ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO)ಯಡಿ ಬರುವ ಪ್ರಮುಖ ಸಂಶೋಧನಾ ಪ್ರಯೋಗಾಲಯವಾಗಿರುವ ರಕ್ಷಣಾ ಎಲೆಕ್ಟ್ರಾನಿಕ್ಸ್ ಸಂಶೋಧನಾ ಪ್ರಯೋಗಾಲಯ (DLRL)ನಲ್ಲಿ ಅಪ್ರೆಂಟಿಸ್ಶಿಪ್ ಕಾಯ್ದೆಯಡಿ ಅಪ್ರೆಂಟಿಸ್ ತರಬೇತಿಗೆ ಅಭ್ಯರ್ಥಿಗಳ ಆಯ್ಕೆಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.
ಪದವೀಧರ (ತಾಂತ್ರಿಕ ಮತ್ತು ತಾಂತ್ರಿಕೇತರ), ತಂತ್ರಜ್ಞ ಅಪ್ರೆಂಟಿಸ್ ಒಟ್ಟು 46 ಅಪ್ರೆಂಟಿಸ್ ತರಬೇತಿಗೆ ಅಭ್ಯರ್ಥಿಗಳನ್ನು ವಾಕ್-ಇನ್ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ. ಸದರಿ ಅಪ್ರೆಂಟಿಸ್ ತರಬೇತಿಗಳಿಗೆ ಸೇರ ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ https://nats.education.gov.inನ ಮೂಲಕ ನೋಂದಾಯಿಸಿಕೊಂಡು, ನಿಗದಿತ ವಿಳಾಸದಲ್ಲಿ ನಡೆಯುವ ವಾಕ್-ಇನ್-ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ.
✓ ಪದವೀಧರ (ತಾಂತ್ರಿಕ) ಅಪ್ರೆಂಟಿಸ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಬಿ.ಇ/ಬಿ.ಟೆಕ್ ಪದವಿ ಪೂರ್ಣಗೊಳಿಸಿರಬೇಕು.
✓ ತಂತ್ರಜ್ಞ ಅಪ್ರೆಂಟಿಸ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಡಿಪ್ಲೋಮಾ/ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.
✓ಪದವೀಧರ (ತಾಂತ್ರಿಕೇತರ) ಅಪ್ರೆಂಟಿಸ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಬಿ.ಕಾಂ/ಬಿಎಸ್ಸಿ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ರಿಸರ್ಚ್ ಅಂಡ್ ಲ್ಯಾಬೋರೇಟರಿ (DLRL)ನ ನಿಯಮಗಳ ಪ್ರಕಾರ.
ಆಯ್ಕೆ ಪ್ರಕ್ರಿಯೆ:
ಸಂದರ್ಶನ ದಾಖಲೆ ಪರಿಶೀಲನೆ
ಸ್ಟೈಫಂಡ್:
ಆಯ್ಕೆಯಾದ ಅಭ್ಯರ್ಥಿಗಳಿಗೆ ಪದವೀಧರ (ತಾಂತ್ರಿಕ) ಅಪ್ರೆಂಟಿಸ್ ಗಳಿಗೆ 12,300ರೂ., ತಂತ್ರಜ್ಞ ಅಪ್ರೆಂಟಿಸ್ ಗಳಿಗೆ 10,900ರೂ. ಹಾಗೂ ಪದವೀಧರ (ತಾಂತ್ರಿಕೇತರ) ಅಪ್ರೆಂಟಿಸ್ ಗಳಿಗೆ 12,300ರೂ. ವರೆಗೆ ಮಾಹೆಯಾನ ಸ್ಟೈಫಂಡ್ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ, ಓಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – ಉಲ್ಲೇಖಿಸಲಾಗಿರುವುದಿಲ್ಲ. ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – ಉಲ್ಲೇಖಿಸಲಾಗಿರುವುದಿಲ್ಲ.
ವಾಕ್-ಇನ್ ಸಂದರ್ಶನಕ್ಕೆ ನೋಂದಣಿ ಮಾಡಿಕೊಳ್ಳುವ ವಿಧಾನ
ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು NATS 2.0 ಪೋರ್ಟಲ್ https://nats.education.gov.inನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.
• ಅಭ್ಯರ್ಥಿಗಳು NATS ನೋಂದಣಿಯನ್ನು 100% KYC ಯೊಂದಿಗೆ ಖಚಿತಪಡಿಸಿಕೊಳ್ಳಬೇಕು ಹಾಗೂ ಅಭ್ಯರ್ಥಿಯ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸೀಡಿಂಗ್ ಮತ್ತು ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ.
• ನೋಂದಣಿಯಾದ ಬಳಿಕಎಲ್ಲಾ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರಗಳು (ಮೂಲ), ಪ್ರತಿ (ಒಂದು ಪ್ರತಿ) ಮತ್ತು ಮೀಸಲಾತಿಯ ಸಂದರ್ಭದಲ್ಲಿ ಇತರ ಪ್ರಮಾಣಪತ್ರಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿಕೊಂಡು ವಾಕ್-ಇನ್ ಸಂದರ್ಶನಕ್ಕೆ ಹಾಜರಾಗಬೇಕು.
ವಾಕ್-ಇನ್ ಸಂದರ್ಶನದ ದಿನಾಂಕ, ಸಮಯ ಮತ್ತು ಸ್ಥಳ: ಅಭ್ಯರ್ಥಿಗಳಿಗೆ 2025ರ ಡಿಸೆಂಬರ್ 22 ಹಾಗೂ 23 ರಂದು ಬೆಳಗ್ಗೆ 9.30 ರಿಂದ 11 ಗಂಟೆಯವರೆಗೆ ಈ ಕೆಳಗೆ ನೀಡಲಾಗಿರುವ ವಿಳಾಸದಲ್ಲಿ ವಾಕ್-ಇನ್ ಸಂದರ್ಶನವನ್ನು ನಡೆಸಲಾಗುತ್ತದೆ.
ವಿಳಾಸ: ರಕ್ಷಣಾ ಎಲೆಕ್ಟ್ರಾನಿಕ್ಸ್ ಸಂಶೋಧನಾ ಪ್ರಯೋಗಾಲಯ (DLRL), ಚಂದ್ರಾಯನಗುಟ್ಟ, ಹೈದರಾಬಾದ್ – 500005