Karnataka NEET UG Counselling 2023 Registration : ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ, NEET 2023 ಅನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಕೆಲವು ತಿಂಗಳ ಹಿಂದೆ ಯಶಸ್ವಿಯಾಗಿ ನಡೆಸಿ ಫಲಿತಾಂಶ ಕೂಡಾ ಪ್ರಕಟಿಸಿತ್ತು. ಅಭ್ಯರ್ಥಿಗಳು Karnataka NEET UG counselling 2023 ಗಾಗಿ ಕಾಯುತ್ತಿದ್ದಾರೆ. KEA ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಕರ್ನಾಟಕ ನೀಟ್ ಯುಜಿ ಕೌನ್ಸಿಲಿಂಗ್ ಸಲುವಾಗಿ ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭದ ಕುರಿತು ಸಂಪೂರ್ಣ ಮಾಹಿತಿ ತಿಳಿಸಿದೆ.
ಯುಜಿನೀಟ್-2023 ನೊಂದಣಿ ಪ್ರಕ್ರಿಯೆ ಮತ್ತು ದಾಖಲಾತಿ ಪರಿಶೀಲನೆಯ (Registration and Verification of Documents) ವೇಳಾಪಟ್ಟಿ ಬಗ್ಗೆ ಎಲ್ಲಾ ಮಾಹಿತಿ ಕೆಳಗೆ ನೀಡಲಾಗಿದೆ ಸರಿಯಾಗಿ ಓದಿ ಅರ್ಥೈಸಿಕೊಳ್ಳಿ.
.jpg ಸ್ವರೂಪದಲ್ಲಿ ಅಭ್ಯರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ, ಅಭ್ಯರ್ಥಿಯ ಸಹಿ, ಎಡಗೈ ಹೆಬ್ಬೆರಳು
KEA Registration forKarnataka NEET UG Counselling 2023
NEET UG Counselling 2023Instructions
ಮೊದಲಿಗೆ ನೀವು ಯುಜಿಸಿಇಟ-2023ಗೆ ನೊಂದಾಯಿಸಿ ಅರ್ಜಿ ಸಲ್ಲಿಸಿದ್ದೀರಾ? ಎಂಬುದರ ಬಗ್ಗೆ Yes/No ಎಂಬ ಮಾಹಿತಿಯನ್ನು ನೀಡಬೇಕಾಗುತ್ತದೆ.
ಈಗಾಗಲೇ ಯುಜಿಸಿಇಟಿ 2023ಕ್ಕೆ ಅರ್ಜಿ ಸಲ್ಲಿಸಿ / ಬ್ಯಾಂಕ್ ಪಡೆದ ದಾಖಲಾತಿ ಪರಿಶೀಲನೆಗೆ ಹಾಜರಾಗಿರುವ ಅಭ್ಯರ್ಥಿಗಳು “Yes’ ಎಂದು ನೀಡಿ “Proceed with UGCET – 2023 User ID and Password’ ಟ್ಯಾಬ್‌ನಲ್ಲಿ ತಮ್ಮ ಯುಜಿಸಿಇಟಿ 2023ರ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಉಪಯೋಗಿಸಿಕೊಂಡು ಮುಂದುವರೆಯ ಬೇಕು.
ನಂತರ NEET Roll No ಅನ್ನು ಭರ್ತಿ ಮಾಡಿ ‘Check (ಪರಿಶೀಲಿಸಿ) ಟ್ಯಾಬನ್ನು ಆಯ್ಕೆ ಮಾಡಬೇಕು, ನಂತರ ಆಯ್ಕೆ ಮಾಡಿದ ನಂತರ ಅಭ್ಯರ್ಥಿಯು ಈಗಾಗಲೇ ಯುಜಿಸಿಇಟಿ-2023ಕ್ಕೆ ದಾಖಲು ಮಾಡಿದ ವಿವರಗಳನ್ನೊಳಗೊಂಡಿರುವ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
ಅರ್ಜಿಯನ್ನು ಕೂಲಂಕುಶವಾಗಿ ಪರಿಶೀಲಿಸಿ ಬದಲಾವಣೆ ಮಾಡಬೇಕಿದ್ದಲ್ಲಿ Update NEET Details ಟ್ಯಾಬನ್ನು ಉಪಯೋಗಿಸಿಕೊಳ್ಳಬೇಕು. ಹೊಸದಾಗಿ ಅರ್ಜಿಯಲ್ಲಿ ಬದಲಾವಣೆ ಮಾಡಿರುವ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ವೇಳಾಪಟ್ಟಿ ಅನುಸಾರ ಮನಃ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು.
ಅಭ್ಯರ್ಥಿಗಳು ಈಗಾಗಲೇ ಯುಜಿಸಿಇಟಿ 2023ರ ದಾಖಲಾತಿ ಪರಿಶೀಲನೆಗೆ ಹಾಜರಾಗಿ ಅದೇ ವೆರಿಫಿಕೇಷನ್ ಸ್ಲಿಪ್ ನ್ನು ಯುಜಿನೀಟ್ 2023ಕ್ಕು ಬಳಸಬಹುದೆಂದು ಭಾವಿಸಬಾರದು. ಅಭ್ಯರ್ಥಿಗಳು ಪುನಃ ಮೇಲೆ ತಿಳಿಸಿರುವ ಟ್ಯಾಬ್ ಮೂಲಕ ಯುಜಿನೀಟ್ 2023ರ ವೆರಿಫಿಕೇಷನ್ ಸ್ಲಿಪ್ ಅನ್ನು ಕೆಇಎ ವೆಬ್‌ಸೈಟಿನಲ್ಲಿ ಪ್ರಕಟಿಸುವ ದಿನಾಂಕಗಳಂದು ಡೌನ್‌ಲೊಡ್ ಮಾಡಿಕೊಳ್ಳಬೇಕು.
ಯುಜಿಸಿಇಟಿ 2023ಕ್ಕೆ ಅರ್ಜಿ ಸಲ್ಲಿಸದ, ಹೊಸದಾಗಿ ಯುಜಿನೀಟ್‌ಗೆ ನೊಂದಾಯಿಸುವ ಅಭ್ಯರ್ಥಿಗಳು ಕೆಇಎ ಪೋರ್ಟಲ್‌ನಲ್ಲಿ ‘No’ ಎಂದು ನೀಡಿ “Proceed to registration for New Users’ ಟ್ಯಾಬ್‌ನಲ್ಲಿ ಮುಂದುವರೆಯಬೇಕು. ಹೊಸದಾಗಿ ನೊಂದಾಯಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು.
Karnataka NEET UG Counselling 2023Important Dates
Karnataka Neet Ug Counselling 2023 Important Dates