Jamkhandi Urban Bank Cooperative Bank (JMUCB) Recruitment 2025
ಬಾಗಲಕೋಟೆ ಜಿಲ್ಲೆಯ ದಿ ಜಮಖಂಡಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ವಿವಿಧ ವೃಂದಗಳಲ್ಲಿ ಖಾಲಿ ಇರುವ ಕಿರಿಯ ಸಹಾಯಕರು, ಗಣಕಯಂತ್ರ ನಿರ್ವಾಹಕರು, ಸಿಪಾಯಿ, ರಾತ್ರಿ ಕಾವಲುಗಾರರು, ವಾಹನ ಚಾಲಕರು ಹಾಗೂ ಗನ್ ಮ್ಯಾನ್ ಸೇರಿದಂತೆ ಒಟ್ಟು 45 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ಜಾಲತಾಣ www.thejamkhandiurbanbank.comಕ್ಕೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಬ್ಯಾಂಕಿನ ಸದಸ್ಯ ಕಾರ್ಯದರ್ಶಿ, ಸಿಬ್ಬಂದಿ ನೇಮಕಾತಿ ಸಮಿತಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 27, 2025
ಹುದ್ದೆಗಳ ವಿವರ ಹಾಗೂ ಶೈಕ್ಷಣಿಕ ಅರ್ಹತೆ:
✓ ಕಿರಿಯ ಸಹಾಯಕರು (14 ಹುದ್ದೆಗಳು) – ಅಭ್ಯರ್ಥಿಗಳು ದ್ವಿತೀಯ ಪಿ.ಯು.ಸಿ(PUC)ಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಕನ್ನಡವನ್ನು ಓದುವ ಸಾಮರ್ಥದ ಜೊತೆ ಕನ್ನಡದ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಮತ್ತು ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಶನ್ ಜ್ಞಾನವಿರಬೇಕು.
• ಪದವಿ ಪೂರ್ಣಗೊಳಿಸಿ ಹಾಗೂ ವೃತ್ತಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
✓ ಗಣಕಯಂತ್ರ ನಿರ್ವಾಹಕರು (04 ಹುದ್ದೆಗಳು) – ಅಭ್ಯರ್ಥಿಗಳು ದ್ವಿತೀಯ ಪಿ.ಯು.ಸಿಯಲ್ಲಿ ಅಥವಾ ಮೂರು ವರ್ಷದ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ನಲ್ಲಿ ಉತ್ತೀರ್ಣರಾಗಿರಬೇಕು.
• ಸೀನಿಯರ್ ಕನ್ನಡ/ಇಂಗ್ಲೀಷ್ ಟೈಪ್ ರೈಟಿಂಗ್ನಲ್ಲಿ ಉತ್ತೀರ್ಣ ಅಥವಾ ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಶನ್ ಜ್ಞಾನವಿರಬೇಕು ಮತ್ತು ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡದ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳವ ಸಾಮರ್ಥವಿರಬೇಕು.
• ಬ್ಯಾಚುಲರ್ ಆಫ್ ಇಂಜಿನೀಯರಿಂಗ್ (Computer Science/Information Science/Electronic and Communication) ಪದವಿಯನ್ನು ಹೊಂದಿದ ಹಾಗೂ ವೃತ್ತಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
✓ ರಾತ್ರಿ ಕಾವಲುಗಾರ (08 ಹುದ್ದೆಗಳು) – ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣರಾಗಿರಬೇಕು, ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು ಹಾಗೂ ಮಾಜಿ ಸೈನಿಕರಿಗೆ ಆದ್ಯತೆ ನೀಡಲಾಗುವುದು.
✓ ವಾಹನ ಚಾಲಕ (02 ಹುದ್ದೆಗಳು) – ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣರಾಗಿದ್ದು, ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು ಹಾಗೂ ಕಾನೂನುಬದ್ಧ ಲಘು ವಾಹನ ಹಾಗೂ ಭಾರಿ ವಾಹನ ಚಾಲನೆ ಪರವಾನಿಗೆಯೊಂದಿಗೆ 5 ವರ್ಷದ ಅನುಭವ ಹೊಂದಿರಬೇಕು.
✓ ಗನ್ ಮ್ಯಾನ್ (01 ಹುದ್ದೆಗೆ) – ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣ ಜೊತೆಗೆ ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು ಹಾಗೂ ಮಾಜಿ ಸೈನಿಕರಿಗೆ ಆದ್ಯತೆ ನೀಡಲಾಗುವುದು.
ವಯೋಮಿತಿ:
27-09-2025 ರಂತೆ;
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಪ.ಜಾತಿ, ಪ.ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-1 ಅಭ್ಯರ್ಥಿಗಳಿಗೆ – 40 ವರ್ಷಗಳು
ಇತರೆ ಹಿಂದುಳಿದ ವರ್ಗದ 2-ಎ, 2-ಬಿ, 3-ಎ ಮತ್ತು 3-ಬಿ ಅಭ್ಯರ್ಥಿಗಳಿಗೆ – 38 ವರ್ಷಗಳು
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – 35 ವರ್ಷಗಳು
ಮಾಜಿ ಸೈನಿಕ ಅಭ್ಯರ್ಥಿಗೆಅಭ್ಯರ್ಥಿಗಳಿಗೆ – 45 ವರ್ಷಗಳು
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಆಧಾರಿತವಾಗಿ 21,400-62,600 ರೂ. ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಕಿರಿಯ ಸಹಾಯಕರು ಹಾಗೂ ಗಣಕಯಂತ್ರ ನಿರ್ವಾಹಕ ಹುದ್ದೆಗಳಿಗೆ; ಹಿಂದುಳಿದ ವರ್ಗ 2-ಎ, 2-ಬಿ, 3-ಎ ಹಾಗೂ 3-ಬಿ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – 2,000ರೂ. ಜೊತೆಗೆ ಜಿ ಎಸ್ ಟಿ 18%.
ಪ.ಜಾತಿ, ಪ.ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-1 ಅಭ್ಯರ್ಥಿಗಳಿಗೆ 1,000ರೂ. ಜೊತೆಗೆ ಜಿ ಎಸ್ ಟಿ 18%.
ಸಿಪಾಯಿ, ರಾತ್ರಿ ಕಾವಲುಗಾರರು, ವಾಹನ ಚಾಲಕ ಹಾಗೂ ಗನ್ ಮ್ಯಾನ್ ಹುದ್ದೆಗಳಿಗೆ; ಹಿಂದುಳಿದ ವರ್ಗ 2-ಎ, 2-ಬಿ, 3-ಎ ಹಾಗೂ 3-ಬಿ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – 1,000ರೂ. ಜೊತೆಗೆ ಜಿ ಎಸ್ ಟಿ 18%.
• ಪ.ಜಾತಿ, ಪ.ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-1 ಅಭ್ಯರ್ಥಿಗಳಿಗೆ 500ರೂ. ಜೊತೆಗೆ ಜಿ ಎಸ್ ಟಿ 18%.
How to Apply for Jamkhandi Urban Bank Cooperative Bank (JMUCB) Recruitment 2025
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ದಿ ಜಮಖಂಡಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ ಲಿಮಿಟೆಡ್ ಅಧಿಕೃತ ಜಾಲತಾಣ https://tascguru.com/jamkhandi-urban-bank/ ಕ್ಕೆ ಭೇಟಿ ನೀಡಿ.
ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ ಅನ್ವಯಿಸು ಲಿಂಕ್ ಮೇಲೆ ಕ್ಲಿಕ್ ಮಾಡಿ.
ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ಬಳಿಕ ಸಲ್ಲಿಸಿದ ಅರ್ಜಿ ಪ್ರತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ.
This app is very helpful to students.
I need job