1st PUC supplementary exam 2024: ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು ನಡೆಸಿದ್ದ ಪ್ರಥಮ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಮಾರ್ಚ್ 30ರ ಪ್ರಕಟಿಸಿದ್ದು, ಫೆಬ್ರವರಿ 12 ರಿಂದ 27ರವರೆಗೆ ಕರ್ನಾಟಕ ಪ್ರಥಮ ಪಿಯುಸಿ ಪರೀಕ್ಷೆಗಳನ್ನು ನಡೆಸಲಾಗಿತ್ತು, ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಮತ್ತೆ ಪರೀಕ್ಷೆಯನ್ನು ಬರೆಯಬಹುದಾಗಿದೆ.
ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪ್ರಥಮ ಪಿಯುಸಿ ಪೂರಕ ಪರೀಕ್ಷೆಗಳನ್ನು ಮೇ 20 ರಿಂದ 31ರವರೆಗೆ ನಡೆಸಲು ತೀರ್ಮಾನಿಸಿದ್ದು, ಈ ಪರೀಕ್ಷೆಗಳು ಜಿಲ್ಲಾಮಟ್ಟದಲ್ಲಿ ನಡೆಯುತ್ತವೆ. ಈಗಾಗಲೇ ಮಾರ್ಚ್ 30ರಂದು ಫಲಿತಾಂಶವನ್ನು ಪ್ರಕಟಿಸಿದ್ದು ಅನುತ್ತಿರ್ಣರಾದ ವಿದ್ಯಾರ್ಥಿಗಳು ಏಪ್ರಿಲ್ 20ರವರೆಗೆ ಅರ್ಜಿ ಸಲ್ಲಿಸಿ ಪೂರಕ ಪರೀಕ್ಷೆಯ ಶುಲ್ಕವನ್ನು ಕಟ್ಟಬೇಕು.
KSEAB 1st PUC 2024 ರ ಪೂರಕ ಪರೀಕ್ಷೆಯು ಎರಡು ಪಾಳಿಗಳಲ್ಲಿ ನಡೆಯುತ್ತದೆ. ಪಾಳಿಯಲ್ಲಿ – ಮಧ್ಯಾಹ್ನ 2:15 ರಿಂದ 4:30 ರವರೆಗೆ – ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ಚಿಲ್ಲರೆ ಆಟೋಮೊಬೈಲ್ ಮತ್ತು ಮೇ 31 ರ ಸಂಜೆ ಪಾಳಿಯಲ್ಲಿ ನಡೆಸಲಾಗುತ್ತದೆ. ಬೆಳಗಿನ ಪಾಳಿಯಲ್ಲಿ – 10:15 ರಿಂದ ಮಧ್ಯಾಹ್ನ 1:30 ರವರೆಗೆ ಪರೀಕ್ಷೆಗಳು ನಡೆಯುತ್ತವೆ.
1st PUC Supplementary Exam Time Table 2024
ಪ್ರಥಮ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ
ಮೇ 20
ಕನ್ನಡ, ಅರೇಬಿಕ್
ಮೇ 21
ಇತಿಹಾಸ, ಭೌತಶಾಸ್ತ್ರ
ಮೇ 22
ರಾಜ್ಯಶಾಸ್ತ್ರ, ಅಂಕಿಅಂಶ
ಮೇ 23
ಇಂಗ್ಲಿಷ್
ಮೇ 24
ತರ್ಕಶಾಸ್ತ್ರ, ವ್ಯವಹಾರ ಅಧ್ಯಯನಗಳು, ಗಣಿತಶಾಸ್ತ್ರ, ಶಿಕ್ಷಣ
ಮೇ 25
ಅರ್ಥಶಾಸ್ತ್ರ
ಮೇ 27
ಭೂಗೋಳ, ಮನೋವಿಜ್ಞಾನ, ರಸಾಯನಶಾಸ್ತ್ರ, ಗೃಹ ವಿಜ್ಞಾನ, ಮೂಲ ಗಣಿತ
ಮೇ 28
ಸಮಾಜಶಾಸ್ತ್ರ, ಜೀವಶಾಸ್ತ್ರ, ಭೂವಿಜ್ಞಾನ, ವಿಜ್ಞಾನ, ಕಂಪ್ಯೂಟರ್ ಸೈನ್ಸ್
ಮೇ 29
ಐಚ್ಛಿಕ ಕನ್ನಡ, ಅಕೌಂಟೆನ್ಸಿ
ಮೇ 30
ಹಿಂದಿ
ಮೇ 31
ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
1St Puc Supplementary Exam 2024
ಅನುತ್ತೀರ್ಣರಾದ ವಿದ್ಯಾರ್ಥಿಗಳು ತಮ್ಮ ಕಾಲೇಜುಗಳ ಸೂಚನಾ ಫಲಕಗಳಲ್ಲಿ ಪೂರಕ ಪರೀಕ್ಷೆಗಳ ಬಗ್ಗೆ ಸಂಪೂರ್ಣ ವಿವರಣೆಗಳನ್ನು ನೀಡಲಾಗಿದ್ದು, ಪರೀಕ್ಷಾ ಶುಲ್ಕ ಹಾಗೂ ಅರ್ಜಿ ಸಲ್ಲಿಸಲು ಪಾರಂಗಗಳನ್ನು ಆಯಾ ಕಾಲೇಜುಗಳಲ್ಲಿ ನೀಡಲು ಪರೀಕ್ಷಾ ಮಂಡಳಿಯು ತಿಳಿಸಿದೆ.