ಸಶಸ್ತ್ರ ಸೀಮಾ ಬಲ(SSB): 827 ಕಾನ್ಸ್ಟೇಬಲ್‌ಗಳ ಭರ್ತಿ

ಎಸ್ಸೆಸ್ಸೆಲ್ಸಿ ಅರ್ಹತೆ | ವಿವಿಧ ಹಂತದ ಆಯ್ಕೆ ಪ್ರಕ್ರಿಯೆ!

Published on:

Updated On:

ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ವು ಗ್ರೂಪ್‌ ‘ಸಿ’ ನಾನ್-ಗೆಜೆಟೆಡ್ ಹಾಗೂ ನಾನ್-ಮಿನಿಸ್ಟೀರಿಯಲ್‌ ನಾನಾ ಕಾನ್ಸ್ಟೇಬಲ್‌ ಹುದ್ದೆಗಳ ನೇಮಕಾತಿಯ ಅರ್ಜಿ ಸಲ್ಲಿಕೆ ಅವಧಿಯನ್ನು ಮೇ 04ರವೆರೆಗೆ ವಿಸ್ತರಿಸಲಾಗಿದೆ.

ಪಶುವೈದ್ಯಕೀಯ, ಚಾಲಕ, ಗಾರ್ಡನರ್, ವಾಟರ್ ಕ್ಯಾರಿಯರ್, ಕೋಬ್ಲರ್, ಟೈಲರ್ ಹಾಗೂ ವಾಷರ್ ಮ್ಯಾನ್ ಹಾಗೂ ಇತರೆ ಹುದ್ದೆಗಳೂ ಸೇರಿದಂತೆ ಒಟ್ಟು 827 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. ಎಸ್ಸೆಸ್ಸೆಲ್ಸಿ ಪಾಸಾದ ಆಸಕ್ತ ಉದ್ಯೋಗಾಕಾಂಕ್ಷಿಗಳು ಎಸ್‌ಎಸ್‌ಬಿ ಅಧಿಕೃತ ಜಾಲತಾಣದ ಲಿಂಕ್‌ https://applyssb.com/SSB_CT_25/applicationIndexಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಮಾರ್ಚ್ 21, 2026
  • ಅರ್ಜಿ ಸಲ್ಲಿಸಲು‌ ಕೊನೆಯ ದಿನಾಂಕ – ಮೇ 04, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಮೇ 04, 2026

ಖಾಲಿ ಇರುವ ಹುದ್ದೆಗಳ ವಿವರ:

ಕಾನ್ಸ್ಟೇಬಲ್‌(ಪಶುವೈದ್ಯಕೀಯ) – 34 ಹುದ್ದೆಗಳು
ಕಾನ್ಸ್ಟೇಬಲ್‌(ಚಾಲಕ) – 553 ಹುದ್ದೆಗಳು
ಕಾನ್ಸ್ಟೇಬಲ್‌(ಗಾರ್ಡನರ್) – 41 ಹುದ್ದೆಗಳು
ಕಾನ್ಸ್ಟೇಬಲ್‌(ವಾಟರ್ ಕ್ಯಾರಿಯರ್) – 05 ಹುದ್ದೆಗಳು
ಕಾನ್ಸ್ಟೇಬಲ್‌(ಕೋಬ್ಲರ್) – 25 ಹುದ್ದೆಗಳು
ಕಾನ್ಸ್ಟೇಬಲ್‌(ಟೈಲರ್) – 41 ಹುದ್ದೆಗಳು
ಕಾನ್ಸ್ಟೇಬಲ್‌(ವಾಷರ್‌ಮನ್) – 74 ಹುದ್ದೆಗಳು
ಕಾನ್ಸ್ಟೇಬಲ್‌(ಕ್ಷೌರಿಕ) – 43 ಹುದ್ದೆಗಳು
ಕಾನ್ಸ್ಟೇಬಲ್‌(ವೈಟರ್) – 03 ಹುದ್ದೆಗಳು
ಕಾನ್ಸ್ಟೇಬಲ್‌(ಕಾರ್ಪೆಂಟರ್) – 07 ಹುದ್ದೆಗಳು
ಕಾನ್ಸ್ಟೇಬಲ್‌(ನರ್ಸಿಂಗ್ ಆರ್ಡರ್ಲಿ) – 01 ಹುದ್ದೆ

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಹುದ್ದೆಗಳಿಗೆ ಅನುಗುಣವಾಗಿ ವಿಜ್ಞಾನ ವಿಷಯದೊಂದಿಗೆ 10ನೇ ತರಗತಿ ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಜೊತೆಗೆ ವೃತ್ತಿ ಸಂಬಂಧಿತ ಕ್ಷೇತ್ರದಲ್ಲಿ ಕೋರ್ಸ್ ಪೂರ್ಣಗೊಳಿಸಿದ ಪ್ರಮಾಣಪತ್ರದೊಂದಿಗೆ ಕನಿಷ್ಠ 01 ವರ್ಷಗಳ ವೃತ್ತಿ ಅನುಭವವನ್ನು ಹೊಂದಿರಬೇಕು.

