KPSC AC AO SAAD key answer 2024: ಕರ್ನಾಟಕ ಲೋಕಸೇವಾ ಆಯೋಗವು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಗೆ ಸಂಬಂಧಿಸಿದ (ಉಳಿಕೆ ಮೂಲ ವೃಂದ) ಪತ್ರಿಕೆ -1 ಮತ್ತು 2ರ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿದೆ.
ಆಯೋಗವು ಆಗಸ್ಟ್ 11ರಂದು ನಡೆಸಿದ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರು ಮತ್ತು ಲೆಕ್ಕಪರಿಶೋಧನಾಧಿಕಾರಿ (ಗ್ರೂಪ್ -ಎ) ಹುದ್ದೆಗಳ ಪೂರ್ವಭಾವಿ ಪರೀಕ್ಷಾ ಪತ್ರಿಕೆ-I ಮತ್ತು2 ರ ಕೀ-ಉತ್ತರಗಳನ್ನು ಅಯೋಗದ ಅಧಿಕೃತ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಅಧಿಕೃತ kpsc.kar.nic.in ವೆಬ್‌ಸೈಟ್ ಮೂಲಕ ಕೀ ಉತ್ತರಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ಅಭ್ಯರ್ಥಿಗಳು ಸದರಿ ಕೀ ಉತ್ತರಗಳ ಮೇಲೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಕೀ ಉತ್ತರಗಳ ಮೇಲಿನ ಆಕ್ಷೇಪಣೆಯನ್ನು ಸಲ್ಲಿಸಲು ಅಯೋಗದ ಅಧಿಕೃತ ಅಂಚೆ ವಿಳಾಸಕ್ಕೆ ಸಲ್ಲಿಸಬಹುದು. ಈ ಲೇಖನದಲ್ಲಿ ಕೀ ಉತ್ತರಗಳನ್ನು ಡೌನ್ ಲೋಡ್ ಮಾಡುವುದು ಹೇಗೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವುದು ಹೇಗೆ ಎಂದು ಕುರಿತು ಮಾಹಿತಿ ನೀಡಲಾಗಿದ್ದು, ಗಮನವಿಟ್ಟು ಓದಿರಿ.
ಮೊದಲಿಗೆ ಅಧಿಕೃತ ವೆಬ್ ಸೈಟ್ https://kpsc.kar.nic.in/ ಗೆ ಭೇಟಿ ನೀಡಿ.
ಮುಖಪುಟದಲ್ಲಿ ಕಾಣಿವ What’s News ವಿಭಾಗದಲ್ಲಿ ‘Kye answers’ ಲಿಂಕ್ ಕ್ಲಿಕ್ ಮಾಡಿ.
ನಂತರ ‘KEY ANSWERS FOR THE POST OF ASSISTANT CONTROLLER & AUDIT OFFICER(RPC) EXAMINATION HELD ON 11-08-2024’ ಆಯ್ಕೆ ಮಾಡಿ.
ಕೊನೆಯಲ್ಲಿ ಕೀ ಉತ್ತರಗಳ PDF ಡೌನ್‌ಲೋಡ್ ಮಾಡಿ.
ಕೀ ಉತ್ತರಗಳ ಮೇಲಿನ ಆಕ್ಷೇಪಣೆಯನ್ನು ಸಲ್ಲಿಸುವುದು ಹೇಗೆ..?
ಕೀ ಉತ್ತರಗಳ ಮೇಲಿನ ಆಕ್ಷೇಪನೆಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟಿನಲ್ಲಿ ಆಕ್ಷೇಪಣೆ ಫಾರಂ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಸೂಕ್ತ ದಾಖಲೆಗಳೊಂದಿಗೆ ಅಂಚೆಯ ಮೂಲಕ ಅಧಿಕೃತ ವಿಳಾಸಕ್ಕೆ ಕಳುಹಿಸಬೇಕು.
ಆಕ್ಷೇಪಣೆ ಅರ್ಜಿ ಸಲ್ಲಿಸುವ ಕಚೇರಿ ವಿಳಾಸ
ಪರೀಕ್ಷಾ ನಿಯಂತ್ರಕರು ಕರ್ನಾಟಕ ಲೋಕಸೇವಾ ಆಯೋಗ ಉದ್ಯೋಗಸೌಧ, ಬೆಂಗಳೂರು – 560001