ಏಕಲವ್ಯ ವಸತಿ ಶಾಲೆಯಲ್ಲಿ ಶಿಕ್ಷಕರು, ಸ್ಟಾಫ್‌ ನರ್ಸ್‌, ವಾರ್ಡನ್, ಲ್ಯಾಬ್ ಅಟೆಂಡೆಂಟ್ ಹುದ್ದೆಗಳ ಬೃಹತ್‌ ಭರ್ತಿ

ಒಟ್ಟು 7267 ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆ | ಅರ್ಜಿ ಸಲ್ಲಿಸಲು ಅ.23 ಕೊನೆ ದಿನ

Published on:

ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹುದ್ದೆಗಳ ಭರ್ತಿಗಾಗಿ 2025ರ EMRS ಸಿಬ್ಬಂದಿ ಆಯ್ಕೆ ಪರೀಕ್ಷೆ(ಇಎಂಆರ್‌ಎಸ್‌)ಗೆ ಅರ್ಜಿ ಆಹ್ವಾನಿಸಲಾಗಿದೆ.

ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಬುಡಕಟ್ಟು ವಿದ್ಯಾರ್ಥಿಗಳ ಶಿಕ್ಷಣ ಸಂಘವು (NESTS) ಏಕಲವ್ಯ ಮಾದರಿ ವಸತಿ ಶಾಲೆ (EMRS)ಯಲ್ಲಿನ ವಿವಿಧ ವೃಂದಗಳಲ್ಲಿ ಖಾಲಿ ಇರುವ (ಪ್ರಾಂಶುಪಾಲರು, ಶಿಕ್ಷಕರು, ಹಾಸ್ಟೆಲ್ ವಾರ್ಡನ್ ಮಹಿಳಾ ಸ್ಟಾಫ್ ನರ್ಸ್, ಅಕೌಂಟೆಂಟ್, ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (JSA) ಮತ್ತು ಲ್ಯಾಬ್ ಅಟೆಂಡೆಂಟ್) ಸೇರಿದಂತೆ ಒಟ್ಟು 7267 ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅರ್ಜಿದಾರರು NESTS ಅಧಿಕೃತ ಜಾಲತಾಣ https://nests.tribal.gov.in/ಕ್ಕೆ ಭೇಟಿ ನೀಡಿ. ಅ.23ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು‌ ಪ್ರಾರಂಭ ದಿನಾಂಕ – ಸೆಪ್ಟೆಂಬರ್ 19, 2025
  • ಅರ್ಜಿ ಸಲ್ಲಿಸಲು‌ ಕೊನೆಯ ದಿನಾಂಕ – ಅಕ್ಟೋಬರ್ 23, 2025
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಅಕ್ಟೋಬರ್ 23, 2025

ಖಾಲಿ ಇರುವ ಹುದ್ದೆಗಳ ವಿವರ:

  • ಪ್ರಾಂಶುಪಾಲರು – 225 ಹುದ್ದೆಗಳು
  • ಸ್ನಾತಕೋತ್ತರ ಶಿಕ್ಷಕರು (PGT) – 1460 ಹುದ್ದೆಗಳು
  • ತರಬೇತಿ ಪಡೆದ ಪದವೀಧರ ಶಿಕ್ಷಕರು (TGT) – 3962 ಹುದ್ದೆಗಳು
  • ಮಹಿಳಾ ಸಿಬ್ಬಂದಿ ನರ್ಸ್ – 550 ಹುದ್ದೆಗಳು
  • ಹಾಸ್ಟೆಲ್ ವಾರ್ಡನ್ – 635 ಹುದ್ದೆಗಳು
  • ಲೆಕ್ಕಪರಿಶೋಧಕ – 61 ಹುದ್ದೆಗಳು
  • ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (JSA) – 228 ಹುದ್ದೆಗಳು
  • ಲ್ಯಾಬ್ ಅಟೆಂಡೆಂಟ್ – 146 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

✓ ಪ್ರಾಂಶುಪಾಲರ ಹುದ್ದೆಗಳಿಗೆ – ಭಾರತದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಬಿ.ಎಡ್ ಅಥವಾ ತತ್ಸಮಾನ ಅರ್ಹತೆಯೊಂದಿಗೆ ಸ್ನಾತಕೋತ್ತರ ಪದವಿ ಮತ್ತು ನಿಗದಿತ ಅನುಭವ ಹೊಂದಿರಬೇಕು.

✓ ಸ್ನಾತಕೋತ್ತರ ಶಿಕ್ಷಕರು PGTs ಹುದ್ದೆಗಳಿಗೆ – ಭಾರತದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಸಂಬಂಧಿತವಿಷಯದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಬಿ.ಎಡ್ ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು.

✓ ತರಬೇತಿ ಪಡೆದ ಪದವೀಧರ ಶಿಕ್ಷಕರು TGTs ಹುದ್ದೆಗಳಿಗೆ – ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿಸಿದ ವಿಷಯದಲ್ಲಿ ಪದವಿ/ ಸ್ನಾತಕೋತ್ತರ ಪದವಿ ಹಾಗೂ NCTE ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ 50% ಅಂಕಗಳೊಂದಿಗೆ ಮೂರು ವರ್ಷಗಳ ಸಂಯೋಜಿತ B.Ed.-M.Ed. ಪದವಿ ಪಡೆದಿರಬೇಕು.

✓ ಹಾಸ್ಟೆಲ್ ವಾರ್ಡನ್ ಹುದ್ದೆಗಳಿಗೆ – ಸಂಬಂಧಪಟ್ಟ ವಿಷಯದಲ್ಲಿ NCERT ಅಥವಾ NCTE ಮಾನ್ಯತೆ ಪಡೆದ ಇತರ ಸಂಸ್ಥೆಯ ಪ್ರಾದೇಶಿಕ ಶಿಕ್ಷಣ ಕಾಲೇಜಿನಿಂದ ನಾಲ್ಕು ವರ್ಷಗಳ ಸಂಯೋಜಿತ ಪದವಿ ಕೋರ್ಸ್ ಪೂರ್ಣಗೊಳಿಸಿರಬೇಕು.

✓ ಮಹಿಳಾ ಸ್ಟಾಫ್ ನರ್ಸ್ ಹುದ್ದೆಗಳಿಗೆ – ಭಾರತದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಬಿ.ಎಸ್ಸಿ ನರ್ಸಿಂಗ್ ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು.

✓ ಲೆಕ್ಕಪತ್ರ ನಿರ್ವಹಣೆ ಹುದ್ದೆಗಳಿಗೆ – ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

✓ ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (JSA) ಹುದ್ದೆಗಳಿಗೆ – ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ ಉತ್ತೀರ್ಣ ಜೊತೆಗೆ ಮತ್ತು ಇಂಗ್ಲಿಷ್ ಟೈಪಿಂಗ್‌ನಲ್ಲಿ ನಿಮಿಷಕ್ಕೆ 35 ಪದಗಳ ಕನಿಷ್ಠ ವೇಗ ಅಥವಾ ಹಿಂದಿ ಟೈಪಿಂಗ್‌ನಲ್ಲಿ ನಿಮಿಷಕ್ಕೆ 30 ಪದಗಳ ಕನಿಷ್ಠ ವೇಗವನ್ನು ಹೊಂದಿರಬೇಕು.

✓ ಲ್ಯಾಬ್ ಅಟೆಂಡೆಂಟ್ ಹುದ್ದೆಗಳಿಗೆ – ಮಾನ್ಯತೆ ಪಡೆದ ಮಂಡಳಿ/ಸಂಸ್ಥೆಯಿಂದ ಪ್ರಯೋಗಾಲಯ ತಂತ್ರದಲ್ಲಿ ಪ್ರಮಾಣಪತ್ರ/ಡಿಪ್ಲೊಮಾ ಜೊತೆಗೆ 10ನೇ ತರಗತಿ ಉತ್ತೀರ್ಣ ಅಥವಾ ವಿಜ್ಞಾನ ವಿಭಾಗದಲ್ಲಿ 12 ನೇ ತರಗತಿ ಉತ್ತೀರ್ಣರಾಗಿರಬೇಕು.

✓ ಗ್ರಂಥಪಾಲಕ ಹುದ್ದೆಗೆ – ಗ್ರಂಥಾಲಯ ವಿಜ್ಞಾನದಲ್ಲಿ ಪದವಿ ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ 50% ಅಂಕಗಳೊಂದಿಗೆ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಇಂಟಿಗ್ರೇಟೆಡ್ ಪದವಿ ಹೊಂದಿರಬೇಕು.

ವಯೋಮಿತಿ:

  • ಪ್ರಾಂಶುಪಾಲರು ಹುದ್ದೆಗಳಿಗೆ ಗರಿಷ್ಠ ವಯಸ್ಸಿನ ಮಿತಿ – 50 ವರ್ಷಗಳು
  • ಸ್ನಾತಕೋತ್ತರ ಶಿಕ್ಷಕರು (PGTs) ಹುದ್ದೆಗಳಿಗೆ ಗರಿಷ್ಠ ವಯಸ್ಸಿನ ಮಿತಿ – 40 ವರ್ಷಗಳು
  • ತರಬೇತಿ ಪಡೆದ ಪದವೀಧರ ಶಿಕ್ಷಕರು (TGTs) ಹುದ್ದೆಗಳಿಗೆ ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು
  • ಮಹಿಳಾ ಸಿಬ್ಬಂದಿ ನರ್ಸ್ ಹುದ್ದೆಗಳಿಗೆ ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು
  • ಹಾಸ್ಟೆಲ್ ವಾರ್ಡನ್ ಹುದ್ದೆಗಳಿಗೆ ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು
  • ಲೆಕ್ಕಪರಿಶೋಧಕ ಹುದ್ದೆಗಳಿಗೆ ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು
  • ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (JSA) ಹುದ್ದೆಗಳಿಗೆ ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು
  • ಗ್ರಂಥಪಾಲಕ ಹುದ್ದೆಗೆ – 35 ವರ್ಷಗಳು
  • ಲ್ಯಾಬ್ ಅಟೆಂಡೆಂಟ್ ಹುದ್ದೆಗಳಿಗೆ ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ
ಕೌಶಲ್ಯ ಪರೀಕ್ಷೆ/ಪ್ರಾಯೋಗಿಕ ಪರೀಕ್ಷೆ(ಪೋಸ್ಟ್‌ಗಳ ಪ್ರಕಾರ)
ಸಂದರ್ಶನ (ಅಗತ್ಯವಿದ್ದರೆ)
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ ಮಾಹೆಯಾನ 18,000ರೂ.ಗಳಿಂದ 2,09,200ರೂ. ಗಳವರೆಗೆ ನಿಗದಿತ ದರದಲ್ಲಿ ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ:

✓ ಪ್ರಾಂಶುಪಾಲರ ಹುದ್ದೆಗಳಿಗೆ; ಸಾಮಾನ್ಯ, ಓಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – 2,500ರೂ.

✓ ಟಿಜಿಟಿ ಹಾಗೂ ಪಿಜಿಟಿ ಶಿಕ್ಷಕರ ಹುದ್ದೆಗಳಿಗೆ; ಸಾಮಾನ್ಯ, ಓಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – 2,000ರೂ.

✓ ಬೋಧಕೇತರ ಹುದ್ದೆಗಳಿಗೆ; ಸಾಮಾನ್ಯ, ಓಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – 1,500ರೂ.

✓ ಎಲ್ಲಾ ಹುದ್ದೆಗಳಿಗೂ; ಮಹಿಳೆಯರು, ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂ ಬಿ ಡಿ ಅಭ್ಯರ್ಥಿಗಳಿಗೆ – 500ರೂ.

ಬಂಧುಗಳೇ ಗಮನಿಸಿ: ಈ ಎಲ್ಲಾ ಮಾಹಿತಿ ಒದಗಿಸಿದ್ದೇವೆ ಆದರೂ ಅರ್ಜಿ ಸಲ್ಲಿಸುವ ಮುನ್ನ ಒಂದು ಬಾರಿ ಅಧಿಕೃತ ಅಧಿಸೂಚನೆ ಓದಿ, ತದನಂತರ ಅರ್ಜಿ ಸಲ್ಲಿಸಲು ಮುಂದಾಗಿ ಎಂದು ತಮ್ಮಲಿ ಮನವಿ.

ಆನ್ ಲೈನ್ ಮೂಲಕ ಅರ್ಜಿ‌ ಸಲ್ಲಿಸುವ ವಿಧಾನ:

• NESTS ಲಾಗಿನ್ ಅಧಿಕೃತ ಜಾಲತಾಣ https://examinationservices.nic.in/recSys2025/root/Home.aspx?enc=Ei4cajBkK1gZSfgr53ImFZ5JDNNIP7I8JbNwGOl976uPeIvr9X7G7iVESmo7y1L6 ಕ್ಕೆ ಭೇಟಿ ನೀಡಿ.

Emrs Staff Selection Examination (Esse) Online Form 2025
Emrs Staff Selection Examination (Esse) Online Form 2025

• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಈಗಾಗಲೇ ನೋಂದಾಯಿಸಿದ್ದಲ್ಲಿ ಲಾಗಿನ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

• ಬಳಿಕ ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.

• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ ನಮೂದಿಸಿ ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ಇದಾದ ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿ ಮಾಡಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.

• ಅಂತಿಮವಾಗಿ ಕನ್ಫರ್ಮೇಶನ್ ಪೇಜ್ ಅನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.

Important Direct Links:

EMRS Staff Selection Exam 2025 Official Notification PDFDownload
ESSE 2025 Online Application Form LinkApply Now
Official Websitenests.tribal.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

11 thoughts on “ಏಕಲವ್ಯ ವಸತಿ ಶಾಲೆಯಲ್ಲಿ ಶಿಕ್ಷಕರು, ಸ್ಟಾಫ್‌ ನರ್ಸ್‌, ವಾರ್ಡನ್, ಲ್ಯಾಬ್ ಅಟೆಂಡೆಂಟ್ ಹುದ್ದೆಗಳ ಬೃಹತ್‌ ಭರ್ತಿ”

Leave a Comment