IBPS Clerk Prelims Result 2024: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ CRP ಕ್ಲರ್ಕ್ XIV ಅಡಿಯಲ್ಲಿ ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿಗಾಗಿ ಆಗಸ್ಟ್ 24, 25, ಮತ್ತು 31, 2024 ರಂದು ಪರೀಕ್ಷೆಯನ್ನು ಇಲಾಖೆಯು ನಡೆಸಿತ್ತು. ಈ ಪರೀಕ್ಷೆಯ ಮೂಲಕ ದೇಶದ ವಿವಿಧ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಒಟ್ಟು 6128 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಈ IBPS ಕ್ಲರ್ಕ್ 2024 ಪೂರ್ವಭಾವಿ ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಇಲಾಖೆಯು ಇಂದು (ಅಕ್ಟೋಬರ್ 01, 2024) ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ಜಾಲತಾಣ ಅಥವಾ ನಾವು ಈ ಲೇಖನದಲ್ಲಿ ನೀಡಲಾಗಿರುವ ಲಿಂಕ್ ಮೂಲಕ ಪರಿಶೀಲಿಸಿಕೊಳ್ಳಬಹುದಾಗಿದೆ.
ಗಮನಿಸಿ: ಈ IBPS ಕ್ಲರ್ಕ್ 2024 ಪೂರ್ವಭಾವಿ ಲಿಖಿತ ಪರೀಕ್ಷೆಯ ಫಲಿತಾಂಶವು ಅಕ್ಟೋಬರ್ 01, 2024 ರಿಂದ ಅಕ್ಟೋಬರ್ 10, 2024 ರವರೆಗೆ ಮಾತ್ರ ಪರಿಶೀಲಿಸಲು ಅವಕಾಶ ನೀಡಲಾಗಿದೆ. ನಿಗದಿಪಡಿಸಿದ ಕೊನೆ ದಿನಾಂಕದ ಮೊದಲು ನಿಮ್ಮ ಫಲಿತಾಂಶ ಚೆಕ್ ಮಾಡಿಕೊಳ್ಳಿ.
Step By Step Process to Check IBPS Clerk Prelims Result 2024
ಫಲಿತಾಂಶವನ್ನು ಪರಿಶೀಲಸಿಕೊಳ್ಳಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
ನಂತರ ಮುಖ ಪುಟದಲ್ಲಿರುವ “Recent Updates” ನ ಅಡಿಯಲ್ಲಿ ನೀಡಿರುವ “CRP-Clerks-XIV(Result Status of Online Preliminary Examination for CRP-Clerks-XIV)” ಲಿಂಕ್ ಮೇಲೆ ಕ್ಲಿಕ್ ಮಾಡಿ.
ಮುಂದೆ ನಿಮ್ಮ “Registration No / Roll No” ಮತ್ತು “Password / DOB(DD-MM-YY)” ಹಾಗೂ captcha ಹಾಕಿ ಲಾಗಿನ್ ಆಗಿರಿ.