2025ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗಾಗಿ ಶಾಲಾ ಶಿಕ್ಷಣ ಇಲಾಖೆಯು ಶನಿವಾರ ಅಧಿಸೂಚನೆ ಹೊರಡಿಸಿದೆ.
1 ರಿಂದ 8ನೇ ತರಗತಿಯ ಶಿಕ್ಷಕರ ನೇಮಕಾತಿಗಾಗಿ ಕನಿಷ್ಠ ಅರ್ಹತೆ ಹೊಂದಲು ನಡೆಸುವ ಪರೀಕ್ಷೆಯಿದಾಗಿದ್ದು, ರಾಷ್ಟೀಯ ಶಿಕ್ಷಣ ಶಿಕ್ಷಕರ ಪರಿಷತ್(ಎನ್.ಸಿ.ಟಿ.ಇ.) ನಿಯಮಗಳ ಪ್ರಕಾರ ಕನಿಷ್ಠ ವಿದ್ಯಾರ್ಹತೆ ಹೊಂದಿರುವವರು ನ.9ರೊಳಗೆ https://schooleducation.karnataka.gov.in/ನ ಮೂಲಕ ನೋಂದಣಿ ಮಾಡಬಹುದು ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ವಿಕಾಶ್ ಕಿಶೋರ್ ಸುರಳ್ಕರ್ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಆನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ – ಅಕ್ಟೋಬರ್ 23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ನವೆಂಬರ್ 09
ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನ – ನವೆಂಬರ್ 10
ಕೆ.ಎಆರ್.ಟಿ.ಇ.ಟಿ ಪರೀಕ್ಷೆಯ ದಿನಾಂಕ – ಡಿಸೆಂಬರ್ 07 (ಭಾನುವಾರ)
ಕನಿಷ್ಠ ಶೈಕ್ಷಣಿಕ ಅರ್ಹತೆ:
1 ರಿಂದ 5ನೇ ತರಗತಿಗಳಿಗೆ (ಪತ್ರಿಕೆ-1) – ಪಿಯುಸಿ ಅಥವಾ ಪದವಿ ಕನಿಷ್ಟ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣ ಹಾಗೂ D.El.Ed/B.EL.Ed/ಡಿಪ್ಲೊಮಾ ಇನ್ ಎಜುಕೇಶನ್ (ವಿಶೇಷ ಶಿಕ್ಷಣ)/ಡಿಪ್ಲೊಮೋ ಇನ್ ಎಜುಕೇಶನ್ (ವಿಶೇಷ ಶಿಕ್ಷಣ)/ ಬಿ.ಇಡಿ ಪದವಿ ಪಡೆದಿರುವವರು ಅಥವಾ ಪ್ರವೇಶ ಪಡೆದು ಓದುತ್ತಿರುವ ಅಭ್ಯರ್ಥಿಗಳು.
6 ರಿಂದ 8ನೇ ತರಗತಿಗಳಿಗೆ (ಪತ್ರಿಕೆ-2) – ಪಿಯುಸಿ ಅಥವಾ ಪದವಿ ಕನಿಷ್ಟ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣ ಹಾಗೂ ಬಿ.ಇಡಿ ಪದವಿ/ಬ್ಯಾಚುಲರ್ ಇನ್ ಎಲಿಮೆಂಟರಿ ಎಜುಕೇಶನ್‌ನಲ್ಲಿ (B.ELEd)/D.El.Ed ಕೋರ್ಸ್ ತೇರ್ಗಡೆ ಹೊಂದಿರುವ ಅಥವಾ ಪ್ರವೇಶ ಪಡೆದು ಓದುತ್ತಿರುವ ಅಭ್ಯರ್ಥಿಗಳು.
ಪರೀಕ್ಷೆಯ ವೇಳಾಪಟ್ಟಿ ವಿವರ:
ಪರೀಕ್ಷಾ ದಿನಾಂಕ
ಪತ್ರಿಕೆ ಹೆಸರು
ಪರೀಕ್ಷೆಯ ಸಮಯ
07/12/2025 (ಭಾನುವಾರ)
ಪತ್ರಿಕೆ-1
ಬೆಳಗ್ಗೆ 9:30 ರಿಂದ ಮಧ್ಯಾಹ್ನ 12 ಗಂಟೆ
ಪತ್ರಿಕೆ-2
ಮಧ್ಯಾಹ್ನ 02 ರಿಂದ 4:30 ಗಂಟೆ
*ಅಂಗವಿಕಲ/ವಿಕಲಚೇತನ ಅಭ್ಯರ್ಥಿಗಳಿಗೆ 50 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಗುತ್ತದೆ.
ಅರ್ಜಿ ಶುಲ್ಕದ ವಿವರ:
ಸಾಮಾನ್ಯ ವರ್ಗ, 2ಎ, 2ಬಿ, 3ಎ ಮತ್ತು 3ಬಿ ವರ್ಗದ ಅಭ್ಯರ್ಥಿಗಳಿಗೆ – ಒಂದೇ ಪತ್ರಿಕೆಗೆ 700ರೂ. (ಎರಡೂ ಪತ್ರಿಕೆಗಳಿಗೆ 1000ರೂ.) ಪ.ಜಾತಿ/ಪ.ವರ್ಗ/ಪ್ರವರ್ಗ-1 ವರ್ಗದ ಅಭ್ಯರ್ಥಿಗಳಿಗೆ – ಒಂದೇ ಪತ್ರಿಕೆಗೆ 350ರೂ. (ಎರಡೂ ಪತ್ರಿಕೆಗಳಿಗೆ 500ರೂ.) **ವಿಶೇಷ ಚೇತನ/ದಿವ್ಯಾಂಗ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ಇರುತ್ತದೆ.
ಅರ್ಜಿ ಸಲ್ಲಿಕೆ ಹೇಗೆ.?
ಹಂತ-1 ಅಧಿಕೃತ ವೆಬ್‌ಸೈಟ್ https://schooleducation.karnataka.gov.in/ಗೆ ಭೇಟಿ ನೀಡಿ. (ಅಥವಾ ನೇರವಾಗಿ https://sts.karnataka.gov.in/TET/ಗೆ ಭೇಟಿ ನೀಡಿ)
ಹಂತ-2 ನಂತರ ಮುಖಪುಟದಲ್ಲಿ “Regarding inviting applications for the Karnataka Teacher Eligibility Test (KARTET-2025)” ಶೀರ್ಷಿಕೆಯಡಿ “Online Registration Link” ಲಿಂಕ್ ಮೇಲೆ ಒತ್ತಿ.
Kartet Online Application Form 2025
ಹಂತ-3 ಮುಂದೆ ಹೊಸ ಪುಟ ತೆರೆಯುತ್ತದೆ, ಅಲ್ಲಿ ನೋಂದಣಿ ಅಥವಾ ಲಾಗಿನ್ ಮಾಡಿಕೊಂಡು ಕೇಳಲಾದ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ. ಹಾಗೂ ತಿಳಿಸಲಾದ ದಾಖಲೆಗಳ ಪಿಡಿಎಫ್ ಅಪ್ಲೋಡ್ ಮಾಡಿ.
ಹಂತ-4 ಕೊನೆಗೆ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಿ!
ನಾನು 2021 ರಿಂದ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ತೊಡಗಿಕೊಂಡಿರುವೆ. ನಿಮಗೆ ಮಾಹಿತಿ(ಸುದ್ದಿ)ಯನ್ನು ತಲುಪಿಸುವ ಕಾರ್ಯ ಮಾಡುವುದೇ ನನ್ನ ಧ್ಯೇಯ. ಮಾಹಿತಿ ತಲುಪಿಸುವುದರ ಜೊತೆಗೆ ನಾನು ಕೂಡಾ ಹೊಸ ಹೊಸ ಮಾಹಿತಿಯನ್ನು ತಿಳಿದುಕೊಂಡಿದ್ದೇನೆ. ಈಗಲೂ ತಿಳಿದುಕೊಳ್ಳುತ್ತಲೇ ಇದ್ದೇನೆ. ನಿರಂತರ ಕಲಿಕೆಯಲ್ಲಿ ದೋಣಿ ಸಾಗುತ್ತಿದೆ.ಸದ್ಯ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪ್ರಗತಿಯಲ್ಲಿದೆ.....
..puc 94%job beku .. education kagi loan siggu tta illa