ಪ್ರೀತಿಯ ಸ್ಪರ್ಧಾರ್ಥಿಗಳೇ, ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ ಆದರೆ ಕಾರಣಾಂತರದಿಂದ ಅರ್ಜಿ ಸ್ವೀಕೃತಿ ಅಥವಾ Application ID ಕಳೆದು ಕೊಂಡಿದ್ದೇನೆ ಎಂದು ಹಲವಾರು ಅಭ್ಯರ್ಥಿಗಳು ನಮಗೆ ಮೆಸೇಜ್ ಮಾಡುವ ಮೂಲಕ ಕೇಳುತಿದ್ದೀರಿ.. ಎಲ್ಲರಿಗೂ ವೈಯಕ್ತಿಕವಾಗಿ ಮೆಸೇಜ್ ಮಾಡುವ ಮೂಲಕ ಉತ್ತರಿಸಲು ಕಷ್ಟದಾಯಕವಾಗಿರುವುದರಿಂದ ಈ ಲೇಖನದ ಮೂಲಕ ನಿಮ್ಮಂತ ಹಲವು ಸ್ಪರ್ಧಾರ್ಥಿಗಳಿಗೆ ಏಕಕಾಲಕ್ಕೆ ಉತ್ತರಿಸುವ ಪ್ರಯತ್ನ. ಈ ಮಾಹಿತಿ ನಿಮಗೆ ಸಹಾಯವಾಗಬಹುದು ಎಂದು ನಾವು ಭಾವಿಸಿದ್ದೇವೆ.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿದ ಅಪ್ಲಿಕೇಶನ್ ಐಡಿ ಹೇಗೆ ತಿಳಿದುಕೊಳ್ಳಬಹುದು ಎಂಬುದರ ಕುರಿತು ಈ ಕೆಳಗೆ ಹಂತ ಹಂತವಾಗಿ ವಿವರಿಸಿದ್ದೇವೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಅಗತ್ಯ, ಈ ಲೇಖನ ಇತರರಿಗೂ ತಪ್ಪದೇ ಹಂಚಿಕೊಳ್ಳುವ ಮೂಲಕ ಬೆಂಬಲಿಸಿ.
How to Know VA Application ID Number (Step By Step Process)
ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ “VAO Application ID” ಪಡೆದುಕೊಳ್ಳಬಹುದಾಗಿದೆ.
- ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ, (“Important Direct Links” ಶೀರ್ಷಿಕೆಯಡಿಯಲ್ಲಿ ನೀಡಲಾಗಿದೆ)
- ನಂತರ “Search For Application ID” ಮೇಲೆ ಕ್ಲಿಕ್ ಮಾಡಿ
- ಮುಂದೆ ನಿಮ್ಮ “Date Of Birth“, “SSLC Registration number” ಹಾಗೂ “Aadhar Number” (ಕೊನೆಯ 4 ಅಕ್ಷರ ಮಾತ್ರ) ಹಾಕಿ “Submit” ಮೇಲೆ ಕ್ಲಿಕ್ ಮಾಡಿ
- ಇವಾಗ ನಿಮ್ಮ ಆಧಾರ್ ಲಿಂಕ್/ರಿಜಿಸ್ಟರ್ ಮಾಡಿರುವ ನಂಬರ್’ಗೆ OTP ಬರುತ್ತೆ, “Enter OTP” ನ ಬಾಕ್ಸ್ ನಲ್ಲಿ OTP ಹಾಕಿ “Submit” ಮೇಲೆ ಕ್ಲಿಕ್ ಮಾಡಿ.
ಕೊನೆಗೆ ನಿಮ್ಮ “VAO Application ID” ನೀವು ರಿಜಿಸ್ಟರ್ ಮಾಡಿರುವ ನಂಬರ್’ಗೆ Messege ಮೂಲಕ ಬರುತ್ತೆ.
ಹಲವಾರು ಸ್ಪರ್ಧಾರ್ಥಿಗಳು ಏಕಕಾಲಕ್ಕೆ ಭೇಟಿ ನೀಡುವುದರಿಂದ ಅಧಿಕೃತ ವೆಬ್ ಸೈಟ್’ನಲ್ಲಿ ಸರ್ವರ್ ಸಮಸ್ಯೆ ಉಂಟಾಗುವುದು ಸಹಜ. ಒಂದು ವೇಳೆ ಸಮಸ್ಯೆ ಎದುರಾದಲ್ಲಿ ಕೆಲವು ಸಮಯದ ನಂತರ ಪ್ರಯತ್ನಿಸಿ.
Also Read: Karnataka Village Administrative Officer Syllabus 2024: ಗ್ರಾಮ ಲೆಕ್ಕಾಧಿಕಾರಿ/ಆಡಳಿತ ಅಧಿಕಾರಿ ಪಠ್ಯಕ್ರಮ
Important Direct Links:
Know Your VAO Application ID Check Link-1 | Click Here |
VA Application ID Number Check Link -2 (Direct Link) | Click Here |
VA Recruitment Notification 2024 | Details |
Check latest Updates | Karnataka Help.in |