ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಸ್ಟಾಫ್ ನರ್ಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.
ನರ್ಸಿಂಗ್ನಲ್ಲಿ ಡಿಪ್ಲೊಮಾ ಹೊಂದಿರುವವರನ್ನು 15 ಸ್ಟಾಫ್ ನರ್ಸ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ವೈದ್ಯಕೀಯ ವಲಯದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಸೆಪ್ಟೆಂಬರ್ 30ರೊಳಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಕೆ ಪ್ರಕಟಣೆಯ ದಿನಾಂಕ – ಸೆಪ್ಟೆಂಬರ್ 15, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 30, 2025
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ಮಂಡಳಿಯಿಂದ ನರ್ಸಿಂಗ್ನಲ್ಲಿ ಡಿಪ್ಲೊಮಾ ಹೊಂದಿರಬೇಕು. (ನರ್ಸಿಂಗ್ ಕೌನ್ಸಿಲ್ನಿಂದ ಮಾನ್ಯತೆ ಪಡೆದ ನರ್ಸಿಂಗ್ ಪ್ರಮಾಣಪತ್ರದೊಂದಿಗೆ ನೋಂದಾಯಿತ ನರ್ಸ್ ಆಗಿರಬೇಕು.)
ವಯೋಮಿತಿ:
ಪ.ಜಾತಿ, ಪ.ಪಂಗಡ ಹಾಗೂ CAT-I ಅಭ್ಯರ್ಥಿಗಳಿಗೆ – ಗರಿಷ್ಠ ಮಿತಿ 40 ವರ್ಷಗಳು
ಜನರಲ್ ಮೆರಿಟ್(GM) ಅಭ್ಯರ್ಥಿಗಳಿಗೆ – 35 ವರ್ಷಗಳು
II-ಎ, ΙΙ-ಬಿ, III-ಎ ಹಾಗೂ ΙΙ-ಬಿ ಅಭ್ಯರ್ಥಿಗಳಿಗೆ – 38 ವರ್ಷಗಳು
ಆಯ್ಕೆ ವಿಧಾನ:
ಮೆರಿಟ್ ಕಮ್ ರೋಸ್ಟರ್ ಆಧಾರ ದಾಖಲೆ ಪರಿಶೀಲನೆ
ಸಂಬಳ:
ಮಾಸಿಕ 22,000ರೂ. ವರೆಗೆ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಜನರಲ್ ಮೆರಿಟ್(GM), CAT-I, II-ಎ, ΙΙ-ಬಿ, III-ಎ ಹಾಗೂ ΙΙ-ಬಿ ಅಭ್ಯರ್ಥಿಗಳಿಗೆ – 2,000ರೂ. ಪ.ಜಾತಿ, ಪ.ಪಂಗಡದ ಅಭ್ಯರ್ಥಿಗಳಿಗೆ – 1,000ರೂ. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಈ ಕೆಳಗಿನ ವಿಳಾಸಕ್ಕೆ ಕ್ರಾಸ್ಡ್ ಇಂಡಿಯನ್ ಪೋಸ್ಟಲ್ ಆರ್ಡರ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬಹುದು.
ಅರ್ಜಿ ಶುಲ್ಕ ಪಾವತಿಸುವ ವಿಳಾಸ: ನಿರ್ದೇಶಕರು, ಶ್ರೀ ಜಯದೇವ ಹೃದಯರಕ್ತನಾಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು-69 ಅವರ ಹೆಸರಿನಲ್ಲಿ ಬೆಂಗಳೂರಿನಲ್ಲಿ ಪಾವತಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳುಅರ್ಜಿ ನಮೂನೆಯನ್ನು (SJICR) ವೆಬ್ಸೈಟ್ https://jayadevacardiology.karnataka.gov.in/ನಲ್ಲಿ ಪಡೆದು ಮುದ್ರಣ ತೆಗೆದುಕೊಂಡು.
ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ಹಾಗೂ ಅಗತ್ಯ ದಾಖಲಾತಿ (ಎಸ್ಎಸ್ಎಲ್ಸಿ, ಪಿಯುಸಿ, ನರ್ಸಿಂಗ್ ಅಂಕಪಟ್ಟಿಗಳು ಮತ್ತು ನರ್ಸಿಂಗ್ ನೋಂದಣಿ ಪ್ರಮಾಣಪತ್ರ)ಗಳನ್ನು ದೃಢೀಕರಿಸಿ ಲಗತ್ತಿಸಿ, ಸೆಪ್ಟೆಂಬರ್ 30ರೊಳಗೆ ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಈ ಕೆಳಗಿನ ವಿಳಾಸಕ್ಕೆ ತಲುಪಿಸಬೇಕು.
ವಿಳಾಸ: ನಿರ್ದೇಶಕರು, ಆಡಳಿತ ಕಚೇರಿ, 1 ನೇ ಮಹಡಿಯಲ್ಲಿ, SJIC&R ಮುಖ್ಯ ಶಾಖೆ, ಬನ್ನೇರುಘಟ್ಟ ರಸ್ತೆ, ಜಯನಗರ 9 ನೇ ಬ್ಲಾಕ್, ಬೆಂಗಳೂರು 560069