ಜಂಟಿ ನೆಟ್‌ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ

ಡಿ.18ಕ್ಕೆ ಸಿಬಿಟಿ ಪರೀಕ್ಷೆ

Published on:

ಡಿಸೆಂಬರ್ 2025ರ ಜಂಟಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(CSIR) ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಭಾನುವಾರ ಬಿಡುಗಡೆ ಮಾಡಿದೆ.

ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ)ಯು ಡಿ.18ರಂದು ಮೊದಲ ಶಿಫ್ಟ್‌ ಬೆಳಗ್ಗೆ 9 ರಿಂದ ಮಧ್ಯಾಹ್ನ 12ರವೆರೆಗೆ ಜೀವ ವಿಜ್ಞಾನ, ಭೂ ವಾತಾವರಣ, ಸಾಗರ ಮತ್ತು ಗ್ರಹ ವಿಜ್ಞಾನ ವಿಷಯಗಳ ಕುರಿತು ಹಾಗೂ ಎರಡನೇ ಶಿಫ್ಟ್‌ ಮಧ್ಯಾಹ್ನ 3 ರಿಂದ ಸಂಜೆ 6ವರೆಗೆ ರಾಸಾಯನಿಕ ವಿಜ್ಞಾನ, ಗಣಿತ ವಿಜ್ಞಾನ, ಭೌತ ವಿಜ್ಞಾನ ವಿಷಯಾಧಾರಿತ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ಜಾಲತಾಣದ ಲಿಂಕ್‌ https://csirnet.nta.nic.in/admit-card-for-joint-csir-ugc-net-dec-2025-is-live/ಗೆ ಭೇಟಿ ನೀಡಿ ಪ್ರವೇಶ ಪತ್ರ ಡೌನ್ಲೋಡ್‌ ಮಾಡಿಕೊಳ್ಳಬಹುದು.

ಜಂಟಿ CSIR ಯುಜಿಸಿ ನೆಟ್‌ ಪರೀಕ್ಷೆ 2025ರ ಪ್ರವೇಶ ಪತ್ರ ಹೇಗೆ ಡೌನ್ಲೋಡ್‌ ಮಾಡುವುದು?

ಹಂತ-1 ಅಧಿಕೃತ ವೆಬ್‌ಸೈಟ್‌ https://csirnet.nta.nic.in/ಗೆ ಭೇಟಿ

ಹಂತ-2 ಮುಖಪುಟದಲ್ಲಿ “Latest News” ಶಿರ್ಷೀಕೆಯಡಿ ನೀಡಲಾದ “Admit Card for Joint CSIR-UGC NET DEC 2025 is LIVE!” ಲಿಂಕ್‌ ಒತ್ತಿ, ಈ ಪುಟದಲ್ಲಿ ಲಭ್ಯವಿರುವ “Admit Card for Joint CSIR-UGC NET DEC 2025” ಶಿರ್ಷೀಕೆಯ ಲಿಂಕ್‌ ಮೇಲೆ ಒತ್ತಿ.

ಹಂತ-3 ಮುಂದೆ ನಿಮ್ಮ ಅಪ್ಲಿಕೇಶನ್‌ ಸಂಖ್ಯೆ, ಪಾಸ್ವರ್ಡ್‌ ಮತ್ತು ಭದ್ರತಾ ಪಿನ್‌ ಹಾಕಿ ಲಾಗಿನ್‌ ಮಾಡಿಕೊಂಡು ಪ್ರವೇಶ ಪತ್ರ ಡೌನ್ಲೋಡ್‌ ಮಾಡಿಕೊಳ್ಳಬಹುದು.

Important Direct Links:

Joint CSIR UGC NET December 2025 Admit Card LinkLogin Now
Official Websitecsirnet.nta.nic.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment