UGCET 2025: ಮೊದಲನೇ ಸುತ್ತಿನ ಸೀಟು ಹಂಚಿಕೆಗೆ ಆಯ್ಕೆ ನಮೂದಿಸುವ ಕೊನೆ ದಿನಾಂಕ ವಿಸ್ತರಣೆ

By Shwetha Chidambar

Published On:

IST

ಫಾಲೋ ಮಾಡಿ

KCET 1st Round Option Entry Date 2025
KCET 1st Round Option Entry Date 2025

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) UGCET-2025 ರ ಪ್ರವೇಶಾತಿ ಸಂಬಂಧ ಇಂಜಿನಿಯರಿಂಗ್, ವೆಟರಿನರಿ, ಕೃಷಿವಿಜ್ಞಾನ ಸೇರಿ ವಿವಿಧ ಕೋರ್ಸುಗಳಿಗೆ ಆಯ್ಕೆಗಳನ್ನು ದಾಖಲಿಸಲು ನೀಡಲಾಗಿದ್ದ ಕೊನೆ ದಿನಾಂಕ ವಿಸ್ತರಿಸಿ ಪ್ರಕಟಣೆಯನ್ನು ಹೊರಡಿಸಿದೆ.

ಇಂಜಿನಿಯರಿಂಗ್, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಕೃಷಿ ವಿಜ್ಞಾನ, ಬಿ.ಪಿ.ಟಿ, ಅಲೈಡ್ ಹೆಲ್ತ್ ಸೈನ್ಸ್, ಬಿಎಸ್‌ಸಿ (ನರ್ಸಿಂಗ್), ದಂತವೈದ್ಯಕೀಯ, ಅಲೈಡ್ ಹೆಲ್ತ್ ಸೈನ್ಸ್, ಬಿಪಿಒ, ಬಿಪಿಟಿ ಕೋರ್ಸುಗಳಿಗೆ ಸರ್ಕಾರ, ಯೂನಿವರ್ಸಿಟಿ ಹಾಗೂ ಇಲಾಖೆಗಳು ನೀಡಿರುವ ಸೀಟ್ ಮ್ಯಾಟ್ರಿಕ್ಸ್ ಅನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಿ ಆಯ್ಕೆಗಳನ್ನು ದಾಖಲಿಸಲು ಜುಲೈ 8 ರಿಂದ 18 ರವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು. ಇದೀಗ ಪ್ರಾಧಿಕಾರವು ಆಯ್ಕೆ ದಾಖಲಿಸಲು ನೀಡಲಾಗಿದ್ದ ದಿನಾಂಕವನ್ನು ವಿಸ್ತರಿಸಿದೆ.

UGCET-2025ರ ಆಯ್ಕೆ ನಮೂದು ಸಲ್ಲಿಕೆಯ ದಿನಾಂಕ ವಿಸ್ತರಣೆ:

ಅಭ್ಯರ್ಥಿಗಳು ಮೊದಲನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶಕ್ಕಾಗಿ – ಮೊದಲನೆಯ ಹಂತದಲ್ಲಿ ಜುಲೈ 8 ರಿಂದ 18 ರವರೆಗೆ ತಮ್ಮ ಆಯ್ಕೆಯ ಕ್ರಮಾನುಸಾರ ಕಾಲೇಜುಗಳನ್ನು ಆಯ್ಕೆ ಮಾಡಿ ಆಯ್ಕೆ ನಮೂದು ಅನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ಈ ಅವಧಿಯನ್ನು ಜುಲೈ 22ರವರೆಗೆ ವಿಸ್ತರಿಸಲಾಗಿದೆ. ಇಚ್ಚೆ / ಆಯ್ಕೆಗಳನ್ನು ನಮೂದಿಸದೇ ಇರುವ ಅಭ್ಯರ್ಥಿಗಳು ಆದ್ಯತಾ ಕ್ರಮದಲ್ಲಿ options ಗಳನ್ನು ದಾಖಲಿಸಬಹುದಾಗಿದೆ.

