RRB ALP CEN 01/2025; ಸಿಬಿಟಿ-Iರ ಕೀ ಉತ್ತರ ಪ್ರಕಟ

Published on:

Updated On:

ರೈಲ್ವೆ ನೇಮಕಾತಿ ಮಂಡಳಿಯು(RRB) ಸಿಎಎನ್‌ ಸಂಖ್ಯೆ 01/2025ರಡಿ ಅಧಿಸೂಚಿತ ಸಹಾಯಕ ಲೋಕೋ ಪೈಲೆಟ್(ALP) ಹುದ್ದೆಗಳ ನೇಮಕಾತಿಗಾಗಿ ಫೆ.13 ರಿಂದ 18 ಹಾಗೂ ಮಾ.11ರಂದು ನಡೆಸಲಾದ ಕಂಪ್ಯೂಟರ್‌ ಆಧಾರಿತ ಪರೀಕ್ಷೆ-Iರ ಕೀ ಉತ್ತರವನ್ನು ಮಾ.20ರಂದು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

ಪ್ರಕಟಿತ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಮಾ.26ರೊಳಗೆ ಪ್ರತಿ ಪ್ರಶ್ನೆಗೆ ₹50 ಶುಲ್ಕರಂತೆ ಜೊತೆಗೆ ಬ್ಯಾಂಕ್ ಸೇವಾ ಶುಲ್ಕ ಭರಿಸುವ ಮೂಲಕ ಸಲ್ಲಿಸಬಹುದು. ಕೀ ಉತ್ತರವನ್ನು ಆಯಾ ಆರ್‌ಆರ್‌ಬಿಯ ಅಧಿಕೃತ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281ದಲ್ಲಿ ನೀಡಲಾದ ಲಿಂಕ್‌ ಮೂಲಕ ಪರಿಶೀಲನೆ ಮಾಡಬಹುದು.

ಕೀ ಉತ್ತರ ವೀಕ್ಷಣೆ ಹಾಗೂ ಆಕ್ಷೇಪಣೆ ಸಲ್ಲಿಸುವ ವಿಧಾನ

• ಮೊದಲಿಗೆ ಅಭ್ಯರ್ಥಿಗಳು RRB ಅಧಿಕೃತ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281 ಕ್ಕೆ ಭೇಟಿ ನೀಡಿ.

• ನಿಮ್ಮ ಸಂಬಂಧಿತ ಅಥವಾ ನೀವು ಅರ್ಜಿ ಸಲ್ಲಿಸಿದ ಆರ್‌ಆರ್‌ಬಿ ಅಧಿಕೃತ ಜಾಲತಾಣವನ್ನು ಆಯ್ಕೆ ಮಾಡಿ.

• ಬಳಿಕ “CEN 01/2025-ಸಹಾಯಕ ಲೋಕೋ ಪೈಲಟ್ (ALP)” ಶೀರ್ಷಿಕೆಯ ಕೆಳಗೆ ನೀಡಲಾಗಿರುವ *ಪ್ರಶ್ನೆ ಪತ್ರಿಕೆ, ಪ್ರತಿಕ್ರಿಯೆಗಳು ಮತ್ತು ಕೀ ಉತ್ತರಗಳನ್ನು ವೀಕ್ಷಿಸುವ ಕುರಿತು ಸೂಚನೆ ಮತ್ತು ಪ್ರಶ್ನೆಗಳು/ಆಯ್ಕೆಗಳು/ಕೀಲಿಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸುವುದು ಇಲ್ಲಿ ಕ್ಲಿಕ್ ಮಾಡಿ* ಆಯ್ಕೆಯನ್ನು ಆರಿಸಿ. (ಅಥವಾ ನೇರವಾಗಿ https://rrb.digialm.com/EForms/configuredHtml/33128/97789/login.htmlಗೆ ಭೇಟಿ ನೀಡಿ)

• ನಂತರ ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ಲಾಗಿನ್ ಆಗಿ.

• “CEN 01/2025-ಸಹಾಯಕ ಲೋಕೋ ಪೈಲಟ್ (ALP)” ಪ್ರಶ್ನೆ ಪತ್ರಿಕೆ, ಪ್ರತಿಕ್ರಿಯೆಗಳು ಮತ್ತು ಕೀ ಉತ್ತರಗಳನ್ನು ಪರಿಶೀಲಿಸಿ.

• ಸದರಿ ಪ್ರಕಟಿತ ಕೀ ಉತ್ತರಗಳಲ್ಲಿ ಆಕ್ಷೇಪಣೆಗಳಿದ್ದಲ್ಲಿ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಕೆಯ ಲಿಂಕ್ ಮೂಲಕ ಆಕ್ಷೇಪಣೆ ಸಲ್ಲಿಕೆಯ ನಿಗದಿತ ಶುಲ್ಕವನ್ನು ಪಾವತಿಸಿ ಸಲ್ಲಿಸಬಹುದು.

Important Direct Links:

Notice PDF(Dated On 18/03/2026)Download
RRB ALP CEN 01/2025 CBT 1 Answer Key 2026 Check LinkLogin Now
Official WebsiteRRBs
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

1 thought on “RRB ALP CEN 01/2025; ಸಿಬಿಟಿ-Iರ ಕೀ ಉತ್ತರ ಪ್ರಕಟ”

Leave a Comment