IAF Agniveer Vayu Musician Rally 2025: ಸಂಗೀತಗಾರ ನೇಮಕಾತಿ, ಇಲ್ಲಿದೆ ಡೀಟೇಲ್ಸ್

By ಕರ್ನಾಟಕ ಹೆಲ್ಪ್ ಡೆಸ್ಕ್

Published On:

IST

ಫಾಲೋ ಮಾಡಿ

IAF Agniveer Vayu Musician Rally 2025 Notification
IAF Agniveervayu Musician Rally 2025

ಭಾರತೀಯ ವಾಯುಪಡೆಯು ಅಗ್ನಿವೀರ್ ವಾಯು ಸಂಗೀತಗಾರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ(AGNIVEERVAYU INTAKE 01/2026)ಯನ್ನು ಹೊರಡಿಸಿದೆ. ಅಗ್ನಿವೀರ್ವಾಯು ಸಂಗೀತಗಾರ ನೇಮಕಾತಿ ರ‍್ಯಾಲಿ 2025 ರಲ್ಲಿ ಭಾಗವಹಿಸಲು ಅವಿವಾಹಿತ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ವಾಯುಪಡೆಯು ಅಗ್ನಿಪಥ್ ಯೋಜನೆಯಡಿಯಲ್ಲಿ 4 ವರ್ಷಗಳ ಕಾಲ ಭಾರತೀಯ ವಾಯುಪಡೆಯ ಬ್ಯಾಂಡ್‌ನಲ್ಲಿ ಅಗ್ನಿವೀರ್ ವಾಯು (ಸಂಗೀತಗಾರ) ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು. ನೇಮಕಾತಿ ಅಧಿಸೂಚನೆಯಲ್ಲಿ ನಿಖರವಾದ ಖಾಲಿ ಹುದ್ದೆಗಳನ್ನು ಒದಗಿಸಲಾಗಿಲ್ಲ. ಆಸಕ್ತ ಅಭ್ಯರ್ಥಿಗಳು ಭಾರತೀಯ ವಾಯುಪಡೆ ಅಧಿಕೃತ ವೆಬ್ ಸೈಟ್ agnipathvayu.cdac.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

Highlights Of IAF Job News

Organization Name – Indian Air Force (IAF)
Post Name – Agniveervayu (Musician)
Total Vacancy – Not Disclosed
Application Process – Online
Job Location – All India

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಏಪ್ರಿಲ್ 21 ರಿಂದ ಪ್ರಾರಂಭವಾಗಿ, ಮೇ 11, 2025ರಂದು ಕೊನೆಗೊಳ್ಳಲಿದೆ.

ಶೈಕ್ಷಣಿಕ ಅರ್ಹತೆ:

  • ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್/ 10ನೇ ತರಗತಿ ಅಥವಾ ತತ್ಸಮಾನ ಉತ್ತೀರ್ಣ.

ಸಂಗೀತ ಅನುಭವ:

  • ಮಾನ್ಯತೆ ಪಡೆದ ಸಂಗೀತ ಸಂಸ್ಥೆಗಳಿಂದ (TCL, RSM, KM ಕನ್ಸರ್ವೇಟರಿ, ಇತ್ಯಾದಿ) 5 ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚಿನ ಪದವಿ. ಅಥವಾ
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹಿಂದೂಸ್ತಾನಿ/ ಕರ್ನಾಟಕ ಸಂಗೀತದಲ್ಲಿ ಡಿಪ್ಲೊಮಾ
  • ಮಾನ್ಯತೆ ಪಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಯ ಪ್ರಮಾಣಪತ್ರ/ಪ್ರಶಸ್ತಿ.

ವಯೋಮಿತಿ:

  • 2005 ಜನವರಿ 01 ರಿಂದ 2008 ರ ಜುಲೈ 01 ರ ನಡುವೆ ಜನಿಸಿದವರು (ಎರಡೂ ದಿನಾಂಕಗಳು ಸೇರಿದಂತೆ)
  • ದಾಖಲಾತಿಗೆ ಗರಿಷ್ಠ ವಯಸ್ಸು: 21 ವರ್ಷಗಳನ್ನು ಮೀರಬಾರದು.

ಆಯ್ಕೆ ಪ್ರಕ್ರಿಯೆ:

  • ಸಂಗೀತ ವಾದ್ಯಗಳಲ್ಲಿ ಪ್ರಾವೀಣ್ಯತೆಯ ಪರೀಕ್ಷೆ (ಏಕವ್ಯಕ್ತಿ ಅಥವಾ ಗುಂಪು)
  • ಇಂಗ್ಲಿಷ್ ಲಿಖಿತ ಪರೀಕ್ಷೆ
  • ಹೊಂದಾಣಿಕೆ ಪರೀಕ್ಷೆ-I (AT-I)
  • ದೈಹಿಕ ಸಾಮರ್ಥ್ಯ ಪರೀಕ್ಷೆ (PFT)
  • ಹೊಂದಾಣಿಕೆ ಪರೀಕ್ಷೆ-II (AT-II)
  • ವೈದ್ಯಕೀಯ ಪರೀಕ್ಷೆ

ಅರ್ಜಿ ಶುಲ್ಕ:

ಅಗ್ನಿವೀರ್ ವಾಯು ಸಂಗೀತಗಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ – 100 ಜೊತೆಗೆ GST ಅನ್ವಯಿಸುತ್ತದೆ.

How to Apply for IAF Agniveer Vayu Musician Rally 2025

ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತಿದೆ;

  • ಭಾರತೀಯ ವಾಯುಪಡೆ ಅಧಿಕೃತ ವೆಬ್ ಸೈಟ್ agnipathvayu.cdac.in ಗೆ ಭೇಟಿ ನೀಡಿ.
  • 21 ಏಪ್ರಿಲ್ – 11 ಮೇ 2025 ರ ನಡುವೆ ನೋಂದಾಯಿಸಿಕೊಳ್ಳಿ.
  • ರ‍್ಯಾಲಿ ಆದ್ಯತೆಯನ್ನು ಆರಿಸಿ (ದೆಹಲಿ ಅಥವಾ ಬೆಂಗಳೂರು)
  • ರ‍್ಯಾಲಿಗೆ ಮುನ್ನ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಿ.

Important Direct Links:

Official Notification PDFDownload
Online Application Form(ಏಪ್ರಿಲ್ 21 ರಿಂದ)
Official Websiteagnipathvayu.cdac.in
More UpdatesKarnataka Help.in

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

For Feedback - admin@karnatakahelp.in

Leave a Comment