WhatsApp Channel Join Now
Telegram Group Join Now

India Post Skilled Artisan Recruitment 2024: 8ನೇ ತರಗತಿ ಪಾಸಾದವರಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ನೇಮಕಾತಿ

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಗೆ ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಭಾರತೀಯ ಅಂಚೆ ಇಲಾಖೆಯು ಕುಶಲಕರ್ಮಿ (Skilled Artisan) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ನೇಮಕಾತಿಯಲ್ಲಿ ಒಟ್ಟು 19 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಚೆನ್ನೈ ಮತ್ತು ಮುಂಬೈ ಅಂಚೆ ವಿಭಾಗಳಿಗೆ‌ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ನಿಗದಿತ ಅರ್ಜಿ ನಮೂನೆಗಳನ್ನು ಪಡೆದುಕೊಂಡು ಕಚೇರಿಯ ವಿಳಾಸಕ್ಕೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಈ ಲೇಖನದಲ್ಲಿ India Post Skilled Artisan Recruitment 2024 ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.

India Post Skilled Artisan Recruitment 2024
India Post Skilled Artisan Recruitment 2024

ನೇಮಕಾತಿಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಜುಲೈ 12, 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 10, 2024

ಖಾಲಿ ಇರುವ ಹುದ್ದೆಯ ವಿವರ:

  • ಚೆನ್ನೈ ವಿಭಾಗದಲ್ಲಿ – 10 ಹುದ್ದೆಗಳು
  • ಮುಂಬೈ ವಿಭಾಗದಲ್ಲಿ – 9 ಹುದ್ದೆಗಳು

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕಡ್ಡಾಯವಾಗಿ 8ನೇ ತರಗತಿ ಪಾಸ್ ಆಗಿರಬೇಕು.

ವಯೋಮಿತಿ:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 18 ವರ್ಷದಿಂದ ಗರಿಷ್ಠ 30 ವರ್ಷ ಮೀರಿರಬಾರದು.

ವಯೋಮಿತಿ ಸಡಲಿಕ್ಕೆ;
ಓಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು
SC/ST ಅಭ್ಯರ್ಥಿಗಳಿಗೆ – 05 ವರ್ಷಗಳು

ವೇತನ ಶ್ರೇಣಿ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ₹19,900 ಮಾಸಿಕ ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

  • ಟ್ರೇಡ್ ಪರೀಕ್ಷೆ
  • ಡ್ರೈವಿಂಗ್ ಲೈಸೆನ್ಸ್
  • ಸಂದರ್ಶನ

ಅರ್ಜಿ ಶುಲ್ಕ:

  • ಸಾಮಾನ್ಯ ಅಭ್ಯರ್ಥಿಗಳಿಗೆ -₹500
  • SC/ST ಮತ್ತು ಮಹಿಳಾ ಅಭ್ಯರ್ಥಿಗಳಿಗೆ – ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ಪಾವತಿ ವಿಧಾನ – ಅಂಚೆ ಕಚೇರಿಯ ಮೂಲಕವೇ ಪಾವತಿಸಬೇಕು.

Also Read: India Post GDS Recruitment 2024(OUT): 10th ಪಾಸ್, ಒಟ್ಟು 44228 ಹುದ್ದೆಗಳ ನೇಮಕಾತಿ

How to Apply for India Post Skilled Artisan Notification 2024:

ಅರ್ಜಿ ಸಲ್ಲಿಸುವ ಪ್ರಕ್ರಿಯೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಅಗತ್ಯ ‌ದಾಖಲಾತಿಗಳೊಂದಿಗೆ ನಿಗದಿತ ಕಛೇರಿಯಲ್ಲಿ‌ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ:

ಮುಂಬೈ ವಿಭಾಗ‌;

ಸೀನಿಯರ್ ಮ್ಯಾನೇಜರ್
ಮೇಲ್ ಮೋಟಾರ್ ಸರ್ವಿಸ್ 134-ಎ
ಸುದಮ್ ಕಲು ಅಹಿರೆ ಮಾರ್ಗ ವರ್ಲಿ
ಮುಂಬೈ-400018

ಚೆನ್ನೈ ವಿಭಾಗ;

ಸೀನಿಯರ್ ಮ್ಯಾನೇಜರ್
ಮೇಲ್ ಮೋಟಾರ್ ಸರ್ವಿಸ್‌ No-37
Greams Road , ಚೆನ್ನೈ – 60006

Important Direct Links:

Official Notification & Form PDF(Chennai)Download
Official Notification & Form PDF (Mumbai)Download
Official Websitewww.indiapost.gov.in
More UpdatesKarnataka Help.in

Leave a Comment