RGIPT ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕರ ಆಯ್ಕೆಗಾಗಿ ಅರ್ಜಿ ಆಹ್ವಾನ

Published on:

ರಾಜೀವ್ ಗಾಂಧಿ ಪೆಟ್ರೋಲಿಯಂ ತಂತ್ರಜ್ಞಾನ ಸಂಸ್ಥೆ(ಆರ್‌ಜಿಪಿಟಿ)ಯು ಜೈಸ್ ಕ್ಯಾಂಪಸ್ ಮತ್ತು ಬೆಂಗಳೂರು ಕ್ಯಾಂಪಸ್‌ಗಳಿಗೆ ಪೆಟ್ರೋಲಿಯಂ ಮತ್ತು ಇಂಧನ ಕ್ಷೇತ್ರದಲ್ಲಿ ಬೋಧನೆ ಮತ್ತು ಸಂಶೋಧನೆ ಮುಂದುವರಿಸಲು ಸಂಸ್ಥೆಯಲ್ಲಿನ ವಿವಿಧ ವಿಭಾಗಗಳಿಗೆ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಗ್ರೇಡ್-I/II/III ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಉದ್ಯೋಗಾಕಾಂಕ್ಷಿಗಳು RGIPT ಅಧಿಕೃತ ಜಾಲತಾಣ https://portal.rgipt.ac.in/recruitment ಕ್ಕೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:

• ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ.

• ಇದು ರೋಲಿಂಗ್ ಜಾಹೀರಾತು ಆಗಿದ್ದು, ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ. ಅರ್ಜಿಯನ್ನು ಯಾವುದೇ ಸಮಯದಲ್ಲಿ ಕಳುಹಿಸಬಹುದು.

• ಮೊದಲ ಸೈಕಲ್ ಕಟ್ ಆಫ್ ದಿನಾಂಕ ಮೇ 01, 2026 ರಂದು ಪ್ರಕಟವಾಗಲಿದೆ.

• ಎರಡನೇ ಸೈಕಲ್ ಕಟ್ ಆಫ್ ದಿನಾಂಕ – ನವೆಂಬರ್ 01, 2026ರಂದು ಪ್ರಕಟವಾಗಲಿದೆ.

ಶೈಕ್ಷಣಿಕ ಅರ್ಹತೆ:

ಎಲ್ಲಾ ಅಧ್ಯಾಪಕ ಹುದ್ದೆಗಳಿಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಪ್ರಥಮ ದರ್ಜೆ ಪದವಿಯೊಂದಿಗೆ ಪಿಎಚ್‌ಡಿ ಪೂರ್ಣಗೊಳಿಸಿರಬೇಕು.

ಪ್ರಾಧ್ಯಾಪಕ ಹುದ್ದೆಗೆ; 10 ವರ್ಷಗಳ ಬೋಧನೆ/ಸಂಶೋಧನೆ/ಕೈಗಾರಿಕಾ ಅನುಭವ, ಇದರಲ್ಲಿ (ಕನಿಷ್ಠ 04 ವರ್ಷಗಳು ಅಸೋಸಿಯೇಟ್ ಪ್ರೊಫೆಸರ್) ಮಟ್ಟದಲ್ಲಿರಬೇಕು.

ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳಿಗೆ; ಕನಿಷ್ಠ 6 ವರ್ಷಗಳ ಬೋಧನೆ/ಸಂಶೋಧನೆ/ಕೈಗಾರಿಕಾ ಅನುಭವ, ಇದರಲ್ಲಿ(ಕನಿಷ್ಠ 03 ವರ್ಷಗಳು ಸಹಾಯಕ ಪ್ರಾಧ್ಯಾಪಕ ಅಥವಾ ತತ್ಸಮಾನ) ಮಟ್ಟದಲ್ಲಿರಬೇಕು.

ವಯೋಮಿತಿ:

ಗರಿಷ್ಠ ವಯಸ್ಸಿನ ಮಿತಿ 35 ವರ್ಷಗಳು

ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.

ಆಯ್ಕೆ ವಿಧಾನ:

ಅರ್ಹತೆ, ಅನುಭವ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ವೇತನ:

ಪ್ರಾಧ್ಯಾಪಕರು ಹುದ್ದೆಗಳಿಗೆ ₹1,59,100
ಸಹಾಯಕ ಪ್ರಾಧ್ಯಾಪಕರು ಹುದ್ದೆಗಳಿಗೆ ₹1,39,600
ಸಹಾಯಕ ಪ್ರಾಧ್ಯಾಪಕರು ಗ್ರೇಡ್-I ಹುದ್ದೆಗಳಿಗೆ ₹1,01,500
ಸಹಾಯಕ ಪ್ರಾಧ್ಯಾಪಕರು ಗ್ರೇಡ್-II ಹುದ್ದೆಗಳಿಗೆ ₹70,900-89,900

ಅರ್ಜಿ ಶುಲ್ಕ:

ಉಲ್ಲೇಖಿಸಲಗಿರುವುದಿಲ್ಲ

ಹೇಗೆ ಅರ್ಜಿ ಸಲ್ಲಿಸುವುದು?

• RGIPT ಅಧಿಕೃತ ಜಾಲತಾಣ https://portal.rgipt.ac.in/recruitment ಕ್ಕೆ ಭೇಟಿ ನೀಡಿ.

Rgipt Jais And Bengaluru Faculty Notification 2026
Rgipt ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕರ ಆಯ್ಕೆಗಾಗಿ ಅರ್ಜಿ ಆಹ್ವಾನ

• ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.

• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ, ಸಹಿ, ಭಾವಚಿತ್ರ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.

• ಕೊನೆಯಲ್ಲಿ ಭರ್ತಿ ಮಾಡಿದ ಅರ್ಜಿಯ ಪ್ರತಿಯನ್ನು ಎಲ್ಲಾ ಪೂರಕ ದಾಖಲೆಗಳೊಂದಿಗೆ fri@rgipt.ac.in ಗೆ ಇಮೇಲ್ ಮೂಲಕ ಕಳುಹಿಸಿ.

Important Direct Links:

Official Notification PDFDownload
Online Application Form LinkApply Now
Official Websitewww.rgipt.ac.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment