ಐಟಿಬಿಪಿ ಹೆಡ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆಗೆ ಅ.27ರ ಗಡುವು

Published on:

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್(ಐಟಿಬಿಪಿಎಫ್) ವತಿಯಿಂದ ಹೆಡ್ ಕಾನ್ಸ್ಟೇಬಲ್(‌ಎಜುಕೇಶನ್ ಮತ್ತು ಸ್ಟ್ರೆಸ್ ಕೌನ್ಸಿಲರ್ ಹಾಗೂ ಮೋಟಾರ್ ಮೆಕ್ಯಾನಿಕ್) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಗಳನ್ನು ಹೊರಡಿಸಲಾಗಿದೆ.

ಹೆಡ್ ಕಾನ್ಸ್ಟೇಬಲ್(ಎಜುಕೇಶನ್ ಮತ್ತು ಸ್ಟ್ರೆಸ್ ಕೌನ್ಸಿಲರ್) 16 ಹುದ್ದೆಗಳು ಇದರಲ್ಲಿ ಪುರುಷರಿಗೆ 14 ಹುದ್ದೆಗಳು (ಸಾಮಾನ್ಯ-3, ಎಸ್‌ಟಿ-2, ಒಬಿಸಿ-8, ಇಡಬ್ಲ್ಯೂಎಸ್-1), ಮಹಿಳೆಯರಿಗೆ 2 ಹುದ್ದೆಗಳು (ಸಾಮಾನ್ಯ-1, ಒಬಿಸಿ-1) ಮೀಸಲಿವೆ ಹಾಗೂ ಹೆಡ್ ಕಾನ್ಸ್ಟೇಬಲ್(ಮೋಟಾರ್ ಮೆಕ್ಯಾನಿಕ್) 21 ಹುದ್ದೆಗಳು ಕೇವಲ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಮೀಸಲಿವೆ(ಸಾಮಾನ್ಯ-7, ಎಸ್‌ಸಿ-4, ಎಸ್‌ಟಿ-0, ಒಬಿಸಿ-7, ಇಡಬ್ಲ್ಯೂಎಸ್-3).

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- ಸೆಪ್ಟೆಂಬರ್, 28
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಅಕ್ಟೋಬರ್ 27 (ರಾತ್ರಿ 11:59 ರವರೆಗೆ).

ಶೈಕ್ಷಣಿಕ ಅರ್ಹತೆ:

ಹೆಡ್ ಕಾನ್ಸ್ಟೇಬಲ್(ಎಜುಕೇಶನ್ ಮತ್ತು ಸ್ಟ್ರೆಸ್ ಕೌನ್ಸಿಲರ್) ಹುದ್ದೆಗೆ; ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸೈಕಾಲಜಿ (ಮನೋವಿಜ್ಞಾನ) ವಿಷಯದೊಂದಿಗೆ ಪದವಿ ಹೊಂದಿರಬೇಕು.

ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಎಜುಕೇಶನ್(B.Ed) ಅಥವಾ ಬ್ಯಾಚುಲರ್ ಆಫ್ ಟೀಚಿಂಗ್ ಅಥವಾ ತತ್ಸಮಾನ ಪದವಿ ಪಡೆದಿರಬೇಕು.

ಹೆಡ್ ಕಾನ್ಸ್ಟೇಬಲ್(ಮೋಟಾರ್ ಮೆಕ್ಯಾನಿಕ್) ಹುದ್ದೆಗೆ; ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ 10+2 (ದ್ವಿತೀಯ ಪಿಯುಸಿ) ತೇರ್ಗಡೆಯಾಗಿರಬೇಕು. ಇದರೊಂದಿಗೆ, ಮಾನ್ಯತೆ ಪಡೆದ ಸಂಸ್ಥೆ ಅಥವಾ ಐಟಿಐ(ITI) ಇಂದ ಮೋಟರ್ ಮೆಕ್ಯಾನಿಕ್ ಪ್ರಮಾಣಪತ್ರ ಹೊಂದಿದ್ದು, ಪ್ರತಿಷ್ಠಿತ ವರ್ಕ್‌ಶಾಪ್‌ನಲ್ಲಿ 3 ವರ್ಷಗಳ ಪ್ರಾಯೋಗಿಕ ಅನುಭವ ಹೊಂದಿರಬೇಕು ಅಥವಾ ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ 3 ವರ್ಷಗಳ ಡಿಪ್ಲೊಮಾ ಮಾಡಿರಬೇಕು.

ವಯೋಮಿತಿ:

ಹೆಡ್ ಕಾನ್ಸ್ಟೇಬಲ್(ಎಜುಕೇಶನ್ ಮತ್ತು ಸ್ಟ್ರೆಸ್ ಕೌನ್ಸಿಲರ್) ಹುದ್ದೆಗೆ 20 ರಿಂದ 25 ವರ್ಷಗಳು. (ಅಭ್ಯರ್ಥಿಗಳು 28 ಅಕ್ಟೋಬರ್ 2001 ಕ್ಕಿಂತ ಮುಂಚಿತವಾಗಿ ಮತ್ತು 27 ಅಕ್ಟೋಬರ್ 2006 ಕ್ಕಿಂತ ತಡವಾಗಿ ಜನಿಸಿರಬಾರದು).

ಹೆಡ್ ಕಾನ್ಸ್ಟೇಬಲ್(ಮೋಟಾರ್ ಮೆಕ್ಯಾನಿಕ್) ಹುದ್ದೆಗೆ 18 ರಿಂದ 25 ವರ್ಷಗಳು. (ಅಭ್ಯರ್ಥಿಗಳು 28 ಅಕ್ಟೋಬರ್ 2001 ಕ್ಕಿಂತ ಮುಂಚಿತವಾಗಿ ಮತ್ತು 27 ಅಕ್ಟೋಬರ್ 2008 ಕ್ಕಿಂತ ತಡವಾಗಿ ಜನಿಸಿರಬಾರದು).

ವಯೋಮಿತಿ ಸಡಿಲಿಕೆ: ನಿಯಮಗಳ ಪ್ರಕಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ(ಎನ್‌ಸಿಎಲ್) ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ. ಮಾಜಿ ಸೈನಿಕರು ಮತ್ತು ಸರ್ಕಾರಿ ನೌಕರರಿಗೂ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಈ ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:

  1. ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ)- ಓಟ, ಉದ್ದ ಜಿಗಿತ ಮತ್ತು ಎತ್ತರ ಜಿಗಿತ ಸ್ಪರ್ಧೆಗಳು (ಇದು ಕೇವಲ ಅರ್ಹತಾ ಪರೀಕ್ಷೆಯಾಗಿದ್ದು, ಯಾವುದೇ ಅಂಕಗಳಿರುವುದಿಲ್ಲ).
  2. ದೈಹಿಕ ಗುಣಮಟ್ಟ ಪರೀಕ್ಷೆ (ಪಿಎಸ್‌ಟಿ)- ಎತ್ತರ, ಎದೆ ಹಾಗೂ ತೂಕದ ಅಳತೆ.
  3. ದಾಖಲೆಗಳ ಪರಿಶೀಲನೆ- ಮೂಲ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ.
  4. ಲಿಖಿತ ಪರೀಕ್ಷೆ- 100 ಅಂಕಗಳ ವಸ್ತುನಿಷ್ಠ ಬಹು ಆಯ್ಕೆಯ (MCQ) ಲಿಖಿತ ಪರೀಕ್ಷೆ ನಡೆಯಲಿದೆ.
  5. ಪ್ರಾಯೋಗಿಕ/ಕೌಶಲ್ಯ ಪರೀಕ್ಷೆ – (ಕೇವಲ ಮೋಟಾರ್ ಮೆಕ್ಯಾನಿಕ್ ಹುದ್ದೆಗೆ ಮಾತ್ರ ಅನ್ವಯಿಸುತ್ತದೆ) ಇದು 50 ಅಂಕಗಳನ್ನು ಒಳಗೊಂಡಿರುತ್ತದೆ.
  6. ವೈದ್ಯಕೀಯ ಪರೀಕ್ಷೆ(ಡಿಎಂಇ/ಆರ್‌ಎಂಇ)- ದೈಹಿಕ ಮತ್ತು ಮಾನಸಿಕ ಆರೋಗ್ಯದ ತಪಾಸಣೆ ನಡೆಸಲಾಗುತ್ತದೆ.

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ (7th CPC) ಅನ್ವಯ ಪೇ ಮ್ಯಾಟ್ರಿಕ್ಸ್ ಲೆವೆಲ್-4ರ ಅಡಿಯಲ್ಲಿ ಪ್ರತಿ ತಿಂಗಳು ರೂ.25,500 ರಿಂದ ರೂ.81,100ರವರೆಗೆ ವೇತನ ಶ್ರೇಣಿ ಇರಲಿದೆ.

ಇದರೊಂದಿಗೆ ತುಟ್ಟಿಭತ್ಯೆ, ರೇಷನ್ ಮನಿ, ಉಚಿತ ವಸತಿ ಅಥವಾ ಮನೆ ಬಾಡಿಗೆ ಭತ್ಯೆ(HRA), ಸಾರಿಗೆ ಭತ್ಯೆ ಮತ್ತು ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ಇತರೆ ಭತ್ಯೆಗಳು ಲಭ್ಯವಿರುತ್ತವೆ.

ಅರ್ಜಿ ಶುಲ್ಕ:

  • ಸಾಮಾನ್ಯ(ಯುಆರ್),ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಪುರುಷ ಅಭ್ಯರ್ಥಿಗಳಿಗೆ ರೂ.100/-.
  • ಎಸ್‌ಸಿ, ಎಸ್‌ಟಿ, ಮಹಿಳಾ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ(ಶುಲ್ಕ ವಿನಾಯಿತಿ ನೀಡಲಾಗಿದೆ).

ಪಾವತಿ ವಿಧಾನ: ಶುಲ್ಕವನ್ನು ಆನ್‌ಲೈನ್ ಗೇಟ್‌ವೇ ಮೂಲಕವೇ ಪಾವತಿಸಬೇಕಾಗುತ್ತದೆ.

ಆನ್‌ಲೈನ್‌ ಅರ್ಜಿ ಪ್ರಕ್ರಿಯೆ ಹೇಗೆ.?

ಅರ್ಹ ಆಸಕ್ತ ಅಭ್ಯರ್ಥಿಗಳು ಇಂಡೋ ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ ಫೋರ್ಸ್‌ ಅಧಿಕೃತ ಜಾಲತಾಣ ಕ್ಕೆ ಭೇಟಿ ನೀಡಿ. ಹೊಸ ಬಳಕೆದಾರರಾಗಿ(NEW USER REGISTRATION) ಅಥವಾ ಲಾಗಿನ್‌ ಮಾಡಿಕೊಂಡು ಅರ್ಜಿ ನಮೂನೆಯನ್ನು ತುಂಬಿ ನಿಗದಿತ ಅರ್ಜಿ ಶುಲ್ಕ ಭರಿಸುವ ಮೂಲಕ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ಲಿಂಕ್‌ಗಳು:

ಅಧಿಕೃತ ಅಧಿಸೂಚನೆ(ಮೋಟಾರ್‌ ಮೆಕ್ಯಾನಿಕ್) ಪಿಡಿಎಫ್‌ ಲಿಂಕ್ಡೌನ್ಲೋಡ್‌ ಮಾಡಿ
ಅಧಿಕೃತ ಅಧಿಸೂಚನೆ(ಎಜುಕೇಶನ್‌ ಅಂಡ್‌ ಸ್ಟ್ರೇಸ್‌ ಕೌನ್ಸ‌ಲರ್) ಪಿಡಿಎಫ್‌ ಲಿಂಕ್ಡೌನ್ಲೋಡ್‌ ಮಾಡಿ
ಆನ್‌ಲೈನ್‌ ಅರ್ಜಿ ನಮೂನೆ ಲಿಂಕ್ಈಗಲೇ ಅರ್ಜಿ ಸಲ್ಲಿಸಿ
ಅಧಿಕೃತ ಜಾಲತಾಣitbpolice.nic.in
ಮತ್ತಷ್ಟು ಸುದ್ದಿಗಾಗಿಕರ್ನಾಟಕಹೆಲ್ಪ್‌.ಇನ್‌
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment