Govt Apps List: ಸರ್ಕಾರದ ಈ 5 ಮೊಬೈಲ್ ಆಪ್ ಗಳ ಉಪಯೋಗ ಗೊತ್ತೇ?, ಈಗಲೇ ತಿಳಿದುಕೊಳ್ಳಿ!

By ಕರ್ನಾಟಕ ಹೆಲ್ಪ್ ಡೆಸ್ಕ್

Published On:

IST

ಫಾಲೋ ಮಾಡಿ

Best Govt Apps
Govt Apps

Best Govt Apps List: ಪ್ರಸ್ತುತ ಜಗತ್ತಿನಲ್ಲಿ ಎಲ್ಲವೂ ಆನ್ಲೈನ್ ಮಯವಾಗಿದೆ. ಮೊದಲು ದಾಖಲೆಗಳನ್ನು ಪತ್ರಗಳ ಮೂಲಕ ಅಧಿಕಾರಿಗಳ ಗೆಜೆಟೆಡ್ ಸಹಿಯೊಂದಿಗೆ ಸಂಗ್ರಹಿಸಲಾಗುತ್ತಿತ್ತು. ಆದರೆ ಈಗ ನಮ್ಮ ಕಿರುಬೆರಳಲ್ಲಿಯೇ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ಸಂಗ್ರಹಿಸಬಹುದಾಗಿದೆ.

ಮೊಬೈಲ್ ನಲ್ಲಿ ಈ ಐದು ಆಪ್ ಗಳು ಇದ್ದರೆ ಸಾಕು ನಿಮ್ಮ ಹಣ ಹಾಗೂ ಸಮಯ ಎರಡನ್ನು ಉಳಿಸಬಹುದು. ನಿಮ್ಮ ಎಲ್ಲಾ ಪ್ರಮುಖ ದಾಖಲೆಗಳಾದ ಶೈಕ್ಷಣಿಕಪ್ರಮಾಣ ಪತ್ರಗಳು, ಪಡಿತರ ಚೀಟಿ, ಆಧಾರ್ ಕಾರ್ಡ್, ಚಾಲನಾ ಪರವಾನಗಿ, ವಾಹನ ನೋಂದಣಿ ಪ್ರಮಾಣ ಪತ್ರಗಳು ಹಾಗೂ ಇತರೆ ಪ್ರಮುಖ ದಾಖಲಾತಿಗಳನ್ನು ಡಿಜಿಟಲ್ ಆಪ್ ಗಳ ಮೂಲಕ ಸಂಗ್ರಹಿಸಬಹುದು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೆ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

ಮುಖ್ಯವಾಗಿ ನಿಮ್ಮ ಮೊಬೈಲ್ ನಲ್ಲಿ ಇರಲೇಬೇಕಾದ ಐದು ಆಪ್ ಗಳು

  • Digilaocker (ಡಿಜಿಲಾಕರ್)
  • RBI direct APP (ಆರ್ ಬಿ ಐ ಡೈರೆಕ್ಟ್ ಆಪ್)
  • M Parivahan ( ಎಂ ಪರಿವಾಹನ್)
  • Digi yaathra (ಡಿಜಿ ಯಾತ್ರ)
  • Annual Information Statement -AIS (ಅನುಯಲ್ ಇಂಫಾರ್ಮೇಷನ್ ಸ್ಟೇಟ್ಮೆಂಟ್)

Digilaocker (ಡಿಜಿಲಾಕರ್) ಆಪ್

ಡಿಜಿಲಾಕ‌ರ್ ಆಪ್ ಒಂದು ಡಿಜಿಟಲ್ ಡಾಕ್ಯುಮೆಂಟ್ ರೆಪೊಸಿಟರಿ ಮತ್ತು ಹಂಚಿಕೆ ವ್ಯವಸ್ಥೆಯಾಗಿದ್ದು, ಅದು ಕಾಗದ ಆಧಾರಿತ ದಸ್ತಾವೇಜನ್ನು ತೆಗೆದುಹಾಕಲು ಮತ್ತು ಸುರಕ್ಷಿತ ಆನ್‌ಲೈನ್‌ ಆಯ್ಕೆಯನ್ನು ನೀಡುತ್ತದೆ.

ಡಿಜಿಲಾಕರ್‌ನಲ್ಲಿ ಆಧಾರ್ ಕಾರ್ಡ್, ಚಾಲನಾ ಪರವಾನಗಿ ಮತ್ತು ಶೈಕ್ಷಣಿಕ ಪ್ರಮಾಣಪತ್ರಗಳು, ಪ್ಯಾನ್ ಕಾರ್ಡ್ ಇತರೆ ಅತ್ಯಮೂಲ್ಯ ದಾಖಲಾತಿಗಳನ್ನು ಡಿಜಿಟಲ್ ರೂಪದಲ್ಲಿ ಒದಗಿಸುತ್ತದೆ.

ಇದು ಡಿಜಿಟಲ್ ವೇದಿಕೆಯಾಗಿದ್ದು ಜನರು ಎಲೆಕ್ಟ್ರಾನಿಕ್ ದಾಖಲೆಗಳಿಗೆ ಸಹಿ ಮಾಡಿ ನಂತರ ಅವುಗಳನ್ನು ನೇರವಾಗಿ ಸರ್ಕಾರಿ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬಹುದು. ಇದು ನಿಮ್ಮ ವೈಯಕ್ತಿಕ ಡೇಟಾವನ್ನು ಸುರಕ್ಷಿತವಾಗಿರಿಸುತ್ತದೆ.

RBI Direct APP (ಆರ್ ಬಿ ಐ ಡೈರೆಕ್ಟ್ ಆಪ್)

ಭಾರತೀಯ ರಿಸರ್ವ್ ಬ್ಯಾಂಕ್ (RBI) ಆರ್ ಬಿ ಐ ಡೈರೆಕ್ಟ್ ಆಪ್ ಮುಖಾಂತರ ಚಿಲ್ಲರೆ ಹೂಡಿಕೆದಾರರಿಗೆ ಚಿಲ್ಲರೆ ನೇರ ವೇದಿಕೆಗೆ ಸುಗಮ ಮತ್ತು ಅನುಕೂಲಕರ ಪ್ರವೇಶವನ್ನು ಒದಗಿಸಲು ಮತ್ತು ಸರ್ಕಾರಿ ಭದ್ರತೆಗಳಲ್ಲಿ (G-Secs) ವಹಿವಾಟುಗಳನ್ನು ಸುಲಭಗೊಳಿಸಲು ಚಿಲ್ಲರೆ ನೇರ ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸಲಾಗಿದೆ.

ಚಿಲ್ಲರೆ ಹೂಡಿಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಮೊಬೈಲ್ ಅಪ್ಲಿಕೇಶನ್ ಬಳಸಿ ಜಿ-ಸೆಕ್‌ಗಳಲ್ಲಿ ವಹಿವಾಟು ನಡೆಸಬಹುದು.

ಈ ಅಪ್ಲಿಕೇಶನ್ ಮೂಲಕ, ಒಬ್ಬರು ಬಾಂಡ್ ಹರಾಜಿನ ಮೂಲಕ ಪ್ರಾಥಮಿಕ ಮಾರುಕಟ್ಟೆಗಳಲ್ಲಿ ಮತ್ತು RBI ನ ವ್ಯಾಪಾರ ವ್ಯವಸ್ಥೆಯಾದ NDS OM ಮೂಲಕ ದ್ವಿತೀಯ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಬಹುದು.

M Parivahan ( ಎಂ ಪರಿವಾಹನ್) ಆಪ್

ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೊಬೈಲ್ ಅಪ್ಲಿಕೇಶನ್ ಮುಖಾಂತರ ಸಾರಿಗೆ ಮತ್ತು ವಾಹನ ದಾಖಲಾತಿಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಪಡೆಯಲು M Parivahan ಡಿಜಿಟಲ್ ವೇದಿಕೆಯನ್ನು ಪರಿಚಯಿಸಲಾಗಿದೆ.

ವಾಹನ ನೋಂದಣಿ ವಿವರಗಳು ಮತ್ತು ಚಾಲನಾ ಪರವಾನಗಿ ಮಾಹಿತಿಗೆ ಸುಲಭ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಒದಗಿಸುತ್ತದೆ.

ಪ್ರಯಾಣದಲ್ಲಿರುವಾಗ ವಾಹನ ಮತ್ತು ಚಾಲಕರ ವಿವರಗಳನ್ನು ತ್ವರಿತವಾಗಿ ಪರಿಶೀಲಿಸಲು ಅನುಮತಿಸುತ್ತದೆ.

ವಾಹನ ನೋಂದಣಿ ವಿವರಗಳು, ಚಾಲನಾ ಪರವಾನಗಿ ಮಾಹಿತಿ, ವರ್ಚುವಲ್‌ ಆರ್‌ಸಿ ಮತ್ತು ಡಿಎಲ್ ರಚನೆ, ದಾಖಲೆ ಅಪ್‌ಲೋಡ್ ಸೌಲಭ್ಯ ಮತ್ತು ಇ-ಚಲನ್ ಸ್ಥಿತಿ ಪರಿಶೀಲನೆಗಳು ಸೇರಿದಂತೆ ಇತರೆ ಮಾಹಿತಿಯನ್ನು ಒದಗಿಸುತ್ತದೆ.

Digi Yatra (ಡಿಜಿ ಯಾತ್ರ) ಆಪ್

ನಾಗರಿಕ ವಿಮಾನಯಾನ ಸಚಿವಾಲಯ ಅಭಿವೃದ್ಧಿಪಡಿಸಿರುವ ಡಿಜಿ ಯಾತ್ರ ಆಪ್ ಕಾಗದರಹಿತ ವಿಮಾನ ಪ್ರಯಾಣದ ಅನುಭವವನ್ನು ನೀಡುತ್ತದೆ.

ಡಿಜಿಯಾತ್ರ ಅಪ್ಲಿಕೇಶನ್‌ನಲ್ಲಿ ಬೋರ್ಡಿಂಗ್ ಪಾಸ್ ಅನ್ನು ತೋರಿಸುವುದರಿಂದ ಆಯ್ದ ಭಾರತೀಯ ವಿಮಾನ ನಿಲ್ದಾಣಗಳ ವಿವಿಧ ಚೆಕ್‌ಪಾಯಿಂಟ್‌ಗಳಲ್ಲಿ ಯಾವುದೇ ದಾಖಲೆಯನ್ನು ತೋರಿಸುವ ಅಗತ್ಯವಿಲ್ಲದೆ ನಿಮ್ಮ ಗುರುತನ್ನು ಪರಿಶೀಲಿಸಬಹುದು.

Annual Information Statement ಅನುಯಲ್ ಇಂಫಾರ್ಮೇಷನ್ ಸ್ಟೇಟ್ಮೆಂಟ್ ಆಪ್

ತೆರಿಗೆದಾರರು ತೆರಿಗೆಗೆ ಸಂಬಂಧಿಸಿದ ಮಾಹಿತಿಯ ಸಮಗ್ರ ನೋಟವನ್ನು ಪಡೆಯಲು ಸಹಾಯ ಮಾಡಲು, ಆದಾಯ ತೆರಿಗೆ ಇಲಾಖೆಯು ತನ್ನ ಇ-ಫೈಲಿಂಗ್‌ ಪೋರ್ಟಲ್‌ನಲ್ಲಿ ಅನುಯಲ್ ಇಂಫಾರ್ಮೇಷನ್ ಸ್ಟೇಟ್ಮೆಂಟ್ ಆಪ್ ಪ್ರಾರಂಭಿಸಿದೆ.

ಇದು ತೆರಿಗೆದಾರರಿಗೆ ಅವರ ಹಣಕಾಸಿನ ವಹಿವಾಟುಗಳ ಕುರಿತು ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ ಹಾಗೂ ತೆರಿಗೆದಾರರು ಒದಗಿಸಿದ ಮಾಹಿತಿಯ ಕುರಿತು ಪ್ರತಿಕ್ರಿಯೆಯನ್ನು ಸಲ್ಲಿಸಲು ಸಹ ಅನುಮತಿಸುತ್ತದೆ.

ಆಪ್ ಗಳನ್ನು ಡೌನ್ ಲೋಡ್ ಮಾಡುವ ವಿಧಾನ

ಗೂಗಲ್ ಆಂಡ್ರಾಯ್ಡ್ ಬಳಸುವವರು ಪ್ಲೇ ಸ್ಟೋರ್‌ನಿಂದ ಮತ್ತು ಐಫೋನ್ ಐಒಎಸ್ ಬಳಸುವವರು ಆಪ್‌ ಸ್ಟೋರ್‌ನಿಂದ ಅಪ್ಲಿಕೇಶನ್ ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ KarnatakaHelp.in ಗೆ ಭೇಟಿ ನೀಡಿ

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

For Feedback - admin@karnatakahelp.in

Leave a Comment