Indian Coast Guard Recruitment 2024: ಕರಾವಳಿ ಕಾವಲು ಪಡೆಯಲ್ಲಿ‌ ವಿವಿಧ ಹುದ್ದೆಗಳ ನೇಮಕಾತಿ

ಫಾಲೋ ಮಾಡಿ
Coast Guard Recruitment 2024
Coast Guard Recruitment 2024

ಭಾರತೀಯ ಕರಾವಳಿ ಕಾವಲು ಪಡೆಯಲ್ಲಿ (ICG) ಖಾಲಿ‌ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ‌ ನೇಮಕಾತಿ‌ ಅಧಿಸೂಚನೆಯನ್ನು‌ ಪ್ರಕಟಿಸಿದೆ. ಭಾರತೀಯ ಕಾವಲು ಪಡೆಯಲ್ಲಿ ನಾವಿಕ (ಸಾಮಾನ್ಯ ಕರ್ತವ್ಯ) ಮತ್ತು ಯಂತ್ರಿಕ ಸೇರಿದಂತೆ ಒಟ್ಟು 320 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತಿ ಹೊಂದಿರುವ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 3, 2024 ರಂದು ಕೊನೆಯ‌ ದಿನಾಂಕವಾಗಿದೆ. ಅರ್ಜಿ‌‌ ಸಲ್ಲಿಸುವ ಅಭ್ಯರ್ಥಿಗಳನ್ನು ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯದ ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಇದಕ್ಕೆ ಸಂಬಂಧಿಸಿದಂತೆ ಐಸಿಜಿ ನಾವಿಕ್ ಪರೀಕ್ಷೆಯ ದಿನಾಂಕಗಳನ್ನು ಅಧಿಸೂಚನೆಯಲ್ಲಿ‌ ಪ್ರಕಟಿಸಲಾಗಿದ್ದು, ಎರಡು ಹಂತದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಮೊದಲನೆಯ ಹಂತದ (1) ಪರೀಕ್ಷೆಯನ್ನು ಸೆಪ್ಟೆಂಬರ್ 2024 ರ ಮಧ್ಯ/ಅಂತ್ಯದಲ್ಲಿ ಮತ್ತು‌‌ 2ನೇ‌ ಹಂತದ ಪರೀಕ್ಷೆಯು ನವೆಂಬರ್ 2024 ರ ಮಧ್ಯ/ಅಂತ್ಯದಲ್ಲಿ ನಡೆಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು. ನೇಮಕಾತಿ ಕುರಿತದ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ಗಮನವಿಟ್ಟು ಓದಿರಿ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment