ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥ (ISRO) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥ (ISRO) ವಲಿಯಮಲ, ತಿರುವನಂತಪುರಂ ಮತ್ತು ಬೆಂಗಳೂರಿನಲ್ಲಿರುವ ತನ್ನ ಘಟಕಗಳ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (ISRO LPSC) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಈ ನೇಮಕಾತಿಯಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್, ಟೆಕ್ನಿಷಿಯನ್ ‘ಬಿ’, ಹೆವಿ ವೆಹಿಕಲ್ ಡ್ರೈವರ್, ಲೈಟ್ ವೆಹಿಕಲ್ ಡ್ರೈವರ್ ಮತ್ತು ಕುಕ್ ಸೇರಿದಂತೆ ಒಟ್ಟು 30 ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಹ ಮತ್ತ ಆಸಕ್ತ ಅಭ್ಯರ್ಥಿಗಳು ISRO LPSC Recruitment 2024 ಕ್ಕೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ lpsc.gov.in ಸೆಪ್ಟೆಂಬರ್ 10 ರ ಒಳಗೆ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.
Shortview of ISRO LPSC Notification 2024
Organization Name – Liquid Propulsion Systems Centre Bangalore Post Name – Technical Assistant, Technician ‘B’, HVD ‘A’, LVD ‘A’ and Cook Total Vacancy – 30 Application Process: online Job Location – Bangalore
ನೇಮಕಾತಿಯ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಆಗಸ್ಟ್ 27, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 10 2024
ಶೈಕ್ಷಣಿಕ ಅರ್ಹತೆಗಳು:
ತಾಂತ್ರಿಕ ಸಹಾಯಕ ಹುದ್ದೆಗಳಿಗೆ – ಡಿಪ್ಲೋಮಾ ಇನ್ ಇಂಜಿನಿಯರಿಂಗ್ (3 ವರ್ಷ) ಪ್ರಥಮ ದರ್ಜೆಯಲ್ಲಿ ಪಾಸ್ ಮಾಡಿರಬೇಕು.
ಟೆಕ್ನಿಷಿಯನ್ ಹುದ್ದೆಗಳಿಗೆ – SSLC ಪಾಸ್ + ಸಂಬಂಧಿಸಿದ ಟ್ರೇಡ್ ನಲ್ಲಿ ITI ಪಾಸ್ ಮಾಡಿರಬೇಕು.
ಹೆವಿ ವೆಹಿಕಲ್ ಡ್ರೈವರ್ ‘ಎ’ ಹುದ್ದೆಗಳಿಗೆ – SSLC ಪಾಸ್ + ಮೂರು ವರ್ಷಗಳ ಹೆವಿ ವೆಹಿಕಲ್ ಓಡಿಸಿರುವ ಅನುಭವ ಇರಬೇಕು
ಲಘು ವಾಹನ ಚಾಲಕ ‘ಎ’ ಹುದ್ದೆಗಳಿಗೆ – SSLC ಪಾಸ್ + ಮೂರು ವರ್ಷಗಳ ಲೈಟ್ ವೆಹಿಕಲ್ ಓಡಿಸಿರುವ ಅನುಭವ ಇರಬೇಕು.
ಅಡುಗೆ ಮಾಡುವವರ ಹುದ್ದೆಗಳಿಗೆ – SSLC ಪಾಸ್ + 5 ವರ್ಷಗಳ ಅಡಿಗೆ ವಿಭಾಗದಲ್ಲಿ ಅನುಭವ ಇರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ಗರಿಷ್ಠ 35 ವರ್ಷದ ಒಳಗಿರಬೇಕು.
ವೇತನ ವಿವರ:
ತಾಂತ್ರಿಕ ಸಹಾಯಕ ಹುದ್ದೆಗಳಿಗೆ – ₹44,900 – ₹1,42,400
ಟೆಕ್ನಿಷಿಯನ್ ಹುದ್ದೆಗಳಿಗೆ – ₹21,700 – ₹69,100
ಹೆವಿ ವೆಹಿಕಲ್ ಡ್ರೈವರ್ ‘ಎ’ ಹುದ್ದೆಗಳಿಗೆ – ₹19,900 – ₹63,200
ಲಘು ವಾಹನ ಚಾಲಕ ‘ಎ’ ಹುದ್ದೆಗಳಿಗೆ – ₹19,900 – ₹63,200
ಅಡುಗೆ ಮಾಡುವವರ ಹುದ್ದೆಗಳಿಗೆ – ₹19,900 – ₹63,200
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಕೌಶಲ್ಯಗಳ ಪರೀಕ್ಷೆ
ದಾಖಲೆಗಳ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ – ₹750
ಪಾವತಿ ವಿಧಾನ – ಆನ್ಲೈನ್
ಲಿಖಿತ ಪರೀಕ್ಷೆಗೆ ಹಾಜರಾದ ಸಾಮಾನ್ಯ ಅಭ್ಯರ್ಥಿಗಳಿಗೆ ₹500 ಗಳನ್ನು ಮರುಪಾವತಿ ಮಾಡಲಾಗುತ್ತದೆ.
SC/ST ಮತ್ತು ಮಾಜಿ ಸೈನಿಕ, ಮಹಿಳಾ ಮಹಿಳಾ ಅಭ್ಯರ್ಥಿಗಳಿಗೆ ₹750 ಮರುಪಾವತಿ ಮಾಡಲಾಗುತ್ತದೆ.