ಬೀದರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ-1, ಬೀದರ-2, ಭಾಲ್ಕಿ, ಔರಾದ, ಬಸವಕಲ್ಯಾಣ ಮತ್ತು ಹುಮನಾಬಾದ ಘಟಕಗಳಿಗೆ ಚಾಲಕ ಹುದ್ದೆಗಳ ಭರ್ತಿಗಾಗಿ ಫೆ.3 ಮತ್ತು 04ರಂದು ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಬೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದ್ಯೋಶ ಸಹಕಾರ ಸಂಘ ನಿಯಮಿತದ ಕಾರ್ಯದರ್ಶಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಕರಸಾ ನಿಗಮದ ಹಳೆ ಬಸ್ ನಿಲ್ದಾಣದ ಬೀದರ ವಿಭಾಗೀಯ ಕಚೇರಿಯಲ್ಲಿ ನೇರ ಸಂದರ್ಶನ ಜರುಗಲಿದೆ. ಒಟ್ಟು 78 ಸ್ಥಾನಗಳಿಗೆ ತಾತ್ಕಾಲಿಕ ಹೊರಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಎಸ್ಸೆಸ್ಸೆಲ್ಸಿ ಜೊತೆಗೆ ಭಾರೀ ಸಾರಿಗೆ ವಾಹನ ಪರವಾನಗಿ(HTV) ಮತ್ತು ಕರ್ನಾಟಕ ಬ್ಯಾಡ್ಜ್ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಅಧಿಕೃತ ಜಾಲತಾಣ http://www.bidar.nic.in/ಕ್ಕೆ ಭೇಟಿ ನೀಡಿ ಎಂದು ತಿಳಿಸಲಾಗಿದೆ.
ಮಾನ್ಯತೆ ಪಡೆದ ಮಹಾವಿದ್ಯಾಲಯದಿಂದ 10ನೇ ತರಗತಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
04-02-2026ರಂತೆ;
ಕನಿಷ್ಠ – 24 ವರ್ಷಗಳು
ಸಾಮಾನ್ಯ ವರ್ಗ – 35 ವರ್ಷಗಳು, ಪ್ರವರ್ಗ 2A, 2B, 3A ಮತ್ತು 3B – 38 ವರ್ಷಗಳು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1- 40 ವರ್ಷಗಳು
ಸಲ್ಲಿಸಬೇಕಾಗುವ ದಾಖಲೆಗಳು:
■ ಅಭ್ಯರ್ಥಿಗಳ ಪಾಸ್ಪೋರ್ಟ್ ಗಾತ್ರದ 04 ಪೋಟೋ ■ ಜಾತಿ ಪ್ರಮಾಣಪತ್ರ ■ ಆಧಾರ್ ಕಾರ್ಡ್ ■ ಎಸ್ಸೆಸ್ಸೆಲ್ಸಿ ಮೂಲ ಅಂಕಪಟ್ಟಿ ■ ಭಾರೀ ಸಾರಿಗೆ ವಾಹನ ಪರವಾನಗಿ(HTV) ಮತ್ತು ಕರ್ನಾಟಕ ಬ್ಯಾಡ್ಜ್ ■ ಕಕರಸಾ ನಿಗಮದಲ್ಲಿ ಅಥವಾ ಸಹೋದರ ಸಂಸ್ಥೆಗಳಾದ ಕರಾರಸಾ ನಿಗಮ/ಬೆಮಸಾ ಸಂಸ್ಥೆ/ವಾಕರಸಾ ಸಂಸ್ಥೆಗಳಲ್ಲಿ ಗಣಕೀಕೃತ ಚಾಲನಾ ಪಥದ ಟ್ರ್ಯಾಕ್ ಟೆಸ್ಟನಲ್ಲಿ ಭಾಗವಹಿಸಿ, ಉತ್ತೀರ್ಣರಾದ ಕುರಿತು ಅಂಕಪಟ್ಟಿ ಹಾಗೂ ದಾಖಲಾತಿ ಪರಿಶೀಲನಾ ವರದಿ ■ ಅಂಕಪಟ್ಟಿ ಹಾಗೂ ದಾಖಲಾತಿ ಪರಿಶೀಲನಾ ವರದಿ
ಅರ್ಜಿ ಸಲ್ಲಿಕೆ ಹೀಗೆ….
ಆಸಕ್ತ ಅರ್ಹ ಅಭ್ಯರ್ಥಿಗಳು ಈ ಮೇಲೆ ತಿಳಿಸಲಾದ ಎಲ್ಲಾ ದಾಖಲೆಗಳ ಜೊತೆಗೆ ಫೆ.03, 04ಕ್ಕೆ ಕಕರಸಾ ನಿಗಮದ ಹಳೆ ಬಸ್ ನಿಲ್ದಾಣದ ಬೀದರ ವಿಭಾಗೀಯ ಕಚೇರಿಯಲ್ಲಿ ನಡೆಯಲಿರುವ ಸಂದರ್ಶನಕ್ಕೆ ಹಾಜರಾಗುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹದು.