ಇಂಡಿಯನ್‌ ಆಯಿಲ್‌ನಲ್ಲಿ ಟ್ರೇಡ್‌ ಮತ್ತು ಟೆಕ್ನಿಷಿಯನ್‌ ಅಪ್ರೆಂಟಿಸ್‌ಶಿಪ್‌

ಮಾ.05-10ರವರೆಗೆ ದಾಖಲೆ ಪರಿಶೀಲನೆ

Published on:

Updated On:

ಫಾಲೋ ಮಾಡಿ
IOCL Mathura Refinery Apprentice Notification 2026
IOCL Mathura Refinery Apprentice Notification 2026

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್(IOCL)ನ ಮಥುರಾ ಸಂಸ್ಕರಣಾ ಘಟಕದ ವಿವಿಧ ವಿಭಾಗಗಳಿಗೆ 1961ರ ಅಪ್ರೆಂಟಿಸ್‌ ಕಾಯ್ದೆಯಡಿ ಟ್ರೇಡ್‌ ಮತ್ತು ಟೆಕ್ನಿಷಿಯನ್‌ ಅಪ್ರೆಂಟಿಸ್‌ಶಿಪ್‌ಗೆ ಅರ್ಜಿ ಆಹ್ವಾನಿಸಲಾಗಿದೆ.

ಮೆಕ್ಯಾನಿಕಲ್, ಎಲೆಕ್ಟ್ರಿಕಲ್‌, ಇನ್ಸ್ಟ್ರುಮೆಂಟೇಶನ್‌, ಅಕೌಂಟೆಂಟ್‌ ವಿಭಾಗಗಳಿಗೆ ಟ್ರೇಡ್‌ ಅಪ್ರೆಂಟಿಸ್‌ 42 ಸೀಟುಗಳು ಹಾಗೂ ಟೆಕ್ನಿಷಿಯನ್‌ ಅಪ್ರೆಂಟಿಸ್‌ 66 ಸೀಟುಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಸಂಬಂಧಿಸಿದ ಟ್ರೇಡ್‌ನಲ್ಲಿ ಐಟಿಐ/ವಿಷಯದಲ್ಲಿ ಪದವಿ ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡು ತರಬೇತಿ ಒದಗಿಸಲಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆ.20ರೊಳಗೆ https://www.apprenticeshipindia.gov.in/ ಅಥವಾ https://nats.education.gov.in/student_register.phpನ ನೋಂದಣಿ ಮಾಡಿಕೊಳ್ಳಬೇಕು. ತದನಂತರ www.iocl.comನಲ್ಲಿ ಲಭ್ಯವಿರುವ ಮೈಕ್ರೋಸಾಫ್ಟ್‌/ಗೂಗಲ್‌ ಪಾರಂ ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment