ಆಕಾಶವಾಣಿ ಮೈಸೂರು ಕೇಂದ್ರದಲ್ಲಿ ಸಾಂದರ್ಭಿಕ ಉದ್ಘೋಷಕ(Casual Announcer)ರಾಗಿ ಕಾರ್ಯನಿರ್ವಹಿಸಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಸದರಿ ನೇಮಕಾತಿಗೆ ಸಂಬಂಧಿಸಿದ ವಿದ್ಯಾರ್ಹತೆ, ವಯೋಮಿತಿ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆವರೆಗೂ ಓದಿ, ತಪ್ಪದೇ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಮೇ 02 ಕೊನೆಯ ದಿನವಾಗಿದೆ.
ಶೈಕ್ಷಣಿಕ ಅರ್ಹತೆ:
ಅರ್ಜಿ ಸಲ್ಲಿಸುವವರು ಅಧಿಕೃತ ವಿಶ್ವವಿದ್ಯಾಲಯದಿಂದ ಪದವಿ(Degree) ಪಡೆದಿರಬೇಕು.
ಇತರೆ ಅರ್ಹತೆ:
- ಕನ್ನಡ ಭಾಷೆ ಸ್ಪಷ್ಟ ಉಚ್ಚಾರಣೆ, ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿಯ ಪರಿಜ್ಞಾನ, ದೈನಂದಿನ ಆಗುಹೋಗುಗಳ ಬಗ್ಗೆ ತಿಳುವಳಿಕೆ ಅತ್ಯವಶ್ಯಕವಾಗಿದ್ದು, ಇಂಗ್ಲೀಷ್ ಭಾಷೆಯ ಜ್ಞಾನ, ಕಂಪ್ಯೂಟರ್ ಜ್ಞಾನ ಮತ್ತು ಕಂಪ್ಯೂಟರ್ ನಲ್ಲಿ ಕಾರ್ಯಕ್ರಮ ಸಿದ್ಧಪಡಿಸುವ ಕೌಶಲ್ಯವನ್ನು ಹೊಂದಿರಬೇಕು.
- ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ವಾಸಿಸುವವರಾಗಿರಬೇಕು. ಮೈಸೂರು ನಗರದಲ್ಲಿ ವಾಸಿಸುವವರಿಗೆ ಆದ್ಯತೆ ನೀಡಲಾಗುತ್ತದೆ.
ವಯಸ್ಸಿನ ಮಿತಿ:
ಅರ್ಜಿ ಸಲ್ಲಿಸುವವರಿಗೆ ಕನಿಷ್ಠ 20 ವರ್ಷ ವಯಸ್ಸಾಗಿರಬೇಕು.
ಅರ್ಜಿ ಶುಲ್ಕ:
ಧ್ವನಿ ಪರೀಕ್ಷೆಯ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ 300 ರೂಪಾಯಿ
ಹಾಗೂ ಸೇವಾ ಶುಲ್ಕ ಪರಿಶಿಷ್ಟ ಜಾತಿ ಪಂಗಡದ ಅಭ್ಯರ್ಥಿಗಳಿಗೆ 225 ರೂಪಾಯಿ.
How to Apply for All India Radio Mysore Jobs 2025
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಅಭ್ಯರ್ಥಿಗಳು ಅರ್ಜಿ ಫಾರ್ಮ್ ನ್ನು ಕೆಲಸದ ದಿನಗಳಲ್ಲಿ ಮೈಸೂರಿನ ಆಕಾಶವಾಣಿಯಲ್ಲಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯ ಜೊತೆಗೆ ಧ್ವನಿ ಪರೀಕ್ಷೆಯ ಶುಲ್ಕವನ್ನು ಸೇರಿ ಮೈಸೂರಿನ ಯಾದವಗಿರಿಯಲ್ಲಿರುವ ಆಕಾಶವಾಣಿಯ ಸಾಂದರ್ಭಿಕ ವಿದ್ಘೋಷಕರ ವಿಭಾಗದ ಕೇಂದ್ರ ನಿರ್ದೇಶಕರಿಗೆ ಸಲ್ಲಿಸಬೇಕು ಎಂದು ಆಕಾಶವಾಣಿಯ ಉಪ ನಿರ್ದೇಶಕರಾದ ಉಮೇಶ್ ಎಸ್.ಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Important Direct Links:
Official Website | allindiaradio.gov.in |
More Updates | Karnataka Help.in |