JEE Advanced 2024 Result: ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (IIT) ನಡೆಸುವ ಜಂಟಿ ಪ್ರವೇಶ ಪರೀಕ್ಷೆಯ ಅಡ್ವಾನ್ಸ್ಡ್ ಹಂತವಾದ ಜೆಇಇ (Advanced) 2024 ರ ಫಲಿತಾಂಶವನ್ನು ಈಗ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಈ ವರ್ಷ, ಸಂಸ್ಥೆಯು ಐಐಟಿಗಳು ಮತ್ತು ಇತರ ಭಾಗವಹಿಸುವ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ಮೇ 26 ರಂದು ಜಂಟಿ ಪ್ರವೇಶ ಪರೀಕ್ಷೆ (JEE) ಅಡ್ವಾನ್ಸ್ಡ್ 2024 ಅನ್ನು ನಡೆಸಿತು. ಇದೀಗ (ಜೂನ್ 09, 2024) ಪರೀಕ್ಷೆಯ ಫಲಿತಾಂಶವನ್ನ ಬಿಡುಗಡೆ ಮಾಡಿದೆ.. ಅಭ್ಯರ್ಥಿಗಳು ನಾವು ಕೆಳಗೆ ನೀಡಿರುವ ಲಿಂಕ್ ಮೂಲಕ ನಿಮ್ಮ ಫಲಿತಾಂಶ ವೀಕ್ಷಿಸಿ..