ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2025-26ನೇ ಸಾಲಿನ ಪಿಹೆಚ್.ಡಿ ಕಾರ್ಯಕ್ರಮದ ಪ್ರವೇಶಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ(CET) ನೋಂದಣಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕನ್ನಡ, ಇಂಗ್ಲೀಷ್, ಹಿಂದಿ, ತೆಲುಗು, ಸಮಾಜಶಾಸ್ತ್ರ ಹಾಗೂ ಅರ್ಥಶಾಸ್ತ್ರ ಸೇರಿದಂತೆ ಇತರೆ ಒಟ್ಟು 13 ಸಂಶೋಧನಾ ವಿಭಾಗಗಳಲ್ಲಿ ಅರೆಕಾಲಿಕ ಅಥವಾ ಪೂರ್ಣಾವಧಿಯ ಪಿಹೆಚ್.ಡಿ. ಪದವಿ ಕಾರ್ಯಕ್ರಮಕ್ಕೆ ಅಭ್ಯರ್ಥಿಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಮೇ 15 ರವರೆಗೆ ಅವಕಾಶವಿದೆ. ಆಸಕ್ತ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟ್ https://www.ksoumysuru.ac.in/ನಿಂದ ಅರ್ಜಿ ನಮೂನೆ ಡೌನ್ಲೋಡ್ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ‘ಅಧ್ಯಕ್ಷರು……ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕರಾಮುವಿ, ಮುಕ್ತಗಂಗೋತ್ರಿ, ಮೈಸೂರು-570006’ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಏಪ್ರಿಲ್ 28, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮೇ 15, 2026
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ (500ರೂ. ದಂಡ ಶುಲ್ಕದೊಂದಿಗೆ) – ಮೇ 21, 2026
- ಸಾಮಾನ್ಯ ಪ್ರವೇಶಾತಿ ಪರೀಕ್ಷೆ(CET) ದಿನಾಂಕ – ಜೂನ್ 07, 2026
- ಪ್ರವೇಶಾತಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸುವ ದಿನಾಂಕ – ಜೂನ್ 15, 2026
- ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಿಸುವ ದಿನಾಂಕ – ಜೂನ್ 22, 2026
- ಮಾರ್ಗದರ್ಶಕರ ಹಂಚಿಕೆಯ ಕೌನ್ಸಿಲಿಂಗ್ ನಡೆಯುವ ದಿನಾಂಕ – ಜೂನ್ 29, 2026
ಪಿಹೆಚ್.ಡಿ. ಪದವಿ ಸಂಶೋಧನಾ ವಿಭಾಗಗಳ ವಿವರ:
ಕನ್ನಡ
ಇಂಗ್ಲೀಷ್
ಹಿಂದಿ
ತೆಲುಗು
ಸಮಾಜಶಾಸ್ತ್ರ
ಅರ್ಥಶಾಸ್ತ್ರ
ರಾಜ್ಯಶಾಸ್ತ್ರ
ವಾಣಿಜ್ಯಶಾಸ್ತ್ರ
ನಿರ್ವಹಣಾಶಾಸ್ತ್ರ
ರಸಾಯನಶಾಸ್ತ್ರ
ಭೂಗೋಳಶಾಸ್ತ್ರ
ಪರಿಸರ ವಿಜ್ಞಾನ
ಮಾಹಿತಿ ತಂತ್ರಜ್ಞಾನ
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ಆಯ್ಕೆ ವಿಧಾನ:
- ಸಾಮಾನ್ಯ ಪ್ರವೇಶಾತಿ ಪರೀಕ್ಷೆ(ಸಿಇಟಿ)
- ಸಂದರ್ಶನ
- ಕೌನ್ಸಿಲಿಂಗ್
- ದಾಖಲಾತಿ ಪರಿಶೀಲನೆ
ಅಭ್ಯರ್ಥಿಗಳ ಗಮನಕ್ಕೆ: UGC/UGC-CSIR, JRF Test/NET/GATE/GRE/M.Phil ತೇರ್ಗಡೆಯಾದ ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷಾ ವಿನಾಯಿತಿ ಇರುತ್ತದೆ. ಆದಾಗ್ಯೂ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬೇಕು.
ಅರ್ಜಿ ಶುಲ್ಕ:
ಪ.ಜಾ, ಪ.ಪಂ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ ₹1,000
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ₹2,000
ಅರ್ಜಿ ಸಲ್ಲಿಸುವ ವಿಧಾನ
• KSOU ಅಧಿಕೃತ ಜಾಲತಾಣ https://www.ksoumysuru.ac.in/ಕ್ಕೆ ಭೇಟಿ ನೀಡಿ.
• *ಪಿಹೆಚ್.ಡಿ ಕಾರ್ಯಕ್ರಮದ ಪ್ರವೇಶಾತಿ 2025-26 (ರೆಗ್ಯುಲರ್ ಮೋಡ್)* ನಿಗದಿತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಂಡು.
• ಕರಾಮುವಿ ಪೋರ್ಟಲ್ ಮುಖಾಂತರ ಅರ್ಜಿ ಶುಲ್ಕ ಪಾವತಿಸಿ.
• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ಶೈಕ್ಷಣಿಕ ಮಾಹಿತಿ, ಭಾವಚಿತ್ರ, ಸಹಿ, ಅರ್ಜಿ ಶುಲ್ಕ ಪಾವತಿಸಿದ ರಿಸಿಪ್ಟ್ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
• ಈ ಕೆಳಕಂಡ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ಮೇ 15ರೊಳಗೆ ತಲುಪುವಂತೆ ಕಳುಹಿಸಬೇಕು.
ವಿಳಾಸ: ಅಧ್ಯಕ್ಷರು……ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕರಾಮುವಿ, ಮುಕ್ತಗಂಗೋತ್ರಿ, ಮೈಸೂರು-570006
Important Direct Links:
| Notification PDF | Download |
| Application Form PDF | Download |
| Official Website | www.ksoumysuru.ac.in |
| More Updates | KarnatakaHelp.in |
Prakash m