ಭಾರತೀಯ ನೌಕಾಪಡೆ (Indian Vavy)ಯು ಜೂನ್ 2026 (26 ರಂದು) ಕೋರ್ಸ್ನ ಮೂಲಕ ಕಿರು ಸೇವಾ ಆಯೋಗ(SSC) ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.
ಭಾರತೀಯ ನೌಕಾಪಡೆಯು ಕೇರಳದ ಎಳಿಮಲದಲ್ಲಿರುವ ಭಾರತೀಯ ನೌಕಾ ಅಕಾಡೆಮಿ (INA) ಯಲ್ಲಿ ಜೂನ್ 2026 ರಿಂದ ಪ್ರಾರಂಭವಾಗುವ ಶಾರ್ಟ್ ಸರ್ವಿಸ್ ಕಮಿಷನ್ (SSC) ಕೋರ್ಸ್ಗೆ ಅರ್ಜಿ ಆಹ್ವಾನಿಸಲಾಗಿದ್ದು, ಒಟ್ಟು 260 ಅಧಿಕಾರಿ ಹುದ್ದೆಗಳಿಗೆ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್ಸೈಟ್ https://www.joinindiannavy.gov.in/ಗೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 01, 2025
ಶೈಕ್ಷಣಿಕ ಅರ್ಹತೆ:
ನೇಮಕಾತಿಯ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸಲು ನಿಗದಿತ ವಿದ್ಯಾರ್ಹತೆ ಹೊಂದಿರಬೇಕು. ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆ ನಿಗದಿ ಪಡಿಸಲಾಗಿದೆ. ತಪ್ಪದೇ ಅಧಿಕೃತ ಅಧಿಸೂಚನೆಯನ್ನು ಓದಿ.
ಕನಿಷ್ಠ 60% ಅಂಕಗಳೊಂದಿಗೆ ಸಂಬಂಧಿಸಿದ ವಿಷಯದಲ್ಲಿ ಬಿಇ(BE) , ಬಿ.ಟೆಕ್(B.Tech), ಎಂಬಿಎ(MBA), ಬಿ.ಎಸ್ಸಿ(B.Sc), ಬಿ.ಕಾಂ(B.com), ಎಂಸಿಎ(MCA), ಎಂ.ಎಸ್ಸಿ(M.Sc)ಪೂರ್ಣಗೊಳಿಸಿರಬೇಕು.
ವಯೋಮಿತಿ:
ಕಾರ್ಯನಿರ್ವಾಹಕ ಶಾಖೆಯ ವಿಭಾಗದಲ್ಲಿ;
⚓︎ ನಿರ್ದೇಶಿತ ಶಾಖೆ ಹುದ್ದೆಗೆ – 02-07-2001 ರಿಂದ 01-01-2007 (ಎರಡು ದಿನಾಂಕಗಳ ನಡುವೆ ಜನಿಸಿರಬೇಕು)
⚓︎ ಪೈಲೆಟ್ ಹುದ್ದೆಗೆ – 02-07-2002 ರಿಂದ 01-07-2007 (ಎರಡು ದಿನಾಂಕಗಳ ನಡುವೆ ಜನಿಸಿರಬೇಕು)
⚓︎ ನೌಕಾ ವಾಯು ಕಾರ್ಯಾಚರಣೆ ಅಧಿಕಾರಿ NA00 ಹುದ್ದೆಗೆ – 02-07-2002 ರಿಂದ 01-07-2007 (ಎರಡು ದಿನಾಂಕಗಳ ನಡುವೆ ಜನಿಸಿರಬೇಕು)
⚓︎ ವಾಯು ಸಂಚಾರ ನಿಯಂತ್ರಕ (ATC) ಹುದ್ದೆಗೆ – 02-07-2001 ರಿಂದ 01-07-2005 (ಎರಡು ದಿನಾಂಕಗಳ ನಡುವೆ ಜನಿಸಿರಬೇಕು)
⚓︎ ಲಾಜಿಸ್ಟಿಕ್ಸ್ ಹಾಗೂ ಎನ್ಎಐಸಿ ಹುದ್ದೆಗಳಿಗೆ – 02-07-2001 ರಿಂದ 01-01-2007 (ಎರಡು ದಿನಾಂಕಗಳ ನಡುವೆ ಜನಿಸಿರಬೇಕು)
⚓︎ ಕಾನೂನು ಹುದ್ದೆಗೆ – 02-07-1999 ರಿಂದ 01-07-2004 (ಎರಡು ದಿನಾಂಕಗಳ ನಡುವೆ ಜನಿಸಿರಬೇಕು)
ತಾಂತ್ರಿಕ ಶಾಖೆಯ ವಿಭಾಗದಲ್ಲಿ;
⚓︎ ಎಂಜಿನಿಯರಿಂಗ್ ಶಾಖೆ ಸಾಮಾನ್ಯ ಸೇವೆ, ವಿದ್ಯುತ್ ಶಾಖೆ ಸಾಮಾನ್ಯ ಸೇವೆ ಹಾಗೂ ನೌಕಾ ನಿರ್ಮಾಣಕಾರ ಹುದ್ದೆಗಳಿಗೆ – 02-07-2001 ರಿಂದ 01-01-2007 (ಎರಡು ದಿನಾಂಕಗಳ ನಡುವೆ ಜನಿಸಿರಬೇಕು)
ಶಿಕ್ಷಣ ಶಾಖೆಯ ವಿಭಾಗದಲ್ಲಿ;
⚓︎ ಎಜುಕೇಶನ್ ಹುದ್ದೆಗಳಿಗೆ – 02-07-1999 ರಿಂದ 01-07-2005 (ಎರಡು ದಿನಾಂಕಗಳ ನಡುವೆ ಜನಿಸಿರಬೇಕು)
ಆಯ್ಕೆ ಪ್ರಕ್ರಿಯೆ:
ಶಾರ್ಟ್ ಲಿಸ್ಟಿಂಗ್
ಎಸ್ಎಸ್ಬಿ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೂ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.
How to Apply for Indian Navy SSC Officers 2025 Notification
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ಭಾರತೀಯ ನೌಕಾಪಡೆಯ ಅಧಿಕೃತ ವೆಬ್ಸೈಟ್ https://www.joinindiannavy.gov.in/ಗೆ ಭೇಟಿ ನೀಡಿ.
ಇ-ಮೇಲ್ ಐಡಿ ಹಾಗೂ ಪಾಸ್ವರ್ಡ್ ಬಳಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
*ಜೂನ್ 2026 (26 ರಂದು) ಕೋರ್ಸ್ಗೆ ವಿವಿಧ ನಮೂದುಗಳಿಗಾಗಿ ಕಿರು ಸೇವಾ ಆಯೋಗದ ಅಧಿಕಾರಿ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ* ಅರ್ಜಿ ನಮೂನೆ ಆಯ್ಕೆ ಮಾಡಿ.
ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ. ಅರ್ಜಿಯನ್ನು ಸಲ್ಲಿಸಿ.
ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Post.. Indin poilet
Alkod thanda TQ Devadurga DIST raichur 584129
I am joining