KARTET 2024 Notification: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆಸಲಾಗುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ KARTET 2024 ಅಧಿಸೂಚನೆಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಅರ್ಹತೆ ಮತ್ತು ಆಸಕ್ತಿ ಅಭ್ಯರ್ಥಿಗಳು ಹೊಂದಿರುವ ಅಗತ್ಯ ದಾಖಲೆಗಳೊಂದಿಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಅಂತಿಮ ದಿನಾಂಕದ ಮೊದಲು KARTET ಅರ್ಜಿ ನಮೂನೆಯನ್ನು ಸಲ್ಲಿಸಬಹುದು.
ಕರ್ನಾಟಕದಲ್ಲಿ ಶಿಕ್ಷಕರಾಗಲು ಬಯಸುವ ಎಲ್ಲಾ ಅಭ್ಯರ್ಥಿಗಳಿಗೆ ಈ ಪರೀಕ್ಷೆಯು ಕಡ್ಡಾಯವಾಗಿದೆ. ಇದು ರಾಜ್ಯ ಮಟ್ಟದ ಪರೀಕ್ಷೆಯಾಗಿದ್ದು, ಈ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಕರ್ನಾಟಕ ರಾಜ್ಯದಲ್ಲಿ ಮಾತ್ರ ಮಾನ್ಯವೆಂದು ಪರಿಗಣಿಸಲಾಗುತ್ತದೆ. ಹಾಗಾದರೆ ಈ ಅಧಿಸೂಚನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಲಾಗಿದೆ.
KARTET 2024 Notification – Shortview
ORG Name | School Education |
Exam Name | KTET- Karnataka Teacher Eligibility Test |
KARTET Exam Date 2024 | 30-06-2024 |
Official Website | schooleducation.kar.nic.in |
Important Dates Of KARTET 2024 Online Application Form
IMP Name | IMP Dates |
---|---|
KARTET-2024 Online Application Start Date | 15-04-2024 |
KARTET-2024 Application Last Date | 15-05-2024 |
Last date for Payment of Fee | 16-05-2024 |
KARTET Admit Card Release Date | 20/29-06-2024 |
KARTET 2024 Exam Date | 30-06-2024 |
Important Dates Of KARTET Exam 2024
Exam Date | Papers | Exam Time | ಪರೀಕ್ಷಾ ಅವಧಿ |
---|---|---|---|
30-06-2024 | ಪತ್ರಿಕೆ ಪತ್ರಿಕೆ-1 | ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.00 ಗಂಟೆ | 2 ಗಂಟೆ 30 ನಿಮಿಷ |
30-06-2024 | ಪತ್ರಿಕೆ ಪತ್ರಿಕೆ-2 | ಮಧ್ಯಾಹ್ನ 2.00 ರಿಂದ 4.30 ಗಂಟೆ | 2 ಗಂಟೆ 30 ನಿಮಿಷ |
Application Fee Details of KARTET 2024
ಸಾಮಾನ್ಯ ಅಭ್ಯರ್ಥಿಗಳಿಗೆ ರೂ.700 (2 ಪತ್ರಿಕೆಗಳಿಗೆ ರೂ.1000).
ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ.700 (2 ಪತ್ರಿಕೆಗಳಿಗೆ ರೂ.1000).
SC / ST / ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.350 (2 ಪತ್ರಿಕೆಗಳಿಗೆ ರೂ.500).
KTET 2024- ಶಿಕ್ಷಕರ ಅರ್ಹತಾ ಪರೀಕ್ಷೆ ಪತ್ರಿಕೆ ಕುರಿತು
ಪತ್ರಿಕೆ-1: 1 ರಿಂದ 5ನೇ ತರಗತಿ ಬೋಧಿಸಲ್ಪಡುವ ಶಿಕ್ಷಕರಿಗಾಗಿ.
ಪತ್ರಿಕೆ-2: 6 ರಿಂದ 8ನೇ ತರಗತಿ ಬೋಧಿಸಲ್ಪಡುವ ಶಿಕ್ಷಕರಿಗಾಗಿ.
ಅಭ್ಯರ್ಥಿಗಳು ಈ ಮೇಲಿನ 2 ಹಂತದ ತರಗತಿಗಳಲ್ಲಿ ಬೋಧಿಸಲು ಅಪೇಕ್ಷಿಸಿದಲ್ಲಿ ಮೇಲಿನ 2 ಪರೀಕ್ಷೆಗಳಿಗೂ ಹಾಜರಾಗಿ ಪರೀಕ್ಷೆ ಬರೆಯಬೇಕಿರುತ್ತದೆ. ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಪ್ರತಿ ಪ್ರಶ್ನೆಗೆ ಒಂದು ಅಂಕದಂತೆ, ಒಟ್ಟು 150 ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
KARTET Exam Eligibility Criteria 2024
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಬರೆಯಲು ಅಭ್ಯರ್ಥಿಗಳು ನಿರ್ದಿಷ್ಟ ವಾದ ಶೈಕ್ಷಣಿಕ ವಿದ್ಯಾರ್ಹತೆ ಹೊಂದಿರಬೇಕು. ಈ ಪರೀಕ್ಷೆಗೆ ಹಾಜರಾಗಲು ಬಯಸುವ ಅಭ್ಯರ್ಥಿಗಳು ಈ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು
KTET Paper -1: Minimum Qualification Required: (For Class 1 to 5)
- ಪಿ.ಯು.ಸಿ/ ಸೀನಿಯರ್ ಸೆಕೆಂಡರಿ (ತತ್ಸಮಾನ) ಪರೀಕ್ಷೆಯಲ್ಲಿ ಶೇ.50% ಅಂಕಗಳನ್ನು ಗಳಿಸಿರಬೇಕು ಹಾಗೂ ಎರಡು ವರ್ಷಗಳ D.EL.Ed. ಕೋರ್ಸಿನ (ಯಾವ ಹೆಸರಿನಿಂದ ಕರೆಯುವರೋ ಆ ಹೆಸರಿನ) ದ್ವಿತೀಯ ವರ್ಷದಲ್ಲಿ ತೇರ್ಗಡೆ ಹೊಂದಿರುವವರು ಅಥವಾ ಕೋರ್ಸಿಗೆ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು, ಅಥವಾ
- ಪಿ.ಯು.ಸಿ / ಸೀನಿಯರ್ ಸೆಕೆಂಡರಿ (ತತ್ಸಮಾನ) ಪರೀಕ್ಷೆಯಲ್ಲಿ ಕನಿಷ್ಟ ಶೇ.50 ರಷ್ಟು ಅಂಕಗಳನ್ನು ಗಳಿಸಿರಬೇಕು. ಹಾಗೂ ನಾಲ್ಕು ವರ್ಷಗಳ ಬ್ಯಾಚುಲರ್ ಇನ್ ಎಲಿಮೆಂಟರಿ ಎಜುಕೇಶನ್‌ನಲ್ಲಿ (B.El.Ed) ತೇರ್ಗಡೆ ಹೊಂದಿರುವವರು ಅಥವಾ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು. ಅಥವಾ
- ಸೀನಿಯರ್ ಸೆಕೆಂಡರಿ (ತತ್ಸಮಾನ) ಪರೀಕ್ಷೆಯಲ್ಲಿ ಕನಿಷ್ಟ ಶೇ.50 ರಷ್ಟು ಅಂಕಗಳನ್ನು ಗಳಿಸಿರಬೇಕು ಹಾಗೂ ಎರಡು ವರ್ಷಗಳ ಡಿಪ್ಲೊಮೊ ಇನ್ ಎಜುಕೇಶನ್ (ವಿಶೇಷ ಶಿಕ್ಷಣ) ತೇರ್ಗಡೆ ಹೊಂದಿರುವವರು ಅಥವಾ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು. ಅಥವಾ
- ಪದವಿಯಲ್ಲಿ ಕನಿಷ್ಟ ಶೇ.50 ರಷ್ಟು ಅಂಕಗಳನ್ನು ಗಳಿಸಿರಬೇಕು ಹಾಗೂ ಎರಡು ವರ್ಷಗಳ D.EL.Ed. ಕೋರ್ಸಿನ (ಯಾವ ಹೆಸರಿನಿಂದ ಕರೆಯುವರೋ ಆ ಹೆಸರಿನ) ದ್ವಿತೀಯ ವರ್ಷದಲ್ಲಿ ತೇರ್ಗಡೆ ಹೊ೦ದಿರುವವರು ಅಥವಾ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು. ಅಥವಾ
- ಪದವಿಯಲ್ಲಿ ಕನಿಷ್ಟ ಶೇ.50 ರಷ್ಟು ಅಂಕಗಳನ್ನು ಗಳಿಸಿರಬೇಕು ಹಾಗೂ ಬಿ.ಇಡಿ ಪದವಿಯಲ್ಲಿ ತೇರ್ಗಡೆ ಹೊಂದಿರುವವರು ಅಥವಾ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು.
KTET Paper-2: Minimum Qualification Required: (For Class 6 to 8)
- ಪದವಿಯಲ್ಲಿ ಕನಿಷ್ಟ ಶೇ.50 ರಷ್ಟು ಅಂಕಗಳನ್ನು ಗಳಿಸಿರಬೇಕು ಹಾಗೂ ಎರಡು ವರ್ಷಗಳ D.EL.Ed ಕೋರ್ಸಿನ (ಯಾವ ಹೆಸರಿನಿಂದ ಕರೆಯುವರೋ ಆ ಹೆಸರಿನ) ದ್ವಿತೀಯ ವರ್ಷದಲ್ಲಿ ತೇರ್ಗಡೆ ಹೊಂದಿರುವವರು ಅಥವಾ ಕೋರ್ಸಿಗೆ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು. ಅಥವಾ
- ಪದವಿಯಲ್ಲಿ ಕನಿಷ್ಟ ಶೇ.50 ರಷ್ಟು ಅಂಕಗಳನ್ನು ಗಳಿಸಿರಬೇಕು ಹಾಗೂ ಬಿ.ಇಡಿ ಪದವಿಯಲ್ಲಿ ತೇರ್ಗಡೆ ಹೊಂದಿರುವವರು ಅಥವಾ ಪದವಿಗೆ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು. ಅಥವಾ
- ಪಿ.ಯು.ಸಿ/ ಸೀನಿಯರ್ ಸೆಕೆಂಡರಿ (ತತ್ಸಮಾನ) ಪರೀಕ್ಷೆಯಲ್ಲಿ ಕನಿಷ್ಟ ಶೇ.50 ರಷ್ಟು ಅಂಕಗಳನ್ನು ಗಳಿಸಿರಬೇಕು ಹಾಗೂ ನಾಲ್ಕು ವರ್ಷಗಳ ಬ್ಯಾಚುಲರ್ ಇನ್ ಎಲಿಮೆಂಟರಿ ಎಜುಕೇಶನ್‌ನಲ್ಲಿ (B.El.Ed) ತೇರ್ಗಡೆ ಹೊಂದಿರುವವರು ಅಥವಾ ಕೋರ್ಸಿಗೆ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು. ಅಥವಾ
- ಪದವಿಯಲ್ಲಿ ಕನಿಷ್ಠ ಶೇ.50 ರಷ್ಟು ಅಂಕಗಳನ್ನು ಗಳಿಸಿರಬೇಕು ಹಾಗೂ ಎರಡು ವರ್ಷದ ಬಿ.ಇಡಿ (ವಿಶೇಷ ಶಿಕ್ಷಣ) ಪದವಿಯಲ್ಲಿ ತೇರ್ಗಡೆ ಹೊಂದಿರುವವರು ಅಥವಾ ಪದವಿಗೆ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು,
KARTET Class 1 to 5 and Class 6 to 8 Syllabus and Exam Pattern 2024
How to Apply for KARTET 2024
ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ;
- ಮೊದಲಿಗೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, schooleducation.kar.nic.in.
- ಮುಖಪುಟದಲ್ಲಿ KARTET 2024ರ ‘ ಕ್ಲಿಕ್ ಮಾಡಿ’ ಲಿಂಕ್‌ಗೆ ಹೋಗಿ.
- ನತಂರ ಅಗತ್ಯ ವಿವರಗಳನ್ನು ನಮೂದಿಸುವ ಮೂಲಕ ಆನ್‌ಲೈನ್‌ನಲ್ಲಿ ವಿವರಗಳ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ,
- ನೋಂದಣಿ ಪೂರ್ಣಗೊಂಡ ನಂತರ, ನಿಮ್ಮ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
- ಮೊಬೈಲ್ ಸಂಖ್ಯೆಗೆ ಬಂದಿರುವ ಬಳಕೆದಾರಹೆಸರು ಮತ್ತು ಪಾಸ್‌ವರ್ಡ್‌ನೊಂದಿಗೆ ಮರು-ಲಾಗಿನ್ ಮಾಡಿ.
- ಉಳಿದ ವಿವರಗಳನ್ನು ಭರ್ತಿ ಮಾಡಿ ಮತ್ತು ಸ್ಕ್ಯಾನ್ ಮಾಡಿದ ಚಿತ್ರಗಳನ್ನು ನಿಗದಿತ ಸ್ವರೂಪದಲ್ಲಿ ಅಪ್‌ಲೋಡ್ ಮಾಡಿ.
- ನಂತರ ಫೋಟೋ ಮತ್ತು ಸಹಿ ಅಪ್ಲೋಡ್ ಮಾಡಿ.
- ಅದರ ನಂತರ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು KARTET ಅರ್ಜಿ ಶುಲ್ಕವನ್ನು ಪಾವತಿಸಿ.
- ಕೊನೆಯದಾಗಿ ದೃಢೀಕರಣ ಪುಟವನ್ನು ಸಲ್ಲಿಸಿ ಮತ್ತು ಉಳಿಸಿ.
Important Links:
KARTET 2024 Notification PDF | Download |
KARTET 2024 Application Form Link | Apply Now |
Official Website | School Education |
More Updates | KarnatakaHelp.in |
FAQs – Karnataka Teacher Eligibility Test (KARTET)
How to Apply Online for KARTET 2024?
Visit Official Website of https://sts.karnataka.gov.in/TET/ to Apply Online
What is the Last Date of KARTET 2024 Online Application?
15 May 2024