ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) UGCET-2025ರ ಪ್ರವೇಶಾತಿ ಸಂಬಂಧ ಇಂಜಿನಿಯರಿಂಗ್, ವೆಟರಿನರಿ, ಕೃಷಿವಿಜ್ಞಾನ ಕೋರ್ಸುಗಳಿಗೆ ಜು.08ರಿಂದ ಆಯ್ಕೆಗಳನ್ನು ದಾಖಲಿಸಲು ಪ್ರಾರಂಭಿಸಲಾಗಿದೆ.
UGCET-2025ರ ಪ್ರವೇಶಕ್ಕೆ ಸಲುವಾಗಿ ಪ್ರಕಟಿಸಲಾದ ಸೀಟ್ ಮ್ಯಾಟ್ರಿಕ್ಸ್ ಅನ್ನು ಪರಿಶೀಲಿಸಿ ವಿದ್ಯಾರ್ಥಿಗಳು ಇಚ್ಚೆ/ಆಯ್ಕೆಗಳನ್ನು ದಾಖಲಿಸುವ ಸಮಯದಲ್ಲಿ ಆದ್ಯತಾ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದ್ದು, ಸೀಟು ಹಂಚಿಕೆಯ ವಿವಿಧ ಹಂತಗಳ ಕುರಿತು ವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಯುಜಿಸಿಇಟಿ-2025ರ ಸೀಟು ಹಂಚಿಕೆಯ ಮಾಹಿತಿ ಪುಸ್ತಕದಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಳ್ಳಬಹುದು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೆ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
UGCET-2025ರ ಆಯ್ಕೆ ನಮೂದು ಸಲ್ಲಿಕೆಯ ವಿಡಿಯೋ
ಅಭ್ಯರ್ಥಿಗಳು ಮೊದಲನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶಕ್ಕಾಗಿ ಮೊದಲನೆಯ ಹಂತದಲ್ಲಿ ಜು.08 ರಿಂದ 18ರವರೆಗೆ ತಮ್ಮ ಆಯ್ಕೆಯ ಕ್ರಮಾನುಸಾರ ಕಾಲೇಜುಗಳನ್ನು ಆಯ್ಕೆ ಮಾಡಿ ಆಯ್ಕೆ ನಮೂದು ಅನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅಭ್ಯರ್ಥಿಗಳು ಯಾವ ರೀತಿ ಆಯ್ಕೆ (options)ಗಳನ್ನು ದಾಖಲಿಸುವುದು, ಪೂರ್ವ ಸಿದ್ಧತೆಗಳ ಕುರಿತಾದ ವಿಡಿಯೋವನ್ನು ಪಾಧಿಕಾರದ ವಿಕಸನ ಚಾನಲ್ ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
ಪ್ರಾಕ್ಟಿಕಲ್ ಹಾಗೂ ರೆಗ್ಯುಲರ್ ಸೀಟುಗಳಿಗೆ ಪ್ರತ್ಯೇಕವಾಗಿ ಆಯ್ಕೆ ನಮೂದು ಸಲ್ಲಿಕೆ
ವಿಶೇಷವಾಗಿ ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಕೃಷಿ ವಿಜ್ಞಾನ ಕೋರ್ಸುಗಳಲ್ಲಿ ಪ್ರಾಕ್ಟಿಕಲ್ ರಾಂಕ್ ಪಡೆದಿರುವ ಅಭ್ಯರ್ಥಿಗಳು ಪ್ರಾಕ್ಟಿಕಲ್ ಸೀಟುಗಳಿಗೆ ಪತ್ಯೇಕವಾಗಿ ಮತ್ತು ರೆಗ್ಯುಲರ್ ಸೀಟುಗಳಿಗೆ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಆಯ್ಕೆ (options)ಗಳನ್ನು ದಾಖಲಿಸಬೇಕು. (ಹೆಚ್ಚಿನ ವಿವರಗಳನ್ನು ಪ್ರಾಧಿಕಾರದ ವೆಬ್ ಸೈಟಿನಲ್ಲಿ ಪಡೆಯಬಹುದು)
UGCET-2025 ಕೆಲ ಕೋರ್ಸುಗಳಿಗೆ ಸೀಟ್ ಮ್ಯಾಟ್ರಿಕ್ಸ್ ಶೀಘ್ರ ಪ್ರಕಟ
ಬಿ.ಎಸ್.ಸಿ. (ನರ್ಸಿಂಗ್), ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ, ವೈದ್ಯಕೀಯ, ದಂತವೈದ್ಯಕೀಯ, ಆರ್ಯುವೇದ, ಹೋಮಿಯೋಪತಿ, ಯುನಾನಿ, ಫಾರ್ಮಸಿ ಕೋರ್ಸುಗಳಿಗೆ ಸೀಟ್ ಮ್ಯಾಟಿಕ್ಸ್ ಅನ್ನು ಸಂಬಂಧಿಸಿದ ಇಲಾಖೆಗಳು ನೀಡಿರುವುದಿಲ್ಲ. ಸದರಿ ಕೋರ್ಸುಗಳಿಗೆ ಪ್ರವೇಶಾತಿ ಪಡೆಯಲು ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಸೀಟ್ ಮ್ಯಾಟ್ರಿಕ್ಸ್ ಸ್ವೀಕೃತವಾದ ನಂತರ ಆಯ್ಕೆ (options) ನಮೂದು ಪೋರ್ಟಲ್ ಅನ್ನು ತೆರೆಯಲಾಗುವುದು.
ವೈದ್ಯಕೀಯ, ದಂತವೈದ್ಯಕೀಯ, ಆರ್ಯುವೇದ, ಹೋಮಿಯೋಪತಿ, ಯುನಾನಿ ಕೋರ್ಸುಗಳ ಕುರಿತು ಮಾಹಿತಿ
ರಾಷ್ಟ್ರೀಯ ವೈದ್ಯಕೀಯ ಮಂಡಳಿ ಮತ್ತು ಮೆಡಿಕಲ್ ಕೌನ್ಸಿಲಿಂಗ್ ಕಮಿಟಿ ನವದೆಹಲಿ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ರವರು ಕಾಲ ಕಾಲಕ್ಕೆ ಹೊರಡಿಸುವ ಸೂಚನೆಗಳು/ಅಧಿಸೂಚನೆಗಳ ಅನ್ವಯ ವೈದ್ಯಕೀಯ, ದಂತವೈದ್ಯಕೀಯ, ಆರ್ಯುವೇದ, ಹೋಮಿಯೋಪತಿ, ಯುನಾನಿ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಅದರಂತೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳಿಗೆ ಆಯ್ಕೆ ಗಳನ್ನು ಸೇರಿಸುವ ಬಗ್ಗೆ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಅದನ್ನು ಪರಿಶೀಲಿಸಬಹುದು.
Important Direct Links:
UGCET 2025 Option Entry Guide PDF (Dated on 12/7/2025) | Download |
KCET Option Entry 2025 Link | Entry Now |
Official Website | Kea.Kar.Nic.In |
More Updates | Karnataka Help.in |
Chitra sagre
Iam study paramedical 3 rd year
Chitra sagre