ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಗ್ರೇಡ್-1) ಗ್ರೂಪ್-‘ಎ’ ಉಳಿಕೆ ಮೂಲ ವೃಂದದ ಒಟ್ಟು 30 ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗವು ಫೆ.24, 25, 27, 28ರಂದು ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯನ್ನು ನಡೆಸಲಿದೆ. ಸದರಿ ಪರೀಕ್ಷೆಯ ಪ್ರವೇಶ ಪತ್ರ(KPSC AEE Hall Ticket 2025)ವನ್ನು ಆಯೋಗವು ಫೆ.17ರಂದು ಬಿಡುಗಡೆ ಮಾಡಿದೆ.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕೆ.ಪಿ.ಎಸ್.ಸಿ.ಯ ಅಂತರ್ಜಾಲ kpsc.kar.nic.in ಮೂಲಕ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಲು ತಿಳಿಸಿದೆ. ಹೇಗೆ ಡೌನ್ಲೋಡ್ ಮಾಡುವುದು ಎಂಬುದರ ಕುರಿತು ಈ ಕೆಳಗೆ ತಿಳಿಸಿದೆ.