ರಾಜ್ಯ ಅರಣ್ಯ ಇಲಾಖೆಯ ಜೀವವೈವಿಧ್ಯ ಮಂಡಳಿ ಬೆಂಗಳೂರಿನಲ್ಲಿ ಸಸ್ಯಶಾಸ್ತ್ರ ಸಮಾಲೋಚಕ (ಕನ್ಸಲ್ಟೆಂಟ್) ಹುದ್ದೆಯ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಸ್ಯ ವಿಜ್ಞಾನ ಕ್ಷೇತ್ರದಲ್ಲಿ ಜೀವವೈವಿಧ್ಯ ದಾಖಲಾತಿ, ಸಂಶೋಧನೆ ಮತ್ತು ಅದರ ಪ್ರಕಟಣೆ ಮತ್ತು ಸಲಹಾ ಬೆಂಬಲಕ್ಕೆ ಸಂಬಂಧಿಸಿದ ನಿರ್ದಿಷ್ಟ ಕಾರ್ಯಯೋಜನೆಗಳಿಗಾಗಿ ಕನ್ಸಲ್ಟೆಂಟ್ (ಸಸ್ಯಶಾಸ್ತ್ರ) ಹುದ್ದೆಗೆ ಓರ್ವ ಅಭ್ಯರ್ಥಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಯ ಕಾರ್ಯಕ್ಷಮತೆಯ ಆಧಾರದ ಮೇಲೆ ವಿಸ್ತರಣೆಗೆ ಅವಕಾಶವಿದೆ. ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಸೆ.20 ರೊಳಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಮಂಡಳಿಯ ಸದಸ್ಯ ಕಾರ್ಯದರ್ಶಿ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 20, 2025
ಶೈಕ್ಷಣಿಕ ಅರ್ಹತೆ:
• ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಸ್ಯಶಾಸ್ತ್ರ ಅಥವಾ ಜೀವ ವಿಜ್ಞಾನದಲ್ಲಿ ಪಿಎಚ್ಡಿ ಪೂರ್ಣಗೊಳಿಸಿರಬೇಕು.
• ಜೀವವೈವಿಧ್ಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸಂಶೋಧನಾ ಪ್ರಕಟಣೆಗಳೊಂದಿಗೆ ಪಿಎಚ್ಡಿ ಪಡೆದ ನಂತರ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವೃತ್ತಿ ಅನುಭವವನ್ನು ಹೊಂದಿರಬೇಕು.
ಇತರೆ ಅರ್ಹತೆ/ಅನುಭವ:
• ಜೀವವೈವಿಧ್ಯ ದಾಖಲೀಕರಣ, ಸಂರಕ್ಷಣಾ ಯೋಜನೆ, ಸಸ್ಯ ವರ್ಗೀಕರಣ ಮತ್ತು ಜೀವವೈವಿಧ್ಯ ಪರಂಪರೆಯ ತಾಣಗಳು ಮತ್ತು ಅವುಗಳ ನಿರ್ವಹಣೆಯಲ್ಲಿ ಅನುಭವ ಹೊಂದಿರಬೇಕು.
• ಸರ್ಕಾರಿ ಯೋಜನೆಗಳು, ಸಂಶೋಧನಾ ಯೋಜನೆಗಳು, ಜೀವವೈವಿಧ್ಯ ಮಂಡಳಿಗಳು ಅಥವಾ ಸಂಶೋಧನಾ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿರಬೇಕು.
• ಪ್ರವೇಶ ಮತ್ತು ಪ್ರಯೋಜನ ಹಂಚಿಕೆ (ABS) ನಿಬಂಧನೆಗಳು ಮತ್ತು ಜೈವಿಕ ವೈವಿಧ್ಯತೆ ಕಾಯ್ದೆ/ನಿಯಮಗಳ ಜ್ಞಾನ ಅವಶ್ಯಕ.
ವಯೋಮಿತಿ:
ಗರಿಷ್ಠ ವಯೋಮಿತಿ – 50 ವರ್ಷಗಳು
ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 60,000ರೂ. ವರೆಗೆ ವೇತನ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆಗಳು, ಸಂಬಂಧಿತ ಅನುಭವ ಮತ್ತು ಆಯ್ಕೆ ಸಮಿತಿ ನಡೆಸುವ ಸಂದರ್ಶನದ ಕಾರ್ಯಕ್ಷಮತೆಯ ಆಧಾರದ ಮೇಲೆ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ.
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು. ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ, ಶೈಕ್ಷಣಿಕ ಅರ್ಹತೆ, ಅನುಭವ ಪ್ರಮಾಣಪತ್ರಗಳ ಸ್ವಯಂ ದೃಢೀಕರಿಸಿದ ಪ್ರತಿಗಳು ಮತ್ತು ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಭಾವಚಿತ್ರದೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸೆಪ್ಟೆಂಬರ್ 20ರ ಒಳಗೆ ಪೋಸ್ಟ್ ಅಥವಾ ವೈಯಕ್ತಿಕವಾಗಿ ತಲುಪಿಸಬಹುದು.
ವಿಳಾಸ:
ಆಡಳಿತ ಅಧಿಕಾರಿ, ಕರ್ನಾಟಕ ಜೀವವೈವಿಧ್ಯ ಮಂಡಳಿ, ನೆಲ ಮಹಡಿ, ವನವಿಕಾಸ್, 18ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು 560003
ಅಭ್ಯರ್ಥಿಗಳ ಗಮನಕ್ಕೆ: ಲಕೋಟೆಯ ಮೇಲೆ “ಸಲಹೆಗಾರ (ಸಸ್ಯಶಾಸ್ತ್ರ) ಹುದ್ದೆಗೆ ಅರ್ಜಿ” ಎಂದು ಬರೆದಿರಬೇಕು. ಹೆಚ್ಚಿನ ಮಾಹಿತಿಗಾಗಿ: 080-23448783 ಗೆ ಸಂಪರ್ಕಿಸಬಹುದಾಗಿದೆ.
B com