Karnataka Diploma in Nursing Admission 2024: ಡಿಪ್ಲೊಮಾ ಇನ್ ನರ್ಸಿಂಗ್ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭ

Follow Us:

ಕರ್ನಾಟಕ ರಾಜ್ಯ ನರ್ಸಿಂಗ್ ಪರಿಷತ್ತು ಅಥವಾ ಕರ್ನಾಟಕ ವೈದ್ಯಕೀಯ ಶಿಕ್ಷಣ ಇಲಾಖೆ 2024-25 ಶೈಕ್ಷಣಿಕ ವರ್ಷಕ್ಕೆ ಕರ್ನಾಟಕ ಡಿಪ್ಲೋಮಾ ಇನ್ ನರ್ಸಿಂಗ್ (ಜಿಎನ್‌ಎಂ) ಕೋರ್ಸ್‌ಗೆ ಪ್ರವೇಶ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಜುಲೈ 5ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಆಸಕ್ತ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಡಿಪ್ಲೋಮಾ ಇನ್ ನರ್ಸಿಂಗ್ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಈ ಪ್ರವೇಶಾತಿ ಕುರಿತಂತೆ ಅರ್ಹತೆಗಳು, ಪ್ರಮುಖ ದಿನಾಂಕಗಳು, ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸುವ ಪ್ರಕ್ರಿಯೆ, ಅರ್ಜಿ ಶುಲ್ಕ, ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು ಗಮನವಿಟ್ಟು ಓದಿರಿ.

Important Dates of Karnataka GNM Admission 2024

• ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ(Start Date): ಜೂನ್ 21, 2024

• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date): ಜುಲೈ 5 , 2024

Diploma in Nursing Admission Eligibility Criteria 2024

  • ಕರ್ನಾಟಕದ ನಿವಾಸಿಯಾಗಿರಬೇಕು.
  • ಅರ್ಜಿದಾರರ ವಯಸ್ಸು 17 ವರ್ಷ (ಜುಲೈ 1, 2024 ರಂತೆ) ಮೀರಿರಬೇಕು.
  • ಅರ್ಜಿದಾರರು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10+2 ಪರೀಕ್ಷೆಯಲ್ಲಿ ಕನಿಷ್ಠ 45% ಗಳಿಸಿರಬೇಕು.
  • ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳನ್ನು 10+2 ರಲ್ಲಿ ಅಧ್ಯಯನ ಮಾಡಿರಬೇಕು.

Karnataka GNM Admission 2024 Selection Process

• ಅರ್ಜಿದಾರರ ಆಯ್ಕೆಯು ಅವರ 10+2 ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನಡೆಯಲಾಗುತ್ತದೆ.

• ಆಯ್ಕೆಯಾದ ಅಭ್ಯರ್ಥಿಗಳನ್ನು ಸಮಾಲೋಚನೆ ಪ್ರಕ್ರಿಯೆಯ ಮೂಲಕ ಕಾಲೇಜುಗಳಿಗೆ ಹಂಚಿಕೆ ಮಾಡಲಾಗುತ್ತದೆ.

Diploma in Nursing admission 2024 Application Fees Details

  • ಸಾಮಾನ್ಯ‌ ಅಭ್ಯರ್ಥಿಗಳಿಗೆ – ₹400/-
  • ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ವರ್ಗ-1 ಅಭ್ಯರ್ಥಿಗಳಿಗೆ – ₹250/-

Karnataka GNM 2024 Admission Documents Required

ಕರ್ನಾಟಕ GNM ಪ್ರವೇಶದ ಸಮಯದಲ್ಲಿ ಸಲ್ಲಿಸಬೇಕಾದ ದಾಖಲೆಗಳು

  • SSLC ಅಂಕ ಪಟ್ಟಿ
  • ದ್ವಿತೀಯ ಪಿಯುಸಿ ಮೂಲ ಅಂಕ ಪಟ್ಟಿ
  • ಜಾತಿ ಪ್ರಮಾಣ ಪತ್ರ
  • ದೇಹದಾರ್ಢ್ಯತೆ ಪ್ರಮಾಣಪತ್ರ (ಅಂಗವಿಕಲ ಕೋಟಾ ಅಭ್ಯರ್ಥಿಗಳಿಗೆ ಮಾತ್ರ)
  • ಆದಾಯ ಪ್ರಮಾಣಪತ್ರ (ತಹಶೀಲ್ದಾರ್ ಅವರಿಂದ ಪಡೆದ)
  • ನಿವಾಸ ಪ್ರಮಾಣಪತ್ರ
  • ID ಪುರಾವೆ
  • ಮೀಸಲಾತಿ ಪ್ರಮಾಣ ಪತ್ರ(ಯಾವ ಮೀಸಲಾತಿ ಅನ್ವಯಿಸುತ್ತದೆಯೋ ಸಂಬಂಧಪಟ್ಟ ಪ್ರಮಾಣ ಪತ್ರ)
  • ಅರ್ಜಿ ಶುಲ್ಕ ಪಾವತಿ (Application Fees)

How to Apply For Karnataka Diploma in Nursing admission 2024

ಹಂತ-1 ಕರ್ನಾಟಕ ರಾಜ್ಯ ಡಿಪ್ಲೊಮಾ ಇನ್ ನರ್ಸಿಂಗ್ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://ksdneb.org/

ಹಂತ-2 “ಆನ್‌ಲೈನ್ ಸೇವೆಗಳು” ಟ್ಯಾಬ್ ಕ್ಲಿಕ್ ಮಾಡಿ ಮತ್ತು “ಜಿಎನ್‌ಎಂ ಪ್ರವೇಶ 2024” ಆಯ್ಕೆಮಾಡಿ.

ಹಂತ-3 ಅಗತ್ಯವಿರುವ ವಿವರಗಳೊಂದಿಗೆ ಆನ್‌ಲೈನ್ ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ.

ಹಂತ-4 ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್‌ಲೋಡ್ ಮಾಡಿ.

ಹಂತ-5 ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.

ಹಂತ-6 ಅರ್ಜಿ ಸಲ್ಲಿಸಿದ ನಂತರ, ಅರ್ಜಿಯ ಪ್ರತಿಯನ್ನು ಭವಿಷ್ಯದ ಉಲ್ಲೇಖಕ್ಕಾಗಿ ಸಂಗ್ರಹಿಸಿಡಿ.

Important Direct Links:

Karnataka GNM Admission 2024 Notification PDFDownload
Karnataka GNM Admission Online Form 2024 (Direct Link)Click Here
Official Websiteksdneb.org
More UpdatesKarnatakaHelp.in

FAQs – Diploma in Nursing Application Form

How to Apply for Karnataka Diploma in Nursing Admission 2024-25?

Visit the Official Website of https://ksdneb.org/ to Apply Online

What is the Last Date of GNM Nursing Admission 2024-25?

July 05, 2024

Leave a Comment