ಎಷ್ಟು ಬಾರಿಯಾದರೂ ಆಯ್ಕೆ ನಮೂದು ದಾಖಲಿಸಬಹುದು:

ಅಭ್ಯರ್ಥಿಗಳು ಜು.22ರ ವರೆಗೆ ಎಷ್ಟು ಬಾರಿಯಾದರೂ ಆಯ್ಕೆ ನಮೂದು ಪೋರ್ಟಲ್‌ಗೆ ಲಾಗಿನ್ ಮಾಡಿ ಆಯ್ಕೆಗಳನ್ನು ದಾಖಲಿಸಬಹುದು. ಅಂತಿಮವಾಗಿ ಸಲ್ಲಿಸುವ options ಗಳನ್ನು ಸೀಟು ಹಂಚಿಕೆಗೆ ಪರಿಗಣಿಸಲಾಗುವುದರಿಂದ ಅಭ್ಯರ್ಥಿಗಳು ಅಂತಿಮ ಪ್ರತಿಯನ್ನು ತೆಗದು ಪರಿಶೀಲಿಸಿಕೊಳ್ಳಲು ಸೂಚಿಸಿದೆ. Options ಗಳನ್ನು ದಾಖಲಿಸಲು ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ ಸೈಟಿನಲ್ಲಿ ಪ್ರಕಟಿಸಿರುವ ಮಾರ್ಗದರ್ಶಿಯಲ್ಲಿನ ಮಾಹಿತಿಯನ್ನು ನೋಡಬಹುದು.

ವಿಶೇಷ ಸೂಚನೆ:

ಸರ್ಕಾರವು ಪ್ರತಿ ಕೋರ್ಸಿಗೆ ನಿಗದಿಪಡಿಸಿರುವ ಶುಲ್ಕದ ವಿವರಗಳನ್ನು ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದ್ದು, ಶುಲ್ಕದ ವಿನ್ಯಾಸದಲ್ಲಿ ಬದಲಾವಣೆಗಳಿದ್ದಲ್ಲಿ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುತ್ತದೆ. ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟಿಗೆ ಆಗಿಂದಾಗ್ಗೆ ಬೇಟಿ ನೀಡಿ ಶುಲ್ಕದ ವಿವರಗಳನ್ನು ಗಮನಿಸಿ ನಂತರ ಆಯ್ಕೆ (options) ಗಳನ್ನು ದಾಖಲಿಸಬಹುದು.

How to Do KCET 1st Round Option Entry Date 2025

ಯುಜಿಸಿಇಟಿ 2025 ಮೊದಲ ಸುತ್ತಿನ ಆಯ್ಕೆ ನಮೂದು ಸಲ್ಲಿಸುವ ವಿಧಾನ;

  • ಕೆಇಎ ಅಧಿಕೃತ ವೆಬ್ ಸೈಟ್ https://cetonline.karnataka.gov.in/kea/ugcet2025 ಗೆ ಭೇಟಿ ನೀಡಿ.
  • ನಿಮ್ಮ ಆಯ್ಕೆ ಅನುಸಾರ ಕಾಲೇಜುಗಳನ್ನು ಆಯ್ಕೆ ಮಾಡಲು UGCET-2025 ಮೊದಲ ಸುತ್ತಿನ ಆಯ್ಕೆ ಪ್ರವೇಶ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಂತರ ಸ್ಕ್ಯಾನ್ ಅಥವಾ CET ನೋಂದಣಿ ಸಂಖ್ಯೆ ಮೂಲಕ ಲಾಗಿನ್ ಆಗಿ.
  • ನಿಮ್ಮ ಆಯ್ಕೆಯ ಅನುಸಾರ ನೀವು ಪ್ರವೇಶಾತಿ ಪಡೆಯಲು ಬಯಸುವ ಕಾಲೇಜುಗಳನ್ನು ಕ್ರಮಾನಸಾರ ಆಯ್ಕೆ ಮಾಡಿ.

Important Direct Links:

KCET 1st Round Option Entry Last Date Extended 2025 Notice PDFDownload
KCET 1st Round Option Entry 2025 LinkEntry Now
Official Websitekea.kar.nic.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment