SSB ಕಾನ್ಸ್ಟೇಬಲ್(ಜಿಡಿ) ಕ್ರೀಡಾ ಕೋಟಾ ನೇಮಕಾತಿ

ನವದೆಹಲಿ: ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್‌)ಯಲ್ಲೊಂದಾದ ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ವು ಕ್ರೀಡಾ ಕೋಟಾದಡಿ ಗ್ರೂಪ್ ‘ಸಿ’ ಕಾನ್ಸ್ಟೇಬಲ್(ಸಾಮಾನ್ಯ ಕರ್ತವ್ಯ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಜೂನ್ 07ರವರೆಗೆ ಕಾಲಾವಕಾಶವಿದೆ. ಒಟ್ಟು 404 ಸ್ಥಾನಗಳಿಗೆ ಕ್ರೀಡಾ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಮತ್ತು ಅರ್ಹ ಅರ್ಜಿದಾರರು ಎಸ್‌ಎಸ್‌ಬಿ ಅಧಿಕೃತ ಜಾಲತಾಣ https://applyssb.com/SSBSports_CT_GD_26/applicationIndexಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: … More

ಸಶಸ್ತ್ರ ಸೀಮಾ ಬಲ(SSB): 827 ಕಾನ್ಸ್ಟೇಬಲ್‌ಗಳ ಭರ್ತಿ

ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ವು ಗ್ರೂಪ್‌ ‘ಸಿ’ ನಾನ್-ಗೆಜೆಟೆಡ್ ಹಾಗೂ ನಾನ್-ಮಿನಿಸ್ಟೀರಿಯಲ್‌ ನಾನಾ ಕಾನ್ಸ್ಟೇಬಲ್‌ ಹುದ್ದೆಗಳ ನೇಮಕಾತಿಯ ಅರ್ಜಿ ಸಲ್ಲಿಕೆ ಅವಧಿಯನ್ನು ಮೇ 04ರವೆರೆಗೆ ವಿಸ್ತರಿಸಲಾಗಿದೆ. ಪಶುವೈದ್ಯಕೀಯ, ಚಾಲಕ, ಗಾರ್ಡನರ್, ವಾಟರ್ ಕ್ಯಾರಿಯರ್, ಕೋಬ್ಲರ್, ಟೈಲರ್ ಹಾಗೂ ವಾಷರ್ ಮ್ಯಾನ್ ಹಾಗೂ ಇತರೆ ಹುದ್ದೆಗಳೂ ಸೇರಿದಂತೆ ಒಟ್ಟು 827 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. ಎಸ್ಸೆಸ್ಸೆಲ್ಸಿ ಪಾಸಾದ ಆಸಕ್ತ ಉದ್ಯೋಗಾಕಾಂಕ್ಷಿಗಳು ಎಸ್‌ಎಸ್‌ಬಿ ಅಧಿಕೃತ ಜಾಲತಾಣದ ಲಿಂಕ್‌ https://applyssb.com/SSB_CT_25/applicationIndexಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಪ್ರಮುಖ ದಿನಾಂಕಗಳು: ಖಾಲಿ ಇರುವ … More

ಸಶಸ್ತ್ರ ಸೀಮಾ ಬಲ: ಹೆಡ್ ಕಾನ್ಸ್ಟೇಬಲ್‌ ನೇಮಕಾತಿ

ಭಾರತೀಯ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲೊಂದಾಗಿರುವ ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ದಲ್ಲಿ 76 ಗ್ರೂಪ್-‘ಸಿ’ ನಾನ್-ಗೆಜೆಟೆಡ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಅವಧಿಯನ್ನು ಮೇ 04ರವೆರೆಗೆ ವಿಸ್ತರಿಸಲಾಗಿದೆ. ಹೆಡ್ ಕಾನ್ಸ್ಟೇಬಲ್(ಪ್ರಯೋಗಾಲಯ ಸಹಾಯಕ) 30 ಸ್ಥಾನ, ಹೆಡ್ ಕಾನ್ಸ್ಟೇಬಲ್(ಫಿಸಿಯೋಥೆರಪಿ ಸಹಾಯಕ) 12 ಸ್ಥಾನ ಹಾಗೂ ಕಾನ್ಸ್ಟೇಬಲ್‌(ನರ್ಸಿಂಗ್ ಅಸಿಸ್ಟೆಂಟ್ ಕಮ್ ಮೆಡಿಕ್) 34 ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಎಸ್‌ಎಸ್‌ಬಿ ಅಧಿಕೃತ ಜಾಲತಾಣದ ಲಿಂಕ್‌ https://applyssb.com/SSB_ADVT_MED_2026/applicationIndexಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ … More

SSBಯಲ್ಲಿ ಸಬ್‌ಇನ್ಸ್ಪೇಕ್ಟರ್‌ & ಸಹಾಯಕ ಸಬ್‌ಇನ್ಸ್ಪೇಕ್ಟರ್‌ ಹುದ್ದೆಗಳ ಭರ್ತಿ

ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ದಲ್ಲಿ ಗ್ರೂಪ್ ‘ಬಿ’ ಹಾಗೂ ಗ್ರೂಪ್ ‘ಸಿ’ ನಾನ್‌-ಗೆಜೆಟೆಡ್‌ ನಾನಾ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಯಾಗಿದ್ದು, ಅರ್ಜಿ ಸಲ್ಲಿಕೆಗೆ ಮೇ 04ರವರೆಗೆ ಗಡುವು ವಿಸ್ತರಿಸಲಾಗಿದೆ. ಸಬ್‌ಇನ್ಸ್ಪೇಕ್ಟರ್‌(ಸ್ಟಾಫ್‌ ನರ್ಸ್‌, ಪಿಯೋನೀರ್‌, ಕಮ್ಯುನಿಕೇಶನ್‌) 51 ಸ್ಥಾನಗಳು, ಸಹಾಯಕ ಸಬ್ ಇನ್ಸ್‌ಪೆಕ್ಟರ್ ರೇಡಿಯೋಗ್ರಾಫರ್‌, ಫಾರ್ಮಸಿಸ್ಟ್‌, ಆಪರೇಷನ್‌ ಥಿಯೇಟರ್‌ ಟೆಕ್ನಿಷಿಯನ್‌, ಡೆಂಟಲ್‌ ಟೆಕ್ನಿಷಿಯನ್‌) 07 ಸೇರಿದಂತೆ ಒಟ್ಟು 58 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದ್ದು, ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಿ, ಆಸಕ್ತರು ಎಸ್‌ಎಸ್‌ಬಿ ಅಧಿಕೃತ ಜಾಲತಾಣ … More