KEA Exam Dates 2024: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯದಲ್ಲಿ ಖಾಲಿ ಇರುವ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಈಗಾಗಲೇ ಸಾಕಷ್ಟು ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದು ಪರೀಕ್ಷೆ ದಿನಾಂಕಕ್ಕಾಗಿ ಸಾಕಷ್ಟು ಅಭ್ಯರ್ಥಿಗಳು ಕಾಯುತ್ತಿದ್ದರು.
ಇದೀಗ ಪರೀಕ್ಷಾ ಪ್ರಾಧಿಕಾರವು ವಿವಿಧ ಇಲಾಖೆಗಳಲ್ಲಿನ ಹುದ್ದೆಗಳ ಭರ್ತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಪರಿಷ್ಕೃತ ವೇಳಾಪಟ್ಟಿ/ದಿನಾಂಕವನ್ನು ಪ್ರಕಟಣೆ ಮಾಡಿದೆ.
ಪೊಲೀಸ್ ಇಲಾಖೆ: ಪೊಲೀಸ್ ಇಲಾಖೆಯಲ್ಲಿನ ಪಿ.ಎಸ್ ಐ 402 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 03, 2024(ಗುರುವಾರ) ರಂದು ಪರೀಕ್ಷೆ ನಡೆಯಲಿದೆ.
KEA Exam Dates 2024
ಕಂದಾಯ ಇಲಾಖೆ: ಕಂದಾಯ ಇಲಾಖೆಯಲ್ಲಿನ ಖಾಲಿರುವ ಗ್ರಾಮ ಆಡಳಿತ ಅಧಿಕಾರಿಗಳ ಒಟ್ಟು 1000 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು ಇದಕ್ಕೆ ಸಂಬಂಧಿಸಿದ ಪರೀಕ್ಷೆಗಳು ಸೆಪ್ಟಂಬರ್ 29, 2024(ರವಿವಾರ) ರಂದು ಪರೀಕ್ಷೆ ನಡೆಯಲಿವೆ.
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು ಇದಕ್ಕೆ ಸಂಬಂಧಿಸಿದ ಪರೀಕ್ಷೆಗಳು ಅಕ್ಟೋಬರ್ 27, 2024 (ರವಿವಾರ)ರಂದು ಪರೀಕ್ಷೆ ನಡೆಯಲಿವೆ.
K-SET Exam Date 2024
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ- 2024ರ ಪರೀಕ್ಷೆಯು ನವೆಂಬರ್ 24, 2024 ನಡೆಯಲಿದೆ.
Raichur University assistant professor Exam Date 2024
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಯಚೂರು ವಿವಿಯಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆಯು ನವೆಂಬರ್ 24, 2024 ರಂದು 11.00 AM ರಿಂದ 1.00 PM ವರೆಗೆ ಪತ್ರಿಕೆ 2 ನಡೆಯಲಿದೆ. ಹಾಗೂ ಪತ್ರಿಕೆ 1 ಯು 03.00 PM ರಿಂದ 4.00 PMವರೆಗೆ ನಡೆಯಲಿದೆ.
Important Links:
KEA Revised Exam Dates 2024 Details PDF(Dated On 17/09/2024)
Work