ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ(ಕೆಎಂಎಫ್ ಶಿಮುಲ್)ದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.
ವಿವಿಧ ವೃಂದಗಳಲ್ಲಿ ಸಹಾಯಕ ವ್ಯವಸ್ಥಾಪಕರು, ವಿಸ್ತರಣಾಧಿಕಾರಿಗಳು, ಕೆಮಿಸ್ಟ್, ಕಿರಿಯ ಸಿಸ್ಟಮ್ ಆಪರೇಟರ್ ಹಾಗೂ ಕಿರಿಯ ತಾಂತ್ರಿಕರು ಸೇರಿದಂತೆ ಇತರೆ ಒಟ್ಟು 27 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಶಿಮುಲ್ ಅಧಿಕೃತ ಜಾಲತಾಣ https://virtualofficeerp.com/shimul_2025/instructionಕ್ಕೆ ಭೇಟಿ ನೀಡಿ. ಸೆ.29ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 29, 2025
ಹುದ್ದೆಗಳ ವಿವರ ಹಾಗೂ ಶೈಕ್ಷಣಿಕ ಅರ್ಹತೆ:
✓ ಸಹಾಯಕ ವ್ಯವಸ್ಥಾಪಕರು(ಎಫ್ ಅಂಡ್ಎಫ್) [03 ಹುದ್ದೆಗಳು] – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ (ಕೃಷಿ) ಪದವಿ ಹೊಂದಿರಬೇಕು.
✓ ವಿಸ್ತರಣಾಧಿಕಾರಿ ದರ್ಜೆ(3) [05 ಹುದ್ದೆಗಳು] – ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿ ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
✓ ಕೆಮಿಸ್ಟ್ ದರ್ಜೆ-2 (ಕೆಮಿಸ್ಟ್ರಿ) [04 ಹುದ್ದೆಗಳು] – ಬಿ.ಎಸ್ಸಿ ಪದವಿಯಲ್ಲಿ ರಸಾಯನಶಾಸ್ತ್ರ ಒಂದು ವಿಷಯವನ್ನಾಗಿ ವ್ಯಾಸಂಗ ಮಾಡಿರುವುದರ ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
✓ ಕೆಮಿಸ್ಟ್ ದರ್ಜೆ-2 (ಮೈಕ್ರೋಬಯಾಲಜಿ) [02 ಹುದ್ದೆಗಳು] –ಬಿ.ಎಸ್ಸಿ ಪದವಿಯಲ್ಲಿ ಮೈಕ್ರೋಬಯಾಲಜಿ ಒಂದು ವಿಷಯವನ್ನಾಗಿ ಅಧ್ಯಯನ ಮಾಡಿರಬೇಕು ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
✓ ಕಿರಿಯ ಸಿಸ್ಟಂ ಆಪರೇಟರ್ – [03 ಹುದ್ದೆಗಳು] – ಯಾವುದೇ ಪದವಿಯೊಂದಿಗೆ ಕನಿಷ್ಟ ಒಂದು ವರ್ಷದ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್ ಹಾಗೂ 03 ವರ್ಷಗಳ ಸೇವಾನುಭವ ಹೊಂದಿರಬೇಕು.
✓ ಕಿರಿಯ ತಾಂತ್ರಿಕರು (ಎಲೆಕ್ಟಿಕಲ್) [05 ಹುದ್ದೆಗಳು] – ಎಸ್.ಎಸ್.ಎಲ್.ಸಿಯೊಂದಿಗೆ ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಪ್ರಮಾಣ ಪತ್ರ ಹೊಂದಿರಬೇಕು.
✓ ಕಿರಿಯ ತಾಂತ್ರಿಕರು ರೆಫ್ರಿಜರೇಷನ್ (ಎಂ.ಆರ್.ಎ.ಸಿ) [02 ಹುದ್ದೆಗಳು] –ಎಸ್.ಎಸ್.ಎಲ್.ಸಿಯೊಂದಿಗೆ ಡೈರೆಕ್ಟೋರೇಟ್ ಜನರಲ್ ಆಫ್ ಎಂಪ್ಲಾಯ್ಮೆಂಟ್ ಅಂಡ್ ಟ್ರೈನಿಂಗ್ ಇವರಿಂದ ರೆಫ್ರಿಜರೇಷನ್ ಟ್ರೇಡ್ನಲ್ಲಿ ತೇರ್ಗಡೆ ಹೊಂದಿ ಕಡ್ಡಾಯವಾಗಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ (ಎನ್.ಟಿ.ಸಿ) ಅಥವಾ ಪ್ರಾವಿಜನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಅಥವಾ ನ್ಯಾಷನಲ್ ಕೌನ್ಸಿಲ್ ಫಾರ್ ವೆಕೇಷನಲ್ ಟ್ರೈನಿಂಗ್ (ಎನ್.ಸಿ.ವಿ.ಟಿ) ಸರ್ಟಿಫಿಕೇಟ್ ಪಡೆದಿರಬೇಕು.
✓ ಕಿರಿಯ ತಾಂತ್ರಿಕರು ( ಬಾಯ್ಲರ್ ಅಟೆಂಡೆಂಟ್) – [03 ಹುದ್ದೆಗಳು] – ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿಯೊಂದಿಗೆ ನಿರ್ದೇಶಕರು, ಬಾಯರ್ ಮತ್ತು ಕಾರ್ಖಾನೆ ಇವರಿಂದ ಬಾಯರ್ ಆಟೆಂಡೆಂಟ್ ದರ್ಜೆ-2 ಅಥವಾ ದರ್ಜೆ-1 ರ ಪ್ರಮಾಣ ಪತ್ರ ಪಡೆದಿರಬೇಕು ಅಥವಾ ಎಸ್.ಎಸ್.ಎಲ್.ಸಿಯೊಂದಿಗೆ ಬಾಯ್ಸರ್ ಅಟೆಂಡೆಂಟ್ ಟ್ರೇಡ್ನಲ್ಲಿ ಪ್ರಾವಿಜನಲ್/ನ್ಯಾಷನಲ್ ಶಿಶಿಕ್ಷು(ಅಪ್ರೆಂಟಿಸ್) ಪ್ರಮಾಣ ಪತ್ರ ಹೊಂದಿರಬೇಕು.
ವಯೋಮಿತಿ:
29-09-2025 ರಂತೆ;
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 – ಗರಿಷ್ಠ ಮಿತಿ – 40 ವರ್ಷಗಳು ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ – ಗರಿಷ್ಠ ಮಿತಿ – 38 ವರ್ಷಗಳು ಸಾಮಾನ್ಯ ವರ್ಗ – ಗರಿಷ್ಠ ಮಿತಿ – 35 ವರ್ಷಗಳು
ವಯೋಮಿತಿ ಸಡಿಲಿಕೆ: ಪ.ಜಾತಿ, ಪ.ಪಂಗಡ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ – 5 ವರ್ಷಗಳು ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ – 3 ವರ್ಷಗಳು ವಿಧವೆಯರು ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ – 10 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಸಂಬಳ:
ಸಹಾಯಕ ವ್ಯವಸ್ಥಾಪಕರು(ಎಫ್ ಅಂಡ್ಎಫ್) – ವೇತನ ಶ್ರೇಣಿ ರೂ.83700-155200 ವಿಸ್ತರಣಾಧಿಕಾರಿ ದರ್ಜೆ-3 – ವೇತನ ಶ್ರೇಣಿ ರೂ.54175-99400 ಕೆಮಿಸ್ಟ್ ದರ್ಜೆ-2 (ಕೆಮಿಸ್ಟ್ರಿ) – ವೇತನ ಶ್ರೇಣಿ ರೂ.44425-83700 ಕೆಮಿಸ್ಟ್ ದರ್ಜೆ-2 (ಮೈಕ್ರೋಬಯಾಲಜಿ) – ವೇತನ ಶ್ರೇಣಿ ರೂ.44425-83700 ಕಿರಿಯ ಸಿಸ್ಟಂ ಆಪರೇಟರ್ – ವೇತನ ಶ್ರೇಣಿ ರೂ.44425-83700 ಕಿರಿಯ ತಾಂತ್ರಿಕರು (ಎಲೆಕ್ನಿಕಲ್) – ವೇತನ ಶ್ರೇಣಿ ರೂ.34100-67600 ಕಿರಿಯ ತಾಂತ್ರಿಕರು ರೆಫ್ರಿಜರೇಷನ್ (ಎಂ.ಆರ್.ಎ.ಸಿ)- ವೇತನ ಶ್ರೇಣಿ ರೂ.34100-67600 ಕಿರಿಯ ತಾಂತ್ರಿಕರು (ಬಾಯ್ಸರ್ ಅಟೆಂಡೆಂಟ್) – ವೇತನ ಶ್ರೇಣಿ ರೂ.34100-67600
ಅರ್ಜಿ ಶುಲ್ಕ:
ಪ.ಜಾತಿ, ಪ.ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ – 500ರೂ.
ಇತರೆ ವರ್ಗದ ಅಭ್ಯರ್ಥಿಗಳಿಗೆ – 1000ರೂ.
ಅರ್ಜಿ ಸಲ್ಲಿಕೆ ಹೇಗೆ?
SHIMUL ಅಧಿಕೃತ ಜಾಲತಾಣ https://virtualofficeerp.com/shimul_2025/instruction ಕ್ಕೆ ಭೇಟಿ ನೀಡಿ.
ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
ನಂತರ ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯ ಮೇಲೆ ಅನ್ವಯಿಸು ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
• ಅಂತಿಮವಾಗಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.