ದಾವಣಗೆರೆ: ಜಿಲ್ಲೆ ವ್ಯಾಪ್ತಿಯ ಹರಿಹರ ನಗರಸಭೆಗೆ 04 ಪೌರಕಾರ್ಮಿಕರ ನೇಮಕಾತಿಗಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶ ಅಧಿಸೂಚನೆ ಹೊರಡಿಸಿದೆ.
ಅರ್ಜಿ ಸಲ್ಲಿಸಲು ಏ.10ರವರೆಗೆ ಕಾಲಾವಕಾಶವಿದೆ. ಕನ್ನಡ ಮಾತನಾಡಲು ಬರುವ ಆಸಕ್ತ ಉದ್ಯೋಗಾಕಾಂಕ್ಷಿಗಳು ಹರಿಹರ ನಗರಸಭೆ ಕಚೇರಿಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ, ಅರ್ಜಿ ಸಲ್ಲಿಕೆ ಮಾಡಬಹುದು.
ಸದರಿ ಹುದ್ದೆಗೆ ಯಾವುದೇ ವಿದ್ಯಾರ್ಹತೆ ಅನ್ವಯಿಸುವುದಿಲ್ಲ ಹಾಗೂ ಅಭ್ಯರ್ಥಿಗಳಿಗೆ ಕನ್ನಡ ಮಾತನಾಡಲು ತಿಳಿದಿರಬೇಕು.
ಅರ್ಜಿದಾರರ ಗಮನಕ್ಕೆ; ಪ್ರಸ್ತುತ ಕೆಲಸ ನಿರ್ವಹಿಸುತ್ತಿರುವ ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಹ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ವಯೋಮಿತಿ:
ಕನಿಷ್ಠ ಮಿತಿ 18 ವರ್ಷಗಳು ಗರಿಷ್ಠ ಮಿತಿ 55 ವರ್ಷಗಳು
ಆಯ್ಕೆ ವಿಧಾನ:
ದಾವಣಗೆರೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನಿಯಮಗಳ ಅನುಸಾರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಸಂಬಳ:
ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಅನುಸಾರ ಪ್ರತಿ ತಿಂಗಳು ₹27,000 ಗಳಿಂದ ₹46,675 ವರೆಗೆ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಅರ್ಜಿ ಸಲ್ಲಿಕೆ ಹೇಗೆ.?
• ಮೇಲಿನ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹರಿಹರ ನಗರಸಭೆ ಕಚೇರಿಯಲ್ಲಿ ಅರ್ಜಿ ನಮೂನೆಯನ್ನು ಪಡೆದು.
• ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವ ವಿವರ, ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಸಹಿ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
• ಅರ್ಜಿಯನ್ನು *ಅಧ್ಯಕ್ಷರು, ಪೌರಕಾರ್ಮಿಕರ ನೇರ ನೇಮಕಾತಿ (ವಿಶೇಷ) ಆಯ್ಕೆ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳು, ದಾವಣಗೆರೆ ಜಿಲ್ಲೆ* ರವರ ಹೆಸರಿಗೆ, ಹರಿಹರ ನಗರಸಭೆ ಪೌರಾಯುಕ್ತರ ಮುಖಾಂತರ ಏಪ್ರಿಲ್ 10 ರೊಳಗೆ ಸಲ್ಲಿಸಬಹುದು.