ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕರ್ನಾಟಕ ಸಾಮಾನ್ಯ ಕಾಲೇಜು ಪ್ರವೇಶ ಪರೀಕ್ಷೆ (KCET Results 2024 Date) 2024ರ ಫಲಿತಾಂಶವನ್ನು ಇಂದು ಜೂನ್ 01, 2024 ರಂದು ಬಿಡುಗಡೆ ಮಾಡಿದೆ. 2024-25ನೇ ಸಾಲಿನ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್, ಇತರೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಈ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 18, 19 ರಂದು ನಡೆಸಿದ್ದ ಯುಜಿಸಿಇಟಿ ಪರೀಕ್ಷೆಯ ಫಲಿತಾಂಶವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಬಿಡುಗಡೆ.
ಈ ಫಲಿತಾಂಶ ಪ್ರಕಟವಾದ ನಂತರ ಮೊದಲನೇ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಹಾಗೂ ಇತರೆ ಪ್ರಕ್ರಿಯೆಗಳ ಕುರಿತು ಅಧಿಕೃತ ಅಧಿಸೂಚನೆ ಬಿಡುಗಡೆ ಆಗಲಿದೆ. ಒಟ್ಟು 5 ಸುತ್ತಿನಲ್ಲಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಕಾಲೇಜಿನ ಸೀಟ್ ಹಂಚಿಕೆಯನ್ನು ಮಾಡಲಾಗುತ್ತದೆ. ಮೊದಲ ಸುತ್ತಿನ ಫಲಿತಾಂಶ ಬಂದ ಬಳಿಕ ಎರಡನೇ ಸುತ್ತಿನ ಫಲಿತಾಂಶ ಹೊರಬರಲಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು kea.kar.nic.in ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.