KPSC AO AAO Exam 2025: ಕೃಷಿ ಇಲಾಖೆ ಹುದ್ದೆಗಳ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ

ಕರ್ನಾಟಕ ಲೋಕಸೇವಾ ಆಯೋಗವು ಬಿಡುಗಡೆ ಮಾಡಿದ ಪರೀಕ್ಷಾ ದಿನಾಂಕಗಳ ಕುರಿತು ಮಾಹಿತಿ ಇಲ್ಲಿದೆ

Published on:

ಕೆಪಿಎಸ್ಸಿ 20-9-2024ರ ಅಧಿಸೂಚನೆಯ ಕೃಷಿ ಇಲಾಖೆಯಲ್ಲಿನ ಗ್ರೂಪ್-‘ಬಿ’ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ (ಉಳಿಕೆ ಮೂಲ ವೃಂದ, ಹೈ.ಕ) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿಯನ್ನು ಜು.31ರಂದು ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಡಾ.ವಿಶಾಲ್​.ಆರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೈ.ಕ ವೃಂದದ ಹುದ್ದೆಗಳಿಗೆ ಸೆ.6ರಂದು ಕನ್ನಡ ಭಾಷಾ ಪರೀಕ್ಷೆ, 7ಕ್ಕೆ ಸಾಮಾನ್ಯ ಮತ್ತು ನಿರ್ದಿಷ್ಟ ಪತ್ರಿಕೆ(ಶೇ.85ರಷ್ಟು ಹುದ್ದೆಗಳ), ಅ.4ಕ್ಕೆ ನಿರ್ದಿಷ್ಟ ಪತ್ರಿಕೆ(ಶೇ.15ರಷ್ಟು ಹುದ್ದೆಗಳ)ಗಳ ಪರೀಕ್ಷೆಗಳು ನಡೆಯಲಿವೆ ಹಾಗೂ ಸೆ.27ಕ್ಕೆ ಕನ್ನಡ ಭಾಷಾ ಪರೀಕ್ಷೆ, ಸೆ.28ಕ್ಕೆ ಸಾಮಾನ್ಯ ಮತ್ತು ನಿರ್ದಿಷ್ಟ ಪತ್ರಿಕೆ(ಶೇ.85ರಷ್ಟು ಹುದ್ದೆಗಳ), ಅ.5ಕ್ಕೆ ನಿರ್ದಿಷ್ಟ ಪತ್ರಿಕೆ(ಶೇ.15ರಷ್ಟು ಹುದ್ದೆಗಳ)ಗಳ ಪರೀಕ್ಷೆಗಳು ನಡೆಯಲಿವೆ ಎಂಬ ಮಾಹಿತಿ ನೀಡಿದ್ದಾರೆ.

ಆಸಕ್ತ ಅಭ್ಯರ್ಥಿಗಳು ಆಯೋಗದ ಅಧಿಕೃತ ಜಾಲತಾಣ https://kpsc.kar.nic.in/time-table.htmlಕ್ಕೆ ಭೇಟಿ ನೀಡುವ ಮೂಲಕ ವೇಳಾಪಟ್ಟಿ ಡೌನ್ಲೋಡ್​ ಮಾಡಿಕೊಳ್ಳಬಹುದಾಗಿದೆ.

KPSC AO AAO Exam Time Table 2025 Details

ವಿವರವಾದ ಪರೀಕ್ಷಾ ವೇಳಾಪಟ್ಟಿ ಈ ಕೆಳಗೆ ನೀಡಲಾಗಿದೆ;

ವಿಷಯ/ಪತ್ರಿಕೆಪರೀಕ್ಷಾ ದಿನಾಂಕಗಳುಪರೀಕ್ಷಾ ಸಮಯ
ಕನ್ನಡ ಭಾಷಾ ಪರೀಕ್ಷೆ
[ಶೇ.85 & ಶೇ.15 ರಷ್ಟು ಹುದ್ದೆಗಳ]
ಸೆಪ್ಟೆಂಬರ್​.6 (HK),
ಸೆ.27(RPC)
ಮಧ್ಯಾಹ್ನ 2ರಿಂದ 4ರವೆರೆಗೆ
ಸಾಮಾನ್ಯ ಪತ್ರಿಕೆ (ಪತ್ರಿಕೆ-1)
[ಶೇ.85 & ಶೇ.15 ರಷ್ಟು ಹುದ್ದೆಗಳ]
ಸೆ.7 (HK),
ಸೆ.28(RPC)
ಬೆಳಗ್ಗೆ10ರಿಂದ 11:30ರವರೆಗೆ
ನಿರ್ದಿಷ್ಟ ಪತ್ರಿಕೆ (ಪತ್ರಿಕೆ-2)
[ಶೇ.85ರಷ್ಟು ಹುದ್ದೆಗಳ]
ಸೆ.7 (HK),
ಸೆ.28(RPC)
ಮಧ್ಯಾಹ್ನ 2ರಿಂದ 4ರವೆರೆಗೆ
ನಿರ್ದಿಷ್ಟ ಪತ್ರಿಕೆ (ಪತ್ರಿಕೆ-2)
[ಶೇ.15 ರಷ್ಟು ಹುದ್ದೆಗಳ]
ಅಕ್ಟೋಬರ್​.4 (HK),
ಅ.5(RPC)
ಮಧ್ಯಾಹ್ನ 2ರಿಂದ 4ರವೆರೆಗೆ

Important Direct Links:

KPSC AO AAO Exam Time Table 2025(HK) PDFDownload
KPSC AO AAO Exam Time Table 2025(RPC) PDFDownload
Official Websitekpsc.kar.nic.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

1 thought on “KPSC AO AAO Exam 2025: ಕೃಷಿ ಇಲಾಖೆ ಹುದ್ದೆಗಳ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ”

Leave a Comment