ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ದಲ್ಲಿ ಗ್ರೂಪ್ ‘ಬಿ’ ಹಾಗೂ ಗ್ರೂಪ್ ‘ಸಿ’ ನಾನ್-ಗೆಜೆಟೆಡ್ ನಾನಾ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಯಾಗಿದ್ದು, ಅರ್ಜಿ ಸಲ್ಲಿಕೆಗೆ ಮೇ 04ರವರೆಗೆ ಗಡುವು ವಿಸ್ತರಿಸಲಾಗಿದೆ.
ಸಬ್‌ಇನ್ಸ್ಪೇಕ್ಟರ್(ಸ್ಟಾಫ್ ನರ್ಸ್, ಪಿಯೋನೀರ್, ಕಮ್ಯುನಿಕೇಶನ್) 51 ಸ್ಥಾನಗಳು, ಸಹಾಯಕ ಸಬ್ ಇನ್ಸ್‌ಪೆಕ್ಟರ್ ರೇಡಿಯೋಗ್ರಾಫರ್, ಫಾರ್ಮಸಿಸ್ಟ್, ಆಪರೇಷನ್ ಥಿಯೇಟರ್ ಟೆಕ್ನಿಷಿಯನ್, ಡೆಂಟಲ್ ಟೆಕ್ನಿಷಿಯನ್) 07 ಸೇರಿದಂತೆ ಒಟ್ಟು 58 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದ್ದು, ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಿ, ಆಸಕ್ತರು ಎಸ್‌ಎಸ್‌ಬಿ ಅಧಿಕೃತ ಜಾಲತಾಣ https://recruitment.ssb.gov.in/ಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಮಾರ್ಚ್ 21, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮೇ 04, 2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಮೇ 04, 2026
ಖಾಲಿ ಇರುವ ಹುದ್ದೆಗಳ ವಿವರ:
ಸಬ್‌ಇನ್ಸ್ಪೇಕ್ಟರ್(ಸ್ಟಾಫ್ ನರ್ಸ್) 10 ಹುದ್ದೆಗಳು
ಸಬ್‌ಇನ್ಸ್ಪೇಕ್ಟರ್(ಪಿಯೋನೀರ್) 21 ಹುದ್ದೆಗಳು
ಸಬ್‌ಇನ್ಸ್ಪೇಕ್ಟರ್(ಕಮ್ಯುನಿಕೇಷನ್) 20 ಹುದ್ದೆಗಳು
ಸಹಾಯಕ ಸಬ್‌ಇನ್ಸ್ಪೇಕ್ಟರ್(ರೇಡಿಯೋಗ್ರಾಫರ್) 03 ಹುದ್ದೆಗಳು
ಸಹಾಯಕ ಸಬ್‌ಇನ್ಸ್ಪೇಕ್ಟರ್(ಫಾರ್ಮಸಿಸ್ಟ್) 02 ಹುದ್ದೆಗಳು
ಸಹಾಯಕ ಸಬ್‌ಇನ್ಸ್ಪೇಕ್ಟರ್(ಆಪರೇಷನ್ ಥಿಯೇಟರ್ ಟೆಕ್ನಿಷಿಯನ್)01 ಹುದ್ದೆ
ಸಹಾಯಕ ಸಬ್‌ಇನ್ಸ್ಪೇಕ್ಟರ್(ಡೆಂಟಲ್ ಟೆಕ್ನಿಷಿಯನ್)01 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ದ್ವಿತೀಯ ಪಿಯುಸಿ ಉತ್ತೀರ್ಣ, ಸಂಬಂಧಿತ ವಿಭಾಗದಲ್ಲಿ ಪದವಿ, ಡಿಪ್ಲೋಮಾ, ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
✓ ಸಹಾಯಕ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ; ಕನಿಷ್ಠ ಮಿತಿ 18 ವರ್ಷಗಳು, ಗರಿಷ್ಠ ಮಿತಿ 27 ವರ್ಷಗಳು.
✓ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ; ಗರಿಷ್ಠ ಮಿತಿ 30 ವರ್ಷಗಳು.
ವಯೋಮಿತಿ ಸಡಿಲಿಕೆ; ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ 05 ವರ್ಷಗಳು, ಮಾಜಿ ಸೈನಿಕರು ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಇಲಾಖೆಯ ಅಭ್ಯರ್ಥಿಗಳಿಗೆ- ಸಾಮಾನ್ಯ ಅಭ್ಯರ್ಥಿಗಳಿಗೆ 40 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 43 ವರ್ಷ ಮತ್ತು ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳಿಗೆ 45 ವರ್ಷಗಳವರೆಗೆ.
ಆಯ್ಕೆ ಪ್ರಕ್ರಿಯೆ:
- ದೈಹಿಕ ಗುಣಮಟ್ಟ ಪರೀಕ್ಷೆ (PST)
- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
- ದಾಖಲಾತಿ ಮತ್ತು ವಿವರವಾದ ವೈದ್ಯಕೀಯ ಪರೀಕ್ಷೆ & ವೈದ್ಯಕೀಯ ಪರೀಕ್ಷೆಯ ಪುನರ್ವಿಮರ್ಶೆ (DME&RME)
- ದಾಖಲೆ ಪರಿಶೀಲನೆ (DV)
ಸಂಬಳ:
ಸಹಾಯಕ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ₹29,200 ಗಳಿಂದ ₹92,300
ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ₹35,400 ಗಳಿಂದ ₹1,12,400
ಅರ್ಜಿ ಶುಲ್ಕ:
• ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – ₹200
• ಸಹಾಯಕ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – ₹100
• ಎಲ್ಲಾ ಹುದ್ದೆಗಳಿಗೂ ಅರ್ಜಿ ಸಲ್ಲಿಸುವ ಪ.ಜಾತಿ, ಪ.ಪಂಗಡ ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ – ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
• ಅಭ್ಯರ್ಥಿಗಳು SSB ಅಧಿಕೃತ ಜಾಲತಾಣ https://recruitment.ssb.gov.in/ ಕ್ಕೆ ಭೇಟಿ ನೀಡಿ.
• ಬಳಿಕ “ಜಾಹೀರಾತು” ಶೀರ್ಷಿಕೆಯ ಕೆಳಗೆ ನೀಡಲಾಗಿರುವ *ಸಬ್ ಇನ್ಸ್ಪೆಕ್ಟರ್ ಅಥವಾ ಸಹಾಯಕ ಸಬ್ ಇನ್ಸ್ಪೆಕ್ಟರ್* ನೀವು ಅರ್ಜಿ ಸಲ್ಲಿಸಬಯಸುವ ಹುದ್ದೆಯ ಮೇಲೆ ಅಪ್ಲೈ ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಬಳಿಕ *ಅನ್ವಯಿಸು* ಆಯ್ಕೆಯನ್ನು ಆರಿಸಿ.
• ಹೊಸ ಬಳಕೆದಾರರಾಗಿದ್ದಲ್ಲಿ, ನೋಂದಾಯಿಸಿ ಅಥವಾ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಗಳನ್ನು ಅಪ್ಲೋಡ್ ಮಾಡಿ.
• ಮುಂದುವರೆದಂತೆ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.
• ಅಂತಿಮವಾಗಿ ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
Important Direct Links:
| SSB Online Form Last Date Extension Notice PDF(Dated on 20/04/2026) | Download |
| SSB Sub Inspector Official Notification PDF | Download |
| SSB ASI Official Notification PDF | Download |
| SSB SI Online Application Form Link | Apply Now |
| SSB ASI Online Application Form Link | Apply Now |
| Official Website | https://ssb.gov.in/ |
| More Updates | KarnatakaHelp.in |