• ಚಾಲಕ ಹುದ್ದೆಗಳಿಗೆ ಭಾರೀ ವಾಹನ ಚಾಲನಾ ಪರವಾನಗಿಯನ್ನು ಹೊಂದಿರಬೇಕು.

ವಯೋಮಿತಿ:

✓ ಕಾನ್ಸ್ಟೇಬಲ್‌(ಪಶುವೈದ್ಯಕೀಯ, ಚಾಲಕ ಹಾಗೂ ನರ್ಸಿಂಗ್ ಆರ್ಡರ್ಲಿ) ಹುದ್ದೆಗಳಿಗೆ; ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ 27 ವರ್ಷಗಳು.

✓ಕಾನ್ಸ್ಟೇಬಲ್‌(ಕಾರ್ಪೆಂಟರ್) ಹುದ್ದೆಗಳಿಗೆ; ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ 25 ವರ್ಷಗಳು.

✓ ಉಳಿದ ಎಲ್ಲಾ ಹುದ್ದೆಗಳಿಗೂ; ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ 23 ವರ್ಷಗಳು.

ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ 05 ವರ್ಷಗಳು, ಮಾಜಿ ಸೈನಿಕರು ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಇಲಾಖೆಯ ಅಭ್ಯರ್ಥಿಗಳಿಗೆ:- ಸಾಮಾನ್ಯ ಅಭ್ಯರ್ಥಿಗಳಿಗೆ 40 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 43 ವರ್ಷ ಮತ್ತು ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳಿಗೆ 45 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ:

  • ದೈಹಿಕ ದಕ್ಷತೆ ಪರೀಕ್ಷೆ (PET)
  • ದೈಹಿಕ ಗುಣಮಟ್ಟ ಪರೀಕ್ಷೆ (PST)
  • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
  • ದಾಖಲಾತಿ ಮತ್ತು ಕೌಶಲ್ಯ ಪರೀಕ್ಷೆ
  • ದಾಖಲೆ ಪರಿಶೀಲನೆ (DV)

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಎಸ್‌ಎಸ್‌ಬಿ ನಿಯಮಗಳ ಅನುಸಾರ ಪ್ರತಿ ತಿಂಗಳು 21,700ರೂ. ಗಳಿಂದ 69,100ರೂ. ವರೆಗೆ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – ₹100
ಪ.ಜಾತಿ, ಪ.ಪಂಗಡ, ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ – ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ಅರ್ಜಿ‌ ಸಲ್ಲಿಸುವ ವಿಧಾನ

• ಅಭ್ಯರ್ಥಿಗಳು SSB ಅಧಿಕೃತ ಜಾಲತಾಣ https://recruitment.ssb.gov.in/advertisementsUrlಕ್ಕೆ ಭೇಟಿ ನೀಡಿ.

• ಬಳಿಕ “ಜಾಹೀರಾತು” ಶೀರ್ಷಿಕೆಯ ಕೆಳಗೆ ನೀಡಲಾಗಿರುವ *SSB ಯಲ್ಲಿ ಕಾನ್ಸ್ಟೇಬಲ್‌(ನಾನ್-ಜಿಡಿ) ಹುದ್ದೆಗೆ ಜಾಹೀರಾತು(524/RC/SSB/CombinedAdvt./CT_to_SI(Non-GD)/2025)* ಅಪ್ಲೈ ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಬಳಿಕ *ಅನ್ವಯಿಸು* ಆಯ್ಕೆಯನ್ನು ಆರಿಸಿ.

• ಹೊಸ ಬಳಕೆದಾರರಾಗಿದ್ದಲ್ಲಿ, ನೋಂದಾಯಿಸಿ ಅಥವಾ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

Ssb Constable (Group C, Non-Gd) Online Form 2026
Sb Constable (Group C, Non-Gd) Online Form 2026

• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಗಳನ್ನು ಅಪ್ಲೋಡ್ ಮಾಡಿ.

• ಮುಂದುವರೆದಂತೆ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.

• ಅಂತಿಮವಾಗಿ ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.

Important Direct Links:

SSB Online Form Last Date Extension Notice PDF(Dated on 20/04/2026)Download
Official Notification PDFDownload
Online Application Form LinkApply Now
Official Websitehttps://ssb.gov.in/
More UpdatesKarnatakahelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment