ಡಿಸೆಂಬರ್ 2025ರ ಜಂಟಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(CSIR) ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಭಾನುವಾರ ಬಿಡುಗಡೆ ಮಾಡಿದೆ.
ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ)ಯು ಡಿ.18ರಂದು ಮೊದಲ ಶಿಫ್ಟ್ ಬೆಳಗ್ಗೆ 9 ರಿಂದ ಮಧ್ಯಾಹ್ನ 12ರವೆರೆಗೆ ಜೀವ ವಿಜ್ಞಾನ, ಭೂ ವಾತಾವರಣ, ಸಾಗರ ಮತ್ತು ಗ್ರಹ ವಿಜ್ಞಾನ ವಿಷಯಗಳ ಕುರಿತು ಹಾಗೂ ಎರಡನೇ ಶಿಫ್ಟ್ ಮಧ್ಯಾಹ್ನ 3 ರಿಂದ ಸಂಜೆ 6ವರೆಗೆ ರಾಸಾಯನಿಕ ವಿಜ್ಞಾನ, ಗಣಿತ ವಿಜ್ಞಾನ, ಭೌತ ವಿಜ್ಞಾನ ವಿಷಯಾಧಾರಿತ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ಜಾಲತಾಣದ ಲಿಂಕ್ https://csirnet.nta.nic.in/admit-card-for-joint-csir-ugc-net-dec-2025-is-live/ಗೆ ಭೇಟಿ ನೀಡಿ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು.



