ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಿರಿಯ ಅಭಿಯಂತರ (ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕ್) ಹುದ್ದೆಗಳ ಭರ್ತಿಗಾಗಿ ನಡೆಸಬೇಕಿದ್ದ ಪರೀಕ್ಷೆಯ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ.
ನಿರ್ದಿಷ್ಟ ಪತ್ರಿಕೆ-2ನ್ನು ಡಿ.20ಕ್ಕೆ ನಿಗದಿಪಡಿಸಲಾಗಿತ್ತು ಆದರೆ ತಾಂತ್ರಿಕ ಕಾರಣಗಳಿಂದ ಪರೀಕ್ಷೆಯನ್ನು ಡಿ.22 ರಂದು ಬೆಳಗ್ಗೆ 10:30 ರಿಂದ 12:30ರವೆರೆಗೆ ನಡೆಸಲಾಗುವುದು. ಉಳಿದಂತೆ ನ.19 ರಂದು ಪ್ರಕಟಿಸಲಾದ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕೆಇಎ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.


