ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS)ಯಲ್ಲಿ ಖಾಲಿ ಇರುವ 1007 ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳ ನೇಮಕಾತಿ ಸಂಬಂಧ ಅಧಿಸೂಚನೆ ಬಿಡುಗಡೆ ಮಾಡಿ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು IBPS ಅಧಿಕೃತ ವೆಬ್ ಸೈಟ್ https://ibps.in/ಗೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜುಲೈ 28, 2025 (ವಿಸ್ತರಿಸಲಾಗಿದೆ)
ಖಾಲಿ ಇರುವ ಹುದ್ದೆಗಳ ವಿವರ:
ಐಟಿ ಅಧಿಕಾರಿ – 203
ಕೃಷಿ ಕ್ಷೇತ್ರ ಅಧಿಕಾರಿ (AFO) – 310
ರಾಜ್ ಭಾಷಾ ಅಧಿಕಾರಿ – 78
ಕಾನೂನು ಅಧಿಕಾರಿ 56
ಮಾನವ ಸಂಪನ್ಮೂಲ /ವೈಯಕ್ತಿಕ ಅಧಿಕಾರಿ 10
ಮಾರ್ಕೆಟಿಂಗ್ ಅಧಿಕಾರಿ (MO) – 350
ಶೈಕ್ಷಣಿಕ ಅರ್ಹತೆ:
ನೇಮಕಾತಿಯ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸಲು ನಿಗದಿತ ವಿದ್ಯಾರ್ಹತೆ ಹೊಂದಿರಬೇಕು. ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆ ನಿಗದಿ ಪಡಿಸಲಾಗಿದೆ. ತಪ್ಪದೇ ಅಧಿಕೃತ ಅಧಿಸೂಚನೆಯನ್ನು ಓದಿ.
BE, BTech, LLB, DIPLOMA, MBA, Degree, post graduate in related discipline.
ವಯೋಮಿತಿ:
ದಿನಾಂಕ 01-08-2025 ರಂತೆ
ಕನಿಷ್ಠ ಮಿತಿ – 20 ವರ್ಷಗಳು
ಗರಿಷ್ಠ ಮಿತಿ – 30 ವರ್ಷಗಳು
ಸರ್ಕಾರಿ ನಿಯಮಗಳ ಅನುಸಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ
ಆಯ್ಕೆ ಪ್ರಕ್ರಿಯೆ:
ಪ್ರಿಲಿಮ್ಸ್ ಲಿಖಿತ ಪರೀಕ್ಷೆ.
ಮುಖ್ಯ ಪರೀಕ್ಷೆ
ಸಂದರ್ಶನ.
ದಾಖಲೆ ಪರಿಶೀಲನೆ.
ವೈದ್ಯಕೀಯ ಪರೀಕ್ಷೆ.
ಅಂತಿಮ ಮೆರಿಟ್ ಪಟ್ಟಿ.
ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 175ರೂ.
ಇತರೆ ಎಲ್ಲಾ ಅಭ್ಯರ್ಥಿಗಳಿಗೆ – 850ರೂ.
How to Apply for IBPS SO 2025
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ;
IBPS ಅಧಿಕೃತ ವೆಬ್ ಸೈಟ್ https://ibpsreg.ibps.in/crpspxvjun25/basic_details.php ಗೆ ಭೇಟಿ ನೀಡಿ.
ಅರ್ಜಿಯಲ್ಲಿ ಕೇಳಲಾಗಿರುವ ಮೂಲ ಮಾಹಿತಿ, ಸ್ವ ವಿವರ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ವಿವರಗಳನ್ನು ಅಪ್ಲೋಡ್ ಮಾಡಿ.
ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಲ್ಲಿಸಿದ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Important Direct Links:
Online Application Form Last Date Extended Notice PDF (Dated on 21/7/2025)