ಭಾರತೀಯ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲೊಂದಾಗಿರುವ ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ದಲ್ಲಿ 76 ಗ್ರೂಪ್-‘ಸಿ’ ನಾನ್-ಗೆಜೆಟೆಡ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಅವಧಿಯನ್ನು ಮೇ 04ರವೆರೆಗೆ ವಿಸ್ತರಿಸಲಾಗಿದೆ.
ಹೆಡ್ ಕಾನ್ಸ್ಟೇಬಲ್(ಪ್ರಯೋಗಾಲಯ ಸಹಾಯಕ) 30 ಸ್ಥಾನ, ಹೆಡ್ ಕಾನ್ಸ್ಟೇಬಲ್(ಫಿಸಿಯೋಥೆರಪಿ ಸಹಾಯಕ) 12 ಸ್ಥಾನ ಹಾಗೂ ಕಾನ್ಸ್ಟೇಬಲ್(ನರ್ಸಿಂಗ್ ಅಸಿಸ್ಟೆಂಟ್ ಕಮ್ ಮೆಡಿಕ್) 34 ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಎಸ್‌ಎಸ್‌ಬಿ ಅಧಿಕೃತ ಜಾಲತಾಣದ ಲಿಂಕ್ https://applyssb.com/SSB_ADVT_MED_2026/applicationIndexಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಮಾರ್ಚ್ 21, 2026
- ಅರ್ಜಿ ಸಲ್ಲಿಸಲು ಮತ್ತು ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ – ಮೇ 04, 2026
ಶೈಕ್ಷಣಿಕ ಅರ್ಹತೆ
✓ ಹೆಡ್ ಕಾನ್ಸ್ಟೇಬಲ್(ಪ್ರಯೋಗಾಲಯ ಸಹಾಯಕ) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಜೀವಶಾಸ್ತ್ರ ವಿಷಯದೊಂದಿಗೆ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಪ್ರಯೋಗಾಲಯ ಸಹಾಯಕ ಕೋರ್ಸ್ ಪ್ರಮಾಣಪತ್ರದೊಂದಿಗೆ ಪ್ರಯೋಗಾಲಯ ಸಹಾಯಕರಾಗಿ ಕನಿಷ್ಠ 01 ವರ್ಷದ ವೃತ್ತಿ ಅನುಭವವನ್ನು ಹೊಂದಿರಬೇಕು.
✓ ಹೆಡ್ ಕಾನ್ಸ್ಟೇಬಲ್(ಫಿಸಿಯೋಥೆರಪಿ ಸಹಾಯಕ) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಫಿಸಿಯೋಥೆರಪಿ ಕೋರ್ಸ್ ಪ್ರಮಾಣಪತ್ರದೊಂದಿಗೆ ಫಿಸಿಯೋಥೆರಪಿ ಸಹಾಯಕರಾಗಿ ಕನಿಷ್ಠ 01 ವರ್ಷದ ವೃತ್ತಿ ಅನುಭವವನ್ನು ಹೊಂದಿರಬೇಕು.
✓ ಕಾನ್ಸ್ಟೇಬಲ್(ನರ್ಸಿಂಗ್ ಅಸಿಸ್ಟೆಂಟ್ ಕಮ್ ಮೆಡಿಕ್) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು ಹಾಗೂ ಪ್ರಥಮ ಚಿಕಿತ್ಸಾ ಕೋರ್ಸ್ ಪ್ರಮಾಣಪತ್ರದೊಂದಿಗೆ ನರ್ಸಿಂಗ್ ಸಹಾಯಕರಾಗಿ ಕನಿಷ್ಠ 01 ವರ್ಷದ ವೃತ್ತಿ ಅನುಭವವನ್ನು ಹೊಂದಿರಬೇಕು.
ವಯೋಮಿತಿ:
ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ 27 ವರ್ಷಗಳು
ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ 05 ವರ್ಷಗಳು, ಮಾಜಿ ಸೈನಿಕರು ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಇಲಾಖೆಯ ಅಭ್ಯರ್ಥಿಗಳಿಗೆ:- ಸಾಮಾನ್ಯ ಅಭ್ಯರ್ಥಿಗಳಿಗೆ 40 ವರ್ಷ ವರ್ಷಗಳವರೆಗೆ ಮತ್ತು ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳಿಗೆ 45 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
- ದೈಹಿಕ ದಕ್ಷತೆ ಪರೀಕ್ಷೆ (PET)
- ದೈಹಿಕ ಗುಣಮಟ್ಟ ಪರೀಕ್ಷೆ (PST)
- ಲಿಖಿತ ಪರೀಕ್ಷೆ
- ದಾಖಲಾತಿ ಮತ್ತು ವಿವರವಾದ ವೈದ್ಯಕೀಯ ಪರೀಕ್ಷೆ (DME)
- ದಾಖಲೆ ಪರಿಶೀಲನೆ (DV)
ಸಂಬಳ:
ಹೆಡ್ ಕಾನ್ಸ್ಟೇಬಲ್ (ಪ್ರಯೋಗಾಲಯ ಸಹಾಯಕ ಹಾಗೂ ಫಿಸಿಯೋಥೆರಪಿ ಸಹಾಯಕ) ಹುದ್ದೆಗಳಿಗೆ – ₹25,500ಗಳಿಂದ ₹81,100/-
ಕಾನ್‌ಸ್ಟೆಬಲ್ (ನರ್ಸಿಂಗ್ ಅಸಿಸ್ಟೆಂಟ್ ಕಮ್ ಮೆಡಿಕ್) ಹುದ್ದೆಗಳಿಗೆ – ₹21,700 ಗಳಿಂದ ₹69,100/-
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – ₹100
ಪ.ಜಾತಿ, ಪ.ಪಂಗಡ ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ – ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
•ಅಭ್ಯರ್ಥಿಗಳು SSB ಅಧಿಕೃತ ಜಾಲತಾಣದ ಲಿಂಕ್ https://applyssb.com/SSB_ADVT_MED_2026/applicationIndexಗೆ ಭೇಟಿ ನೀಡಿ.
• ಬಳಿಕ *ಅನ್ವಯಿಸು* ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಹೊಸ ಬಳಕೆದಾರರಾಗಿದ್ದಲ್ಲಿ, ನೋಂದಾಯಿಸಿ ಅಥವಾ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಗಳನ್ನು ಅಪ್ಲೋಡ್ ಮಾಡಿ.
• ಮುಂದುವರೆದಂತೆ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.
• ಅಂತಿಮವಾಗಿ ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
Important Direct Links:
| SSB Online Form Last Date Extension Notice PDF(Dated on 20/04/2026) | Download |
| Official Notification PDF | Download |
| Online Application Form Link | Apply Now |
| Official Website | https://ssb.gov.in/ |
| More Updates | KarnatakaHelp.in |