Indian Army SSC NCC Special Entry Notification 2026
ಭಾರತೀಯ ಸೇನೆಯು 2026ನೇ ಸಾಲಿಗೆ ಎನ್ಸಿಸಿ ವಿಶೇಷ ಪ್ರವೇಶ ಯೋಜನೆ, ಕೋರ್ಸ್ 124ರಡಿ 76 ಹುದ್ದೆಗಳಿಗೆ ಅವಿವಾಹಿತ ಪುರುಷ ಮತ್ತು ಮಹಿಳೆಯರ ಭರ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
70 ಪುರುಷ ಹಾಗೂ 06 ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು 49 ವಾರಗಳವರೆಗೆ ತರಬೇತಿ ನೀಡಲಿದೆ. ತದನಂತರ ಅಭ್ಯರ್ಥಿಗಳು ಲೆಫ್ಟಿನೆಂಟ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಯುದ್ಧದಲ್ಲಿ ಸಾವನ್ನಪ್ಪಿದ ಸೇನಾ ಸಿಬ್ಬಂದಿ ವಾರ್ಡ್ ವರ್ಗಕ್ಕೂ ಕೂಡಾ ಹುದ್ದೆಗಳು ಮೀಸಲಿವೆ. ಆಸಕ್ತರು ಮಾ.16ರೊಳಗೆ ಭಾರತೀಯ ಸೇನೆಯ ಅಧಿಕೃತ ವೆಬ್ಸೈಟ್ https://joinindianarmy.nic.in/officers-notifications.htmಗೆ ಭೇಟಿ ನೀಡಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಫೆಬ್ರವರಿ 13, 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮಾರ್ಚ್ 16, 2026
ಖಾಲಿ ಇರುವ ಹುದ್ದೆಗಳ ವಿವರ
• ಎನ್ಸಿಸಿ ಪುರುಷರು – 70 ಹುದ್ದೆಗಳು(ಇದರಲ್ಲಿ ಸಾಮಾನ್ಯ ವರ್ಗಕ್ಕೆ 63 ಮತ್ತು ಭಾರತೀಯ ಸೇನಾ ಸಿಬ್ಬಂದಿಯ ಯುದ್ಧ ಸಾವುನೋವುಗಳ ವಾರ್ಡ್ಗಳ ವರ್ಗ 07 ಹುದ್ದೆಗಳು)
• ಎನ್ಸಿಸಿ ಮಹಿಳೆಯರು – 06 ಹುದ್ದೆಗಳು(ಇದರಲ್ಲಿ ಸಾಮಾನ್ಯ ವರ್ಗಕ್ಕೆ 05 ಮತ್ತು ಭಾರತೀಯ ಸೇನಾ ಸಿಬ್ಬಂದಿಯ ಯುದ್ಧ ಸಾವುನೋವುಗಳ ವಾರ್ಡ್ಗಳ ವರ್ಗ 01 ಹುದ್ದೆಗಳು)
ಶೈಕ್ಷಣಿಕ ಅರ್ಹತೆ:
✓ ಸಾಮಾನ್ಯ ವರ್ಗದ ಹುದ್ದೆಗಳಿಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ/ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು ಜೊತೆಗೆ ಕನಿಷ್ಠ 2ರಿಂದ 3 ವರ್ಷಗಳ ಎನ್ಸಿಸಿ ಪ್ರಮಾಣ ಪತ್ರವನ್ನು ಹೊಂದಿರಬೇಕು.
✓ ಭಾರತೀಯ ಸೇನಾ ಸಿಬ್ಬಂದಿಯ ಯುದ್ಧ ಸಾವುನೋವುಗಳ ವಾರ್ಡ್ಗಳ ವರ್ಗದ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ/ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು (ಎನ್ಸಿಸಿ ಪ್ರಮಾಣ ಪತ್ರ ಅಗತ್ಯವಿರುವುದಿಲ್ಲ)
ವಯೋಮಿತಿ:
01-07-2026 ರಂತೆ;
ಕನಿಷ್ಠ ಮಿತಿ – 19 ವರ್ಷಗಳು ಗರಿಷ್ಠ ಮಿತಿ – 25 ವರ್ಷಗಳು
ತರಬೇತಿ ಭತ್ಯೆ:
ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಯ ಅವಧಿಯಲ್ಲಿ ಮಾಸಿಕ 56,100ರೂ. ವರೆಗೆ ತರಬೇತಿ ಭತ್ಯೆ ಪಾವತಿಸಲಾಗುತ್ತದೆ.
ಆಯ್ಕೆ ವಿಧಾನ:
ಅರ್ಹ ಅಭ್ಯರ್ಥಿಗಳ ಶಾರ್ಟ್ಲಿಸ್ಟಿಂಗ್
SSB ಸಂದರ್ಶನ
ವೈದ್ಯಕೀಯ ಪರೀಕ್ಷೆ
ಮೆರಿಟ್ ಪಟ್ಟಿ
ಅಂತಿಮ ಆಯ್ಕೆ
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂತಿದೆ;
• ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್ಸೈಟ್ https://joinindianarmy.nic.in/officers-notifications.htm ಗೆ ಭೇಟಿ ನೀಡಿ.
• “ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಣಿ ಮಾಡಿ ಅಥವಾ ಹೆಸರು/ ಜನ್ಮ ದಿನಾಂಕ/ ಮೊಬೈಲ್ ಸಂಖ್ಯೆ/ಇಮೇಲ್ ಐಡಿ ಬಳಸಿ ಲಾಗಿನ್ ಆಗಿ.
• ಬಳಿಕ “NCC ವಿಶೇಷ ಪ್ರವೇಶ ಯೋಜನೆ 124 ಕೋರ್ಸ್ (ಅಕ್ಟೋಬರ್ 2026) ನೇಮಕಾತಿ* ಅರ್ಜಿ ನಮೂನೆ ಆಯ್ಕೆ ಮಾಡಿ.
• ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.