ಶಾಲಾ ಶಿಕ್ಷಣ ಇಲಾಖೆಯು 2025ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ(KARTET) ನೋಂದಾಯಿಸಿಕೊಳ್ಳಲು ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಿದೆ.
ರಾಜ್ಯದ ಯಾವುದೇ ಶಾಲೆಗಳಲ್ಲಿ ಪ್ರಾಥಮಿಕ (1 ರಿಂದ 5ನೇ ತರಗತಿ) ಹಾಗೂ ಹಿರಿಯ ಪ್ರಾಥಮಿಕ (6 ರಿಂದ 8ನೇ ತರಗತಿ) ಬೋಧನಾ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹತೆ ಪಡೆಯಲು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಸದರಿ KARTET – 2025ಕ್ಕೆ ಅರ್ಜಿ ಸಲ್ಲಿಸಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ಜಾಲತಾಣ https://schooleducation.karnataka.gov.in/ ಕ್ಕೆ ಭೇಟಿ ನೀಡಿ. ನ.09ರೊಳಗೆ ಅರ್ಜಿ ಸಲ್ಲಿಸಬಹುದು.
ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನಾಂಕ (ಚಲನ್ ಆದಲ್ಲಿ) – ನವೆಂಬರ್ 10, 2025
ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವ ದಿನಾಂಕ – ಡಿಸೆಂಬರ್ 01- 07, 2025
ಪತ್ರಿಕೆ-1 ಮತ್ತು ಪತ್ರಿಕೆ-2 ಪರೀಕ್ಷಾ ದಿನಾಂಕ – ಡಿಸೆಂಬರ್ 07, 2025
ಪರೀಕ್ಷಾ ದಿನಾಂಕ – ಡಿಸೆಂಬರ್ 07, 2025
ಶೈಕ್ಷಣಿಕ ಅರ್ಹತೆ:
✓ ಪತ್ರಿಕೆ-1 (1 ರಿಂದ 5ನೇ ತರಗತಿಗಳಿಗೆ) ಅಗತ್ಯವಿರುವ ವಿದ್ಯಾರ್ಹತೆ;
ದ್ವಿತೀಯ ಪಿ.ಯು.ಸಿ/ಪದವಿ ಉತ್ತೀರ್ಣರಾದ ಹಾಗೂ (D.El.Ed), (B.El.Ed) ಅಥವಾ (ಬಿ.ಇಡಿ) ತೇರ್ಗಡೆ ಹೊಂದಿರುವವರು ಅಥವಾ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
✓ ಪತ್ರಿಕೆ-2 (6 ರಿಂದ 8ನೇ ತರಗತಿಗಳಿಗೆ) ಅಗತ್ಯವಿರುವ ವಿದ್ಯಾರ್ಹತೆ;
ಪದವಿಯಲ್ಲಿ ಉತ್ತೀರ್ಣರಾದ ಹಾಗೂ (ಬಿ.ಇಡಿ) (D.El.Ed) ಅಥವಾ (B.EL.Ed) ತೇರ್ಗಡೆ ಹೊಂದಿರುವವರು ಅಥವಾ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ:
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಅರ್ಜಿ ಶುಲ್ಕ:
• ಸಾಮಾನ್ಯ ವರ್ಗ, 2ಎ, 2ಬಿ, 3ಎ, ಹಾಗೂ 3ಬಿ ಅಭ್ಯರ್ಥಿಗಳಿಗೆ – (ಪತ್ರಿಕೆ-1 ಅಥವಾ ಪತ್ರಿಕೆ-2) ಒಂದು ಪತ್ರಿಕೆಗೆ – 700ರೂ.
• (ಪತ್ರಿಕೆ-1 ಹಾಗೂ ಪತ್ರಿಕೆ-2) ಎರಡು ಪತ್ರಿಕೆಗಳಿಗೆ – 1000ರೂ.
• ಪ.ಜಾತಿ, ಪ.ವರ್ಗ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ – (ಪತ್ರಿಕೆ-1 ಅಥವಾ ಪತ್ರಿಕೆ-2) ಒಂದು ಪತ್ರಿಕೆಗೆ – 350ರೂ.
• (ಪತ್ರಿಕೆ-1 ಹಾಗೂ ಪತ್ರಿಕೆ-2) ಎರಡು ಪತ್ರಿಕೆಗಳಿಗೆ – 500ರೂ.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
• ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ಜಾಲತಾಣ https://schooleducation.karnataka.gov.in/ಕ್ಕೆ ಭೇಟಿ ನೀಡಿ. (ಅಥವಾ ನೇರವಾಗಿ https://sts.karnataka.gov.in/TET/ಗೆ ಭೇಟಿ ನೀಡಿ)
• ಇತ್ತೀಚಿನ ಸುದ್ದಿಗಳು ವಿಭಾಗದಲ್ಲಿ ನೀಡಲಾಗಿರುವ”2025 ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ(KARTET-2025) ಅರ್ಜಿ ಆಹ್ವಾನ” ಲಿಂಕ್ ಮೇಲೆ ಕ್ಲಿಕ್ ಮಾಡಿ.
Kartet Online Application Form 2025
• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
• ಅಂತಿಮವಾಗಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.