IBPS Clerk (CSA) 2025: ಗ್ರಾಹಕ ಸೇವಾ ಸಹವರ್ತಿ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಕೆಗೆ ಆ.28ವರೆಗೆ ಅವಕಾಶ

ಈ ನೇಮಕಾತಿಗೆ ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹತೆ ಏನು?, ವಯೋಮಿತಿ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.

Published on:

ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು (IBPS) ಗ್ರಾಹಕ ಸೇವಾ ಸಹವರ್ತಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.

ಐಬಿಪಿಎಸ್​ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲಿರುವ ಸಾರ್ವಜನಿಕ ವಲಯದ ಪ್ರತಿಷ್ಠಿತ ಬ್ಯಾಂಕುಗಳ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 10277 ಗ್ರಾಹಕ ಸೇವಾ ಸಹವರ್ತಿ ಹುದ್ದೆಗಳಿಗೆ ಭರ್ತಿ ನಡೆಯಲಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆ.01ರಿಂದ ಪ್ರಾರಂಭವಾಗಿದೆ, ಆಸಕ್ತ ಮತ್ತು ಆಸಕ್ತ ಅಭ್ಯರ್ಥಿಗಳು IBPS ಅಧಿಕೃತ ವೆಬ್ ಸೈಟ್ https://www.ibps.in/index.php/careers/ಗೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭದ ದಿನಾಂಕ – ಆಗಸ್ಟ್​ 01, 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್​ 28, 2025(ವಿಸ್ತರಣೆಯಾಗಿದೆ)

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಪದವಿ ಸಮಾನ ಅರ್ಹತೆ ಹೊಂದಿರಬೇಕು.

ವಯೋಮಿತಿ:

  • ಕನಿಷ್ಠ ಮಿತಿ – 20 ವರ್ಷಗಳು
  • ಗರಿಷ್ಠ ಮಿತಿ – 28 ವರ್ಷಗಳು

ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

ಆಯ್ಕೆ ಪ್ರಕ್ರಿಯೆ:

  • ಪೂರ್ವಭಾವಿ ಪರೀಕ್ಷೆ
  • ಮುಖ್ಯ ಪರೀಕ್ಷೆ
  • ವ್ಯಕ್ತಿತ್ವ ಪರೀಕ್ಷೆ
  • ಸಂದರ್ಶನ

ಅರ್ಜಿ ಶುಲ್ಕ:

  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪಿಡಬ್ಲ್ಯೂಡಿ, ಇಎಸ್​ಎಂ ಹಾಗೂ ಡಿಇಎಸ್​ಎಂ ಅಭ್ಯರ್ಥಿಗಳಿಗೆ – ರೂ.175/-
  • ಇತರೆ ಎಲ್ಲಾ ಅಭ್ಯರ್ಥಿಗಳಿಗೆ – ರೂ.850/-

ಇದನ್ನೂ ಓದಿ – RRC ER Apprentice 2025: ಪೂರ್ವ ರೈಲ್ವೆಯಲ್ಲಿ ಬೃಹತ್ ಸಂಖ್ಯೆಯ​ ಅಪ್ರೆಂಟಿಸ್​ ತರಬೇತಿ, ಆ.14ರಿಂದ ಅರ್ಜಿ ಸಲ್ಲಿಸಿ

How to Apply for IBPS Clerk (CSA) 2025 Notification

ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತಿದೆ;

  • IBPS ಅಧಿಕೃತ ವೆಬ್ ಸೈಟ್ https://www.ibps.in/index.php/careers/ ಗೆ ಭೇಟಿ ನೀಡಿ.
  • ಗ್ರಾಹಕ ಸೇವಾ ಸಂಘಟಕರ (CSA) ನೇಮಕಾತಿಗಾಗಿ ಸಾಮಾನ್ಯ ನೇಮಕಾತಿ-2025* ಅರ್ಜಿ ನಮೂನೆ ಆಯ್ಕೆ ಮಾಡಿ.
  • ಅರ್ಜಿಯಲ್ಲಿ ಕೇಳಲಾಗಿರುವ ಮೂಲ ಮಾಹಿತಿ, ಸ್ವ ವಿವರ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ವಿವರಗಳನ್ನು ಅಪ್ಲೋಡ್ ಮಾಡಿ.
  • ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
  • ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
  • ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಲ್ಲಿಸಿದ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Important Direct Links:

Online Application Form Last Date Extended Notice PDF (Dated On 21/8/2025)Download
Official Detailed Notification PDF (Dated On 31/7/2025)Download
Online Application Form LinkApply Now
Official Websiteibps.in
More UpdatesKarnatakahelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

18 thoughts on “IBPS Clerk (CSA) 2025: ಗ್ರಾಹಕ ಸೇವಾ ಸಹವರ್ತಿ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಕೆಗೆ ಆ.28ವರೆಗೆ ಅವಕಾಶ”

Leave a Comment