ಫಾರ್ಮಸಿಸ್ಟ್‌ ಅಪ್ರೆಂಟಿಸ್‌ ತರಬೇತಿ: ಅರ್ಜಿ ಗಡುವು ಮತ್ತೊಮ್ಮೆ ವಿಸ್ತರಣೆ

Published on:

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ವತಿಯಿಂದ 2024-25ನೇ ಸಾಲಿನಲ್ಲಿ ಡಿ.ಫಾರ್ಮದಲ್ಲಿ ಉತ್ತೀರ್ಣರಾದವರಿಗೆ ಫಾರ್ಮಸಿಸ್ಟ್‌ ಅಪ್ರೆಂಟಿಸ್‌ ತರಬೇತಿ ನೋಂದಣಿಯ ಅವಧಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಏ.18ರವೆರೆಗೆ ವಿಸ್ತರಿಸಿದೆ.

ಒಟ್ಟು 1000 ಸೀಟುಗಳಲ್ಲಿ ಮೊದಲ ಸುತ್ತಿನಲ್ಲಿ 123 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಇನ್ನುಳಿದ ಸೀಟುಗಳನ್ನು ಎರಡನೇ ಸುತ್ತಿನಲ್ಲಿ ಭರ್ತಿ ಮಾಡಿಕೊಳ್ಳಲಿದೆ. ಅಭ್ಯರ್ಥಿಗಳಿಗೆ 11 ತಿಂಗಳು ತರಬೇತಿ ಒದಗಿಸಲಿದೆ. ಸರ್ಕಾರಿ ಕೋಟಾದಡಿ ಆಯ್ಕೆಯಾಗಿದ್ದವರಿಗೆ ಆದ್ಯತೆ ನೀಡಲಾಗುತ್ತದೆ. ಸರ್ಕಾರದ ರೋಸ್ಟರ್‌ ಪದ್ಧತಿಯಂತೆ ಮೀಸಲಾತಿ ನಿಯಮ ಅನುಸರಿಸಲಾಗುತ್ತದೆ. ಆಸಕ್ತರು ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kearecruitment_dpharma/forms/login.aspxಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

  • ಪ್ರಕಟಣೆಯ ದಿನಾಂಕ- ಮಾರ್ಚ್‌ 20
  • ಅರ್ಜಿ ಸಲ್ಲಿಕೆ ಪ್ರಾರಂಭ ದಿನ – ಮಾರ್ಚ್‌ 23
  • ಅರ್ಜಿ ಸಲ್ಲಿಸಲು ಕೊನೆದಿನ – ಏಪ್ರಿಲ್‌ 18(ವಿಸ್ತರಣೆ)

ನಿಯೋಜನೆ ಹೇಗೆ.?

ಅಭ್ಯರ್ಥಿಗಳನ್ನು ಕೌನ್ಸಿಲಿಂಗ್‌ ಆಧಾರದ ಮೇಲೆ ಪ್ರಾಥಮಿಕ ಆರೋಗ್ಯ ಕೇಂದ್ರ(PHCs)ಗಳಲ್ಲಿ ತರಬೇತಿಗೆ ನಿಯೋಜನೆ ಮಾಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ:

ಕರ್ನಾಟಕ ರಾಜ್ಯದ ಡಿಪ್ಲೊಮಾ ಕಾಲೇಜುಗಳಿಂದ ಕಳೆದ ಎರಡು ವರ್ಷ(2024-25)ಗಳಲ್ಲಿ ಡಿ.ಫಾರ್ಮ(ಡಿಪ್ಲೊಮಾ ಇನ್‌ ಫಾರ್ಮಸಿ) ಪೂರ್ಣಗೊಳಿಸಿರಬೇಕು.

ಆಯ್ಕೆ ಪ್ರಕ್ರಿಯೆ:

ಮೆರಿಟ್‌ ಆಧಾರದ ಮೇಲೆ ಆಯ್ಕೆ.

ಸ್ಟೈಪೆಂಡ್‌:

ಪ್ರತಿ ತಿಂಗಳು ₹8000 ಶಿಷ್ಯವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ:

₹600/-

ಅರ್ಜಿ ಸಲ್ಲಿಕೆ ಹೇಗೆ.?

ಹಂತ-1 ಅಧಿಕೃತ ಜಾಲತಾಣ https://cetonline.karnataka.gov.in/kea/ಕ್ಕೆ ಭೇಟಿ

ಹಂತ-2 ಮೆನು ಭಾಗದಲ್ಲಿ “ನೇಮಕಾತಿ” ವರ್ಗದಡಿ ನೀಡಲಾದ “ಡಿಪ್ಲೊಮಾ ಇನ್ ಫಾರ್ಮಸಿ ಅಪ್ರೆಂಟಿಸ್‌ಶಿಪ್ ತರಬೇತಿ-2026” ಮೇಲೆ ಒತ್ತಿ.

ಹಂತ-3 ನಂತರ “ಡಿ ಫಾರ್ಮಸಿ ಅಪ್ರೆಂಟಿಸ್‌ಶಿಪ್ ಕರೆ-2 ಅರ್ಜಿ ಲಿಂಕ್ (23-03-2026)” ಲಿಂಕ್‌ ಮೇಲೆ ಒತ್ತುವ ಮೂಲಕ ಹೊಸ ಪುಟ ತೆರೆಯುತ್ತದೆ, ತದನಂತರವ ತಾವು ಲಾಗಿನ್‌ ಅಥವಾ ನೋಂದಣಿಯಾಗಿ ಅರ್ಜಿ ನಮೂನೆ ಭರ್ತಿ ಮಾಡಿ, ಅರ್ಜಿ ಶುಲ್ಕ ಭರಿಸುವ ಮುಖೇನ ಅರ್ಜಿ ಹಾಕಬಹುದು.

Important Direct Links:

KEA Pharmacist Apprenticeship 2026 Online Application Form LinkApply Now
Official Websitekea.kar.nic.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

1 thought on “ಫಾರ್ಮಸಿಸ್ಟ್‌ ಅಪ್ರೆಂಟಿಸ್‌ ತರಬೇತಿ: ಅರ್ಜಿ ಗಡುವು ಮತ್ತೊಮ್ಮೆ ವಿಸ್ತರಣೆ”

Leave a Comment