ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ(CBI)ದಲ್ಲಿ ಸ್ಪೇಷಲಿಸ್ಟ್‌ ಆಫೀಸರ್‌ ನೇಮಕಾತಿ

275 ಸ್ಥಾನಗಳಿಗೆ ಭರ್ತಿ

Published on:

ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕಾಗಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವಿವಿಧ ವಿಭಾಗಗಳಿಗೆ ಸ್ಪೇಷಲಿಸ್ಟ್‌ ಆಫೀಸರ್‌(ಎಸ್‌ಒ) ಹುದ್ದೆಗಳ ಭರ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟು 275 ಹುದ್ದೆಗಳಿಗೆ ಪದವೀಧರ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಬ್ಯಾಂಕಿನ ಅಧಿಕೃತ ಜಾಲತಾಣ(https://centralbank.bank.in/)ದಲ್ಲಿ ಲಭ್ಯವಿರುವ ಅಧಿಸೂಚನೆಯಲ್ಲಿ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ, ಅಭ್ಯರ್ಥಿಗಳು ಮಾ.23 ರೊಳಗೆ IBPS ಅಧಿಕೃತ ವೆಬ್‌ಸೈಟ್ ಲಿಂಕ್‌ https://ibpsreg.ibps.in/cbisofeb26/ನ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಫೆಬ್ರವರಿ 28, 2026
  • ಅರ್ಜಿ ಸಲ್ಲಿಸಲು‌ ಕೊನೆಯ ದಿನಾಂಕ – ಮಾರ್ಚ್ 23, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಮಾರ್ಚ್ 23, 2026
  • ಆನ್‌ಲೈನ್ ಪರೀಕ್ಷೆಯ ದಿನಾಂಕ – ಏಪ್ರಿಲ್ 2026
  • ಸಂದರ್ಶನದ ತಾತ್ಕಾಲಿಕ ದಿನಾಂಕ – ಏಪ್ರಿಲ್ 2026

ಹುದ್ದೆಗಳ ವಿವರ:

ಸಾಫ್ಟ್‌ವೇರ್ ಡೆವಲಪರ್ (ಜಾವಾ ಡೆವಲಪರ್)-13
ಮೊಬೈಲ್ ಡೆವಲಪರ್- ಆಂಡ್ರಾಯ್ಡ್/ಐಒಎಸ್-03
ಸಾಫ್ಟ್‌ವೇರ್ ಡೆವಲಪರ್ (ಡೆವಲಪರ್ ಡಾಟ್ ನೆಟ್-06
ಡೇಟಾಬೇಸ್ ಆಡಳಿತ-11
ಡಿಜಿಟಲ್ ಚಾನೆಲ್ ಮ್ಯಾನೇಜರ್ / ಡಿಜಿಟಲ್ ಅಪ್ಲಿಕೇಶನ್ ತಜ್ಞ-23
ಲಿನಕ್ಸ್/ಸೋಲಾರಿಸ್/SAN/ಸಂಗ್ರಹಣೆ/SRE/Open ಶಿಫ್ಟ್-14
ವಿಂಡೋಸ್/ಎಡಿ-05
ಕ್ಲೌಡ್ ಮ್ಯಾನೇಜರ್-05
ಮಾಹಿತಿ ಭದ್ರತೆ, ಸೈಬರ್ ಭದ್ರತೆ ಮತ್ತು ಐಟಿ ಆಡಳಿತ, ರಿಸ್ಕ್-38
ನೆಟ್‌ವರ್ಕ್ ನಿರ್ವಾಹಕರು/ನೆಟ್‌ವರ್ಕ್ ಭದ್ರತೆ – 05ಉತ್ಪಾದನಾ ಬೆಂಬಲ/ROC/ಡಿಜಿಟಲ್ಬೆಂಬಲ -26
ಎಂಟರ್‌ಪ್ರೈಸ್/ಏಕೀಕರಣ/ಸಾರ್ವಜನಿಕ ಕ್ಲೌಡ್ ವಾಸ್ತುಶಿಲ್ಪಿ-06
DevSecOps-04
ವೆಬ್ ಸರ್ವರ್/ವೆಬ್ ಲಾಜಿಕ್ ನಿರ್ವಾಹಕ-03
ಡೇಟಾ ಆರ್ಕಿಟೆಕ್ಟ್-02
ಡೇಟಾ ಇಂಜಿನಿಯರ್/ಡೇಟಾ ಗುಣಮಟ್ಟ/ಇಟಿಎಲ್/ಪಿಎಲ್‌ಎಸ್‌ಕ್ಯೂಎಲ್/ಬಿಐ-15
ಡೇಟಾ ವಿಜ್ಞಾನಿ-06
ಜನರಲ್ ಎಐ-02
ಐಟಿ ಆಫೀಸರ್-82
ರಿಸ್ಕ್ ಮ್ಯಾನೇಜರ್-04
ತೆರಿಗೆ/ಸಿಎ-02

ಒಟ್ಟು – 275 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಬಿ.ಇ ಅಥವಾ ಬಿ.ಟೆಕ್/ಸ್ನಾತಕೋತ್ತರ ಡಿಪ್ಲೊಮಾ/ಸ್ನಾತಕೋತ್ತರ ಪದವಿ/ಎಂಸಿಎ/ಎಂಬಿಎ/ಎಂಎಂಎಸ್/ಸಿಎ ಪೂರ್ಣಗೊಳಿಸಿರಬೇಕು.

ಹುದ್ದೆಗಳ ಆಧಾರಿತ ವಿದ್ಯಾರ್ಹತೆಯ ಮಾಹಿತಿಗಾಗಿ ತಪ್ಪದೇ ಅಧಿಕೃತ ಅಧಿಸೂಚನೆ ಓದಿರಿ.

ವಯೋಮಿತಿ:

31-01-2026ರಂತೆ;

ಸ್ಕೇಲ್ IV ಹುದ್ದೆಗಳಿಗೆ ಗರಿಷ್ಠ ಮಿತಿ – 45 ವರ್ಷಗಳು
ಸ್ಕೇಲ್ III ಹುದ್ದೆಗಳಿಗೆ ಗರಿಷ್ಠ ಮಿತಿ – 35 ವರ್ಷಗಳು
ಸ್ಕೇಲ್ II ಹುದ್ದೆಗಳಿಗೆ ಗರಿಷ್ಠ ಮಿತಿ – 35 ವರ್ಷಗಳು
ಸ್ಕೇಲ್ I ಹುದ್ದೆಗಳಿಗೆ ಗರಿಷ್ಠ ಮಿತಿ – 30 ವರ್ಷಗಳು

ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪ.ಜಾತಿ ಹಾಗೂ ಪ. ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 10 ವರ್ಷಗಳು.

ಆಯ್ಕೆ ಪ್ರಕ್ರಿಯೆ:

  • ಆನ್ಲೈನ್ ಪರೀಕ್ಷೆ
  • ಸಂದರ್ಶನ

ಸಂಬಳ:

ಸ್ಕೇಲ್ IV ಹುದ್ದೆಗಳಿಗೆ – ₹1,02,300-1,20,940
ಸ್ಕೇಲ್ III ಹುದ್ದೆಗಳಿಗೆ – ₹85,920-1,05,280
ಸ್ಕೇಲ್ II ಹುದ್ದೆಗಳಿಗೆ – ₹64,820-93,960
ಸ್ಕೇಲ್ I ಹುದ್ದೆಗಳಿಗೆ – ₹48,480-85,920

ಅರ್ಜಿ ಶುಲ್ಕ:

ಪ.ಜಾತಿ, ಪ.ಪಂಗಡ, ಪಿಡಬ್ಲ್ಯೂಬಿಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ-₹175
ಉಳಿದ ಎಲ್ಲಾ ಅಭ್ಯರ್ಥಿಗಳಿಗೂ-₹850

ಅರ್ಜಿ ಸಲ್ಲಿಕೆ ಹೇಗೆ.?

• IBPS ಅಧಿಕೃತ ವೆಬ್ ಸೈಟ್ https://ibpsreg.ibps.in/cbisofeb26/ಗೆ ಭೇಟಿ ನೀಡಿ.

• ನಂತರ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ ನಮೂದಿಸಿ. ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.

• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಭವಿಷ್ಯದ ಉಲ್ಲೇಖಕ್ಕಾಗಿ ಡೌನ್ಲೋಡ್ ಮಾಡಿ ಮುದ್ರಿಸಿ.

Important Direct Links:

Official Notification PDFDownload
Online Application Form LinkApply Now
Official Websitehttps://centralbank.bank.in/
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment