿ ನೀಡಲಿದೆ. ಇನ್ನುಳಿದ ಟ್ರೇಡ್‌ಗಳಿಗೆ 1 ವರ್ಷದ ಅವಧಿಗೆ ತರಬೇತಿ ನೀಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ಮಂಡಳಿಯಿಂದ 10ನೇ ತರಗತಿ/ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಗೊತ್ತುಪಡಿಸಿದ ಟ್ರೇಡ್ ಗಳಲ್ಲಿ ರಾಷ್ಟ್ರೀಯ ವೃತ್ತಿಪರ ತರಬೇತಿ ಮಂಡಳಿ (NCVT) ನೀಡುವ ರಾಷ್ಟ್ರೀಯ ಟ್ರೇಡ್‌ ಪ್ರಮಾಣಪತ್ರ (NTC) ಅನ್ನು ಹೊಂದಿರಬೇಕು.

ವಯೋಮಿತಿ:

ಕನಿಷ್ಠ ಮಿತಿ – 15 ವರ್ಷಗಳು
ಗರಿಷ್ಠ ಮಿತಿ – 24 ವರ್ಷಗಳು

ವಯೋಮಿತಿ ಸಡಿಲಿಕೆ; ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು.

ಆಯ್ಕೆ ವಿಧಾನ:

  • 10ನೇ ತರಗತಿ ಅಂಕಗಳ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಸ್ಟೈಫಂಡ್:

CNC ಪ್ರೋಗ್ರಾಮಿಂಗ್-ಕಮ್-ಆಪರೇಟರ್‌ ಅಪ್ರೆಂಟಿಸ್‌ ಹುದ್ದೆಗಳಿಗೆ-₹10,899
ಉಳಿದ ಎಲ್ಲಾ ಅಪ್ರೆಂಟಿಸ್‌ ಹುದ್ದೆಗಳಿಗೆ-₹12,261

ಸಂಸ್ಕರಣಾ ಶುಲ್ಕ:

ಎಸ್ಸಿ/ಎಸ್ಟಿ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ – ಶುಲ್ಕವಿರುವುದಿಲ್ಲ
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ₹100

ಅರ್ಜಿ‌ ಸಲ್ಲಿಸುವುದು ಹೇಗೆ..?

• ಮೊದಲಿಗೆ ಅಭ್ಯರ್ಥಿಗಳು RWF ಅಧಿಕೃತ ಜಾಲತಾಣ https://rwf.indianrailways.gov.in/view_detail.jsp?lang=0&dcd=602&id=0,297,310 ಕ್ಕೆ ಭೇಟಿ ನೀಡಿ.

• “2025-26ನೇ ಸಾಲಿಗೆ RWF/YNK ನಲ್ಲಿ ಅಪ್ರೆಂಟಿಸ್ ಕಾಯ್ದೆ, 1961 ರ ಅಡಿಯಲ್ಲಿ ತರಬೇತಿ ಪಡೆಯಲು ಅಭ್ಯರ್ಥಿಗಳ ನೇಮಕಾತಿ” ಲಿಂಕ್ ಮೇಲೆ ಕ್ಲಿಕ್ ಮಾಡಿ ಹುದ್ದೆಯ ಅಧಿಸೂಚನೆ ಹಾಗೂ ಅರ್ಜಿ ನಮೂನೆಯ ಮುದ್ರಣ ತೆಗೆದುಕೊಳ್ಳಿ.

• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಮೂಲ ಮಾಹಿತಿ, ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ, ಸಕ್ರಿಯ ಮೊಬೈಲ್ ಸಂಖ್ಯೆ, ಮಾನ್ಯ ಇ-ಮೇಲ್ ಐಡಿ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.

• ಕವರ್ ಮೇಲೆ “ರೈಲ್ ವೀಲ್ ಫ್ಯಾಕ್ಟರಿಯಲ್ಲಿ 2025-26 ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆ, 1961 ರ ಅಡಿಯಲ್ಲಿ ತರಬೇತಿ ಪಡೆಯಲು ಅರ್ಜಿ” ಎಂದು ನಮೂದಿಸಿ.

• ಈ ಕೆಳಗಿನ ವಿಳಾಸಕ್ಕೆ ಏಪ್ರಿಲ್ 01 ರೊಳಗೆ ಖುದ್ದಾಗಿ ಅಥವಾ ಪೋಸ್ಟ್ ಮೂಲಕ ತಲುಪುವಂತೆ ಕಳುಹಿಸಬೇಕು.

ವಿಳಾಸ: ಪ್ರಧಾನ ಮುಖ್ಯ ಸಿಬ್ಬಂದಿ ಅಧಿಕಾರಿ, ಸಿಬ್ಬಂದಿ ಇಲಾಖೆ, ರೈಲ್ ವೀಲ್ ಫ್ಯಾಕ್ಟರಿ, ಯಲಹಂಕ, ಬೆಂಗಳೂರು-560064

Important Direct Links:

Official Notification and Application Form PDFDownload
Official Websiterwf.indianrailways.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment