ಕಲಬುರಗಿ: ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿನ ಕೆಕೆ ಮತ್ತು ಎನ್.ಕೆ.ಕೆ ವೃಂದದ ಕಿರಿಯ ಪವರ್‌ಮ್ಯಾನ್ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಗುವಿಸಕಂಪನಿ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ.16 ರಿಂದ ಜೂ.19ರವರೆಗೆ ಅಧಿಸೂಚಿತ ಹುದ್ದೆಗಳಿಗೆ 1:5ರ ಅನುಪಾತದಲ್ಲಿನಡೆಸಲಾದ ಸಹನ ಶಕ್ತಿ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಟ್-ಆಪ್ (Cut-Off) ಅಂಕಗಳೊಂದಿಗೆ ಅಂತರ್ಜಾಲದಲ್ಲಿ ಅ.17ರಂದು ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಅ.28ರವರೆಗೆ ಅವಕಾಶ ನೀಡಲಾಗಿತ್ತು. ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಗುವಿಸಕಂಪನಿ ಜಾಲತಾಣ https://gescom.karnataka.gov.in/ದಲ್ಲಿ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಪರಿಶೀಲಸಲು ಕೋರಲಾಗಿದೆ.
ಗುವಿಸಕಂಪನಿ ಕಿರಿಯ ಪವರ್‌ಮ್ಯಾನ್ ಅಂತಿಮ ಆಯ್ಕೆ ಪಟ್ಟಿ ಡೌನ್ಲೋಡ್ ಮಾಡುವುದು ಹೇಗೆ?
• ಗುವಿಸಕಂಪನಿಯ ಅಧಿಕೃತ ವೆಬ್ಸೈಟ್ https://gescom.karnataka.gov.in/171/junior-lineman-recruitment/knಗೆ ಭೇಟಿ ನೀಡಿ.
• ಜೂನಿಯರ್ ಲೈನ್ಮ್ಯಾನ್ ನೇಮಕಾತಿ – ವಿವರಗಳು ವಿಭಾಗದಲ್ಲಿ ಕೆಳಗೆ ನೀಡಲಾಗಿರುವ;
↳ ಕಿರಿಯ ಪವರ್‌ಮ್ಯಾನ್ (ಎನ್.ಕೆ.ಕೆ) ಹುದ್ದೆಯ ಕಟ್-ಅಫ್ ಅಂಕಗಳ ಪಟ್ಟಿ ಮತ್ತು ಅಂತಿಮ ಆಯ್ಕೆ ಪಟ್ಟಿ. ↳ ಕಿರಿಯ ಪವರ್‌ಮ್ಯಾನ್ (ಕೆ.ಕೆ) ಹುದ್ದೆಯ ಕಟ್-ಅಫ್ ಅಂಕಗಳ ಪಟ್ಟಿ ಮತ್ತು ಅಂತಿಮ ಆಯ್ಕೆ ಪಟ್ಟಿ
Download Process Of Gescom Junior Powerman Final Selection List 2025
• ಮುಂದೆ ನೀಡಲಾದ “ಇಲ್ಲಿ ಕ್ಲಿಕ್ ಮಾಡಿ” ಮೇಲೆ ಒತ್ತುವ ಮೂಲಕ ಅಂತಿಮ ಆಯ್ಕೆ ಪಟ್ಟಿಯ ಜೊತೆಗೆ ಕಟ್-ಅಫ್ ಅಂಕಗಳ ಪಟ್ಟಿ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಪರಿಶೀಲಿಸಿ.
ನಾನು 2021 ರಿಂದ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ತೊಡಗಿಕೊಂಡಿರುವೆ. ನಿಮಗೆ ಮಾಹಿತಿ(ಸುದ್ದಿ)ಯನ್ನು ತಲುಪಿಸುವ ಕಾರ್ಯ ಮಾಡುವುದೇ ನನ್ನ ಧ್ಯೇಯ. ಮಾಹಿತಿ ತಲುಪಿಸುವುದರ ಜೊತೆಗೆ ನಾನು ಕೂಡಾ ಹೊಸ ಹೊಸ ಮಾಹಿತಿಯನ್ನು ತಿಳಿದುಕೊಂಡಿದ್ದೇನೆ. ಈಗಲೂ ತಿಳಿದುಕೊಳ್ಳುತ್ತಲೇ ಇದ್ದೇನೆ. ನಿರಂತರ ಕಲಿಕೆಯಲ್ಲಿ ದೋಣಿ ಸಾಗುತ್ತಿದೆ.ಸದ್ಯ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪ್ರಗತಿಯಲ್ಲಿದೆ